Video: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

ಪುಟಾಣಿಗಳೇ ಹಾಗೆ, ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ. ಇದೀಗ ಈ ದೃಶ್ಯ ನೋಡಿದ್ರೆ ಮೈ ಜುಮ್ ಅನ್ನುತ್ತೆ. ಲಿಫ್ಟ್‌ನಲ್ಲಿ ಸಿಲುಕಿದ್ದ ಪುಟಾಣಿಗಳನ್ನು ರಕ್ಷಿಸಿ, ಅವರ ಪಾಲಿಗೆ ಈ ಪುಟ್ಟ ಬಾಲಕಿ ದೇವರಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ
ವೈರಲ್ ವಿಡಿಯೋ
Image Credit source: Instagram

Updated on: Feb 22, 2026 | 7:53 PM

ಮಕ್ಕಳು ಬಿಡಿ, ದೊಡ್ಡವರು ಕೂಡ ಎಷ್ಟೋ ಬಾರಿ ಈ ಲಿಫ್ಟ್‌ನಲ್ಲಿ ಸಿಲುಕಿ ಪರದಾಡುವ ಘಟನೆಗಳ ವಿಡಿಯೋ ವೈರಲ್ ಆಗುತ್ತಿರುತ್ತವೆ. ಆದರೆ ಈ ದೃಶ್ಯದಲ್ಲಿ ಪುಟಾಣಿಗಳಿಬ್ಬರು (little kids) ಲಿಫ್ಟ್‌ನಲ್ಲಿ ಸಿಲುಕಿದ್ದಾರೆ. ಆದರೆ ಇದೇ ವೇಳೆ ಪುಟ್ಟ ಬಾಲಕಿಯೊಬ್ಬಳು (little girl) ಸಮಯಪ್ರಜ್ಞೆ ಮೆರೆದು ಕಂದಮ್ಮಗಳನ್ನು ರಕ್ಷಿಸಿ ಅಪಾಯದಿಂದ ಪಾರು ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಪುಟ್ಟ ಬಾಲಕಿಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

The Tatva ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋದಲ್ಲಿ ಇಬ್ಬರು ಪುಟ್ಟ ಮಕ್ಕಳು ಒಳಗಿರುವಾಗಲೇ ಇದ್ದಕ್ಕಿದ್ದಂತೆ ಲಿಫ್ಟ್ ಸ್ಥಗಿತಗೊಂಡು ಬಾಗಿಲು ಮುಚ್ಚಿದೆ. ಇದೇ ವೇಳೆ ಪುಟ್ಟ ಬಾಲಕಿ ಲಿಫ್ಟ್‌ನ ನಡುವೆ ಕೈ ಹಾಗೂ ಕಾಲನ್ನು ತೂರಿಸಿ ಲಿಫ್ಟ್ ಒಪನ್ ಮಾಡಿದ್ದಾಳೆ. ಅಲ್ಲೇ ಇದ್ದ ಇಬ್ಬರೂ ಮಹಿಳೆಯರು ಈ ಪುಟಾಣಿ ಮಕ್ಕಳನ್ನು ರಕ್ಷಿಸುವಲ್ಲಿ ಸಹಾಯ ಮಾಡಿರುವುದನ್ನು ಕಾಣಬಹುದು. ಮಹಿಳೆಯರಿಬ್ಬರ ಸಹಾಯ ಪಡೆದು ಬಾಲಕಿ ಸೇರಿ ಲಿಫ್ಟ್‌ನಿಂದ ಪುಟ್ಟ ಮಕ್ಕಳನ್ನು ರಕ್ಷಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದಯವಿಟ್ಟು ಪುಟ್ಟ ಮಕ್ಕಳನ್ನು ಲಿಫ್ಟ್ ಹತ್ರ ಬಿಡ್ಬೇಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ದೇವರ ರೂಪದಲ್ಲಿ ಬಂದು ಪುಟಾಣಿ ಮಕ್ಕಳನ್ನು ರಕ್ಷಿಸಿದ ಬಾಲಕಿ, ಮೈ ಜುಮ್ ಎನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಧೈರ್ಯ ಎಲ್ಲಾ ಮಕ್ಕಳನ್ನು ಕಾಣ ಸಿಗಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:48 pm, Sun, 22 February 26