Viral: ಎಣ್ಣೆ ಏಟಲ್ಲಿ ಮೊಬೈಲ್ ಟವರ್ ಏರಿದ ಕುಡುಕ ಮಹಾಶಯ; ಮುಂದೇನಾಯ್ತ ನೋಡಿ
ಕುಡಿದ ಮತ್ತಿನಲ್ಲಿ ಈ ಕುಡುಕರು ಏನ್ ಮಾಡ್ತಾರೆ ಅನ್ನೋದು ಅವರಿಗೆಯೇ ಗೊತ್ತಿರಲ್ಲ. ಹೀಗೆ ಎಣ್ಣೆ ಏಟಲ್ಲಿ ಕುಡುಕ ಮಹಾಶಯರು ಮಾಡುವಂತಹ ಎಡವಟ್ಟುಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಎಣ್ಣೆ ನಶೆಯಲ್ಲಿ ಮೊಬೈಲ್ ಟವರ್ ಏರಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪೊಲೀಸರು ಬಂದು ಆತನನ್ನು ರಕ್ಷಣೆ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.

ಈ ಕುಡುಕರಿಗೆ ಕುಡಿದ ಮತ್ತಿನಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬ ಬಗ್ಗೆ ಅವರಿಗೆ ಅರಿವು ಕೂಡಾ ಇರಲ್ಲ. ಹೀಗೆ ಕೆಲವೊಬ್ಬರು ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರ ಮೇಲೆ ಕೈ ಮಾಡಿಯೋ ಅಥವಾ ಬೈದು, ತಮ್ಮ ಜೀವಕ್ಕೆಯೇ ಆಪತ್ತು ತಂದು ಒಂದಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಕುಡುಕ ಮಹಾಶಯರ ಇಂತಹ ಎಡವಟ್ಟುಗಳ ಸುದ್ದಿ ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಎಣ್ಣೆ ನಶೆಯಲ್ಲಿ ಮೊಬೈಲ್ ಟವರ್ ಏರಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪೊಲೀಸರು ಬಂದು ಆತನನ್ನು ರಕ್ಷಣೆ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿಯನ್ನು ಭೋಪಾಲ್‌ನ ಐಶ್‌ಬಾಗ್ ಪ್ರದೇಶದ ನಿವಾಸಿ 33 ವರ್ಷದ ವಿವೇಕ್ ಠಾಕೂರ್ ಎಂದು ಗುರುತಿಸಲಾಗಿದ್ದು, ಈತ ಜನವರಿ 30 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಜನರಲ್ಲಿ ಆತಂಕವನ್ನು ಸೃಷ್ಟಿದ್ದಾನೆ. ಈತನನ್ನು ಗಮನಿಸಿದ ಜನ ತಕ್ಷಣ ಪೊಲೀಸರಿಗೆ ಹಾಗೂ ಪಾಲಿಕೆಯವರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ತಂಡ ಆ ವ್ಯಕ್ತಿಯನ್ನು ಟವರ್‌ನಿಂದ ಕೆಳಗಿಳಿಸುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ಇದೀಗ ಆ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆಯ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
View this post on Instagram
ಇದನ್ನೂ ಓದಿ: ಹುಲಿಯಂತೆ ಕಾಣಲು ನಾಯಿಗಳಿಗೆ ಬಣ್ಣ ಬಳಿದ ಚೀನಾದ ಮೃಗಾಲಯ; ವಿಡಿಯೋ ವೈರಲ್
ವಿಜಯ್ ಪ್ರತಾಪ್ ಸಿಂಗ್ (vijaypsbaghel) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕುಡುಕನೊಬ್ಬ ಮೊಬೈಲ್ ಟವರ್‌ನ ತುತ್ತ ತುದಿಯನ್ನು ಏರಿ ಹುಚ್ಚಾಟವನ್ನು ಮೆರೆದಂತಹ ದೃಶ್ಯವನ್ನು ಕಾಣಬಹುದು. ಸದ್ಯ ಪೊಲೀಸರ ನೆರವಿನಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಕುಡುಕ ಮಹಾಶಯನ ಈ ಹುಚ್ಚಾಟಕ್ಕೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ