
ಪ್ರೀತಿ (love) ಕುರುಡು, ಈ ಪ್ರೀತಿಯಲ್ಲಿ ಬಿದ್ದವರಿಗೆ ಲೋಕ ಪರಿಜ್ಞಾನವೇ ಇಲ್ಲದೇ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳನ್ನು ನೋಡಿದಾಗ ಈ ಮಾತು ನಿಜವೆನಿಸುತ್ತದೆ. ಚಲಿಸುತ್ತಿರುವ ರೈಲಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾಲೇಜ್ ಕ್ಯಾಂಪಸ್‌ನಲ್ಲಿ ಅಸಭ್ಯವಾಗಿ ವರ್ತಿಸುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಪ್ರೇಮಿಗಳಿಬ್ಬರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಕಾಲೇಜ್ ಬಂಕ್ ಮಾಡಿ ಪ್ರೇಮಿಗಳಿಬ್ಬರೂ ನಡುಬೀದಿಯಲ್ಲೇ ರೊಮ್ಯಾನ್ಸ್ (romance) ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖಾರವಾಗಿಯೇ ಕಾಮೆಂಟ್ ಮಾಡಿ ಚಳಿ ಬಿಡಿಸಿದ್ದಾರೆ.
@manojsh28986262 ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಾಲೇಜ್ ಬಂಕ್ ಮಾಡಿ ಪಬ್ಲಿಕ್‌ನಲ್ಲೇ ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಕಿರಿದಾದ ಜನಸಂದಣಿಯಿಲ್ಲದ ಪ್ರದೇಶದಲ್ಲಿ ಯುವಕನೊಬ್ಬನು ತನ್ನ ಗೆಳತಿಯನ್ನು ಅಪ್ಪಿಕೊಳ್ಳುತ್ತಿರುವುದನ್ನು ಕಾಣಬಹುದು. ಆ ಬಳಿಕ ಯುವಕನು ಯುವತಿಯನ್ನು ಎತ್ತಿಕೊಂಡು ತಿರುಗಿಸಿದ್ದು, ಈ ದೃಶ್ಯವನ್ನು ಅಲ್ಲಿನ ನಿವಾಸಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ : ಆರ್‌ಸಿಬಿ ಗೆದ್ದ ಖುಷಿಗೆ ಪಬ್ಲಿಕ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಮಾಡಿದ ಪ್ರೇಮಿಗಳು
सड़क छाप आशिकों ने मोहल्ले की गलियों को ही इन्होंने पिकनिक पार्क बना दिया !!
कॉलेज का गोल मरकर एक्स्ट्रा क्लास का होमवर्क वाला वर्क पूरा कर रहे हैं !!
मोहल्ले में रहने वाले ने वीडियो बनाकर सोशल मीडिया पर कर दिया वायरल !!#ViralVideo #Soshalmidia pic.twitter.com/NuATaLwCax
— MANOJ SHARMA LUCKNOW UP🇮🇳🇮🇳🇮🇳 (@ManojSh28986262) June 2, 2025
ಜೂನ್ 2 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ಇದು ಅವರವರ ವೈಯುಕ್ತಿಕ ಸಮಸ್ಯೆ, ನಿಮಗೇನು ಸಮಸ್ಯೆ ಎಂದಿದ್ದಾರೆ. ಮತ್ತೊಬ್ಬರು, ಈಗ ಇವನಿಗೆ ಸಿಲಿಂಡರ್ ಎತ್ತಲು ಹೇಳಿದರೆ ಅಳುತ್ತಾನೆ, ಆದರೆ ಆ ಹುಡುಗಿಯನ್ನು ಹೇಗೆ ಎತ್ತುತ್ತಿದ್ದಾನೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ ಮಾತ್ರ ಈ ರೀತಿ ನಡೆಯಲು ಸಾಧ್ಯ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Thu, 5 June 25