AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಾಟರಿ ಹೊಡೆಯಿತೋ!’ ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14

Iphone : ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದು ಒಬ್ಬರು, ಇಂಥ ಅದೃಷ್ಟ ನನಗೇ ಸಿಗಲಿ ಎಂದು ಮತ್ತೊಬ್ಬರು. ಈ ಟ್ವೀಟ್​ಗೆ ನೆಟ್ಟಿಗರ ಮಿಶ್ರಪ್ರತಿಕ್ರಿಯೆ ದೊರಕುತ್ತಿದೆ. ನೀವೇನಂತೀರಿ?

‘ಲಾಟರಿ ಹೊಡೆಯಿತೋ!’ ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14
Man Orders iPhone 13 From Flipkart Receives iPhone 14 Instead
TV9 Web
| Updated By: ಶ್ರೀದೇವಿ ಕಳಸದ|

Updated on: Oct 06, 2022 | 6:13 PM

Share

Trending : ಇತ್ತೀಚೆಗಷ್ಟೇ ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದವರಿಗೆ ಘಡಿ ಸೋಪ್​, ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದವರಿಗೆ ಒಂದು ಕೇಜಿ ಆಲೂಗಡ್ಡೆ ತಲುಪಿದ ವಿಷಯವನ್ನು ಓದಿದ್ದೀರಿ, ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ವಿಷಯ ಮಾತ್ರ ಸ್ವಲ್ಪ ಭಿನ್ನವಾಗಿದೆ. ವ್ಯಕ್ತಿಯೊಬ್ಬರು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಐಫೋನ್13, ಆದರೆ ಅವರಿಗೆ ಫ್ಲಿಪ್​ಕಾರ್ಟ್​ ಮೂಲಕ ತಲುಪಿದ್ದು ಐಫೋನ್​14! ಯಾರಿಗೆ ತಾನೆ ಅಚ್ಚರಿಯಾಗದು ಇಂಥ ವಿಷಯ. ರಸೀದಿಯ ಸ್ಕ್ರೀನ್​ ಶಾಟ್​ ಈಗ ಅಂತರ್ಜಾಲದ ಪೂರ್ತಿ ಹರಿದಾಡುತ್ತಿದೆ. ಭಾರತೀಯ ಹಬ್ಬಗಳ ನೆಪದಲ್ಲಿ ಎಲ್ಲ ಆನ್​ಲೈನ್​ ಮಳಿಗೆಗಳು ರಿಯಾಯ್ತಿ ದರದಲ್ಲಿ ಮಾರಾಟಮೇಳ ನಡೆಸಿರುವುದರ ಫಲ ಮತ್ತು ಮಾಯೆ ಇದು!

ಅದೃಷ್ಟ ಎನ್ನುವುದು ಇದಕ್ಕೇ. ಬಯಸಿದವರಿಗೆ ಅದು ಸಿಗುವುದಿಲ್ಲ. ಅನಿರೀಕ್ಷಿತಾಗಿ ಅದು ಇನ್ನ್ಯಾರನ್ನೋ ದೊರಕಿರುತ್ತದೆ. ಅಶ್ವಿನ್​ ಹೆಗಡೆ ಎಂಬುವವರು ಆ ದಿನ ತನ್ನ ಫಾಲೋವರ್ ಒಬ್ಬರು ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿ ಸ್ಕ್ರೀನ್ ಶಾಟ್ ಹಂಚಿಕೊಂಡರು. ಈ ಟ್ವೀಟ್​ ವೈರಲ್ ಆಗುತ್ತಿದ್ದಂತೆ ಅನೇಕರು ಇದನ್ನು ಮೊದಮೊದಲಿಗೆ ನಂಬಲಿಲ್ಲ. ಒಬ್ಬ ವ್ಯಕ್ತಿ ಆಪಲ್‌ ಸಂಸ್ಥೆಗೆ ತಮಾಷೆ ಮಾಡಿದ್ದಾರೆ- ‘ಐಫೋನ್​13 ಮತ್ತು ಐಫೋನ್14ರ ನಡುವೆ ಹೋಲಿಕೆ ಎಷ್ಟಿದೆಯೆಂದರೆ, 14 ಅನ್ನು 13 ಎಂದು ತಪ್ಪಾಗಿ ಭಾವಿಸಿ ಆರ್ಡರ್ ಮಾಡಿದ್ದಾರೆ. ಆಗ 13ರ ಬದಲಿಗೆ 14 ಅನ್ನು ಕಂಪೆನಿ ವಿತರಿಸಿದೆ’.

ಇನ್ನೊಬ್ಬರು, ‘ಐಫೋನ್ 13 ಬದಲಿಗೆ ಐಫೋನ್​14 ಪಡೆದ ವ್ಯಕ್ತಿ ಅದೃಷ್ಟವಂತ. ನಾನು ಇಂಥ ಅದೃಷ್ಟಶಾಲಿಯಾಗಲು ಬಯಸುತ್ತೇನೆ’ ಎಂದಿದ್ದಾರೆ. ಇನ್ನೂ ಕೆಲವರು, ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದಿದ್ದಾರೆ. ಮಗದೊಬ್ಬರು, ‘ಹಿಂದಿರುಗಿಸುವುದು ಒಳಿತು, ಯಾವುದೇ ರೀತಿಯ ವಾರೆಂಟಿಯನ್ನು ಕ್ಲೈಮ್ ಮಾಡಿಕೊಳ್ಳುವಾಗ ಸಮಸ್ಯೆ ಎದುರಾಗಬಹುದು’ ಎಂದಿದ್ದಾರೆ.

ಈ ಅದೃಷ್ಟ ನಿಮ್ಮದಾಗಿದ್ದರೆ ನೀವೇನು ಮಾಡುತ್ತಿದ್ದಿರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ