
ಪ್ರೀತಿಯಲ್ಲಿ ಬಿದ್ದವರಿಗೆ ಜಗದ ಅರಿವೇ ಇರೋಲ್ಲ ಎಂಬ ಮಾತಿದೆ. ಈ ಮಾತಿಗೆ ಅನುಗುಣವಾಗಿ ಕೆಲ ಪ್ರೇಮಿಗಳು (Lovers) ಲೋಕದ ಪರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೇ ಮಿತಿ ಮೀರಿ ವರ್ತಿಸುತ್ತಿರುತ್ತಾರೆ. ಬೈಕ್‌ನಲ್ಲಿ ಕುಳಿತು ಕಿಸ್ಸಿಂಗ್ ಮಾಡ್ತಾ, ಮೆಟ್ರೋ, ರೈಲಿನಲ್ಲಿ ಕುಳಿತು ಹಗ್ಗಿಂಗ್, ಕಿಸ್ಸಿಂಗ್ ಅಂತ ಹುಚ್ಚಾಟ ಆಡುವ ಪ್ರೇಮಿಗಳ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದುಂಟು. ಇದೀಗ ಅಂತಹದ್ದೇ ದೃಶ್ಯವೊಂದು ಹರಿದಾಡುತ್ತಿದ್ದು, ಜೋಡಿ ಹಕ್ಕಿಯೊಂದು ನಮ್ಮ ಅಕ್ಕಪಕ್ಕದಲ್ಲಿ ಜನರಿದ್ದಾರೆ ಅನ್ನೋ ಪರಿಜ್ಞಾನವೇ ಇಲ್ಲದೆ ಬಸ್ಸಿನಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ (Lovers romance on the bus) ಮಾಡಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ಪ್ರೇಮಿಗಳ ಈ ಅತಿರೇಕದ ವರ್ತನೆಗೆ ಜನ ಛೀಮಾರಿ ಹಾಕಿದ್ದಾರೆ.
ಎಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಪ್ರೇಮಿಗಳಿಬ್ಬರು ಬಸ್ಸಿನ ಹಿಂಬದಿಯಲ್ಲಿ ಕುಳಿತು ಹಗ್ಗಿಂಗ್ ಕಿಸ್ಸಿಂಗ್ ಅಂತ ರೊಮ್ಯಾನ್ಸ್ ಮಾಡಿದ್ದು, ಇವರ ಈ ಹುಚ್ಚಾಟವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ಕುರಿತ ವಿಡಿಯೋವನ್ನು yours.jaans ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಸ್ಸಿನ ಹಿಂಬದಿ ಸೀಟಿನಲ್ಲಿ ಜೋಡಿಹಕ್ಕಿಯೊಂದು ರೊಮ್ಯಾನ್ಸ್ ಮಾಡ್ತಾ ಕುಳಿತಿರುವ ದೃಶ್ಯವನ್ನು ಕಾಣಬಹುದು. ಹೌದು ಲೋಕದ ಪರಿಜ್ಞಾನವೇ ಇಲ್ಲದೆ ಈ ಹುಡುಗ ಹುಡುಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸಿದ್ದು, ಇದನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್ ಮಾಡಿ ಹೋದ ಯುವಕ
ನಾಲ್ಕು ದಿನಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 18 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರೇನೋ ತಪ್ಪು ಮಾಡಿದ್ದಾರೆ, ಆದರೆ ಅದನ್ನು ರೆಕಾರ್ಡ್ ಮಾಡಿ ಏಕೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ಬೇಕಿತ್ತುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವವರಿಗೆ ಕಠಿಣ ಶಿಕ್ಷೆ ನೀಡಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಾಚಿಕೆಗೇಡಿನ ಸಂಗತಿʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Sat, 31 May 25