Viral Video: ಮಮ್ಮಾ, ಎಷ್ಟು ಚೆಂದ ಹಚ್ಕೊಂಡಿದ್ದೀನಲ್ಲ ಈ ನೇಲ್​ಪೇಂಟ್?

Nail Paint : ಶಾಲೆಯಿಂದ ಬಂದ ಈ ಪುಟ್ಟಹುಡುಗಿ ಅಮ್ಮನಿಗೆ ಒಪ್ಪಿಸುವ ಈ ದಿನಚರಿಯಲ್ಲಿ ಏನಂಥ ವಿಶೇಷವಿದೆ? ನೋಡಿ ವಿಡಿಯೋ.

Viral Video: ಮಮ್ಮಾ, ಎಷ್ಟು ಚೆಂದ ಹಚ್ಕೊಂಡಿದ್ದೀನಲ್ಲ ಈ ನೇಲ್​ಪೇಂಟ್?
ಹೆಂಗಿದೆ ನನ್ನ ನೇಲ್​ ಪೇಂಟ್?
Updated By: ಶ್ರೀದೇವಿ ಕಳಸದ

Updated on: Aug 15, 2022 | 1:40 PM

Viral Video : ಈಗಷ್ಟೇ ಈ ಪುಟ್ಟ ಹುಡುಗಿ ಶಾಲೆಯಿಂದ ಮನೆಗೆ ಹಿಂದಿರುಗಿದ್ದಾಳೆ. ದಿನದ ವರದಿಯನ್ನು ಒಪ್ಪಿಸುತ್ತಿರುವಾಗ ಅಮ್ಮ ವಿಡಿಯೋ ಮಾಡಿದ್ಧಾಳೆ. ತನ್ನ ಸಹಪಾಠಿಯೊಬ್ಬಳು ಮೆಹಂದಿ ಹಾಕಿಕೊಂಡು ಬಂದಿದ್ದನ್ನು ಹೇಳುತ್ತಾ, ‘ಮಮ್ಮಾ ಈವತ್ತು ಒಂದು ಹುಡುಗಿ ಮೆಹಂದಿ ಹಾಕಿಕೊಂಡು ಬಂದಿದ್ದಳು. ಬಹಳ ಸುಂದರವಾಗಿದೆ ಮಗು ಎಂದು ಟೀಚರ್ ಹೇಳಿದರು ಎಂದು ಹೇಳುತ್ತ, ನಾನೂ ಉಗುರುಬಣ್ಣ ಹಚ್ಚಿಕೊಂಡಿದ್ದೇನಲ್ವಾ?’  ಎಂದು ಕೇಳುತ್ತಾಳೆ. ಎಲ್ಲಿ ತೋರಿಸು ನಿನ್ನ ಉಗುರು ಎಂದು ಅಮ್ಮ ಉಗುರನ್ನು ನೋಡುತ್ತಾಳೆ. ಯಾರು ಹಚ್ಚಿದ್ದು ಎಂದು ಪ್ರಶ್ನಿಸಿದಾಗ ನಾನೇ ಹಚ್ಚಿಕೊಂಡಿದ್ದು ಎಂದು ಉತ್ತರಿಸುತ್ತಾಳೆ. ಎಷ್ಟು ಚೆಂದ ಇದೆಯಲ್ಲವಾ? ಎಂದು ಖುಷಿಯಿಂದ ಮರುಪ್ರಶ್ನಿಸುತ್ತಾಳೆ. ಈ ಹುಡುಗಿಯ ಹೆಸರು ಕುಕಾ ಸಿಂಗ್. ಕ್ಯೂಟ್ ಕುಕಾ ಸಿಂಗ್ ಎಂಬ ಟ್ವಿಟರ್ ಪೋಸ್ಟ್​ನಲ್ಲಿ ಈ ವಿಡಿಯೋ ಅಪ್​ಲೋಡ್ ಆಗಿದೆ. 1,30,000 ಫಾಲೋವರ್ಸ್ ಅನ್ನು ಈಕೆ ಹೊಂದಿದ್ದಾಳೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ತನ್ನ ಉಗುರುಬಣ್ಣವನ್ನು ನೋಡಿ ಟೀಚರ್ ಹೊಗಳಿಲ್ಲ ಎನ್ನುವ ಬೇಸರದ ಮಧ್ಯೆಯೂ ತನ್ನ ಗೆಳತಿ ಹಚ್ಚಿಕೊಂಡಿದ್ದ ಮೆಹಂದಿಯನ್ನು ಟೀಚರ್ ಹೊಗಳಿದರು ಎನ್ನುವುದನ್ನು ಸಂಭ್ರಮಿಸಿ ಹೇಳುವಾಗ ಹೊಮ್ಮುವ ಆ ಮುದ್ದಾದ ಎಕ್ಸ್​ಪ್ರೆಷನ್ ಗಮನಿಸಿದಿರಾ?

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:40 pm, Mon, 15 August 22