Viral: ಇದೆಲ್ಲಾ ನನ್ ಗರ್ಲ್‌ಫ್ರೆಂಡ್ ಐಡಿಯಾ; ಕುಂಭಮೇಳದಲ್ಲಿ ಬೇವಿನ ಕಡ್ಡಿ ಮಾರಿ ಒಂದು ವಾರದಲ್ಲಿ 40,000 ಗಳಿಸಿದ ಯುವಕ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಇಲ್ಲೊಂದು ವೈರಲ್ ಆಗಿದ್ದು, ಯುವಕನೊಬ್ಬ ಒಂದು ರೂಪಾಯಿ ಹೂಡಿಕೆಯಿಲ್ಲದೆ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಾಟ ಮಾಡಿ ಕೇವಲ ಒಂದು ವಾರದಲ್ಲಿ ಬರೋಬ್ಬರಿ 40 ಸಾವಿರ ರೂ. ಗಳಿಸಿದ್ದಾನೆ. ಇದೆಲ್ಲಾ ನನ್ನ ಗರ್ಲ್‌ಫ್ರೆಂಡ್ ಐಡಿಯಾ, ಈ ಯಶಸ್ಸಿಗೆ ಆಕೆಯೇ ಕಾರಣ ಎಂದು ಹೇಳಿಕೊಂಡಿದ್ದು, ಯುವಕನ ಈ ಮಾತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭಮೇಳ ನಡಿತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ಈ ಪವಿತ್ರ ಸ್ಥಳದಲ್ಲಿ ತೀರ್ಥ ಸ್ನಾನ ಮಾಡಲು ಪ್ರತಿನಿತ್ಯ ಲಕ್ಷಾಂತರ ಭಕ್ತರು, ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕೋಟ್ಯಾಂತ ಭಕ್ತರ ಆಗಮನದಿಂದ ಪ್ರಯಾಗ್‌ರಾಜ್ ವ್ಯಾಪಾರ ಕೇಂದ್ರವಾಗಿ ಬದಲಾಗಿದ್ದು, ಟೀ, ತಿಂಡಿ ತಿನಿಸು, ಹಾರಗಳು ಇತ್ಯಾದಿಗಳನ್ನು ಮಾರಾಟ ಮಾಡುವ ಮೂಲಕ ಹಲವರು ಹಣ ಸಂಪಾದನೆ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಒಂದು ರೂಪಾಯಿ ಹೂಡಿಕೆಯಿಲ್ಲದೆ ಕುಂಭಮೇಳದಲ್ಲಿ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಾಟ ಮಾಡಿ ಕೇವಲ ಒಂದು ವಾರದಲ್ಲಿ ಬರೋಬ್ಬರಿ 40 ಸಾವಿರ ರೂ. ಗಳಿಸಿದ್ದಾನೆ. ಇದೆಲ್ಲಾ ನನ್ನ ಗರ್ಲ್‌ಫ್ರೆಂಡ್ ಐಡಿಯಾ, ಈ ಯಶಸ್ಸಿಗೆ ಆಕೆಯೇ ಕಾರಣ ಎಂದು ಹೇಳಿಕೊಂಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಯುವಕನೊಬ್ಬ ಮಹಾಕುಂಭಮೇಳದಲ್ಲಿ ಒಂದು ರೂಪಾಯಿ ಹೂಡಿಕೆ ಮಾಡದೆ ಹಲ್ಲುಜ್ಜುವ ಬೇವಿನ ಕಡ್ಡಿಯನ್ನು ಮಾರಾಟ ಮಾಡುವ ಮೂಲಕ ಕೇವಲ ಒಂದು ವಾರದಲ್ಲಿ 40 ಸಾವಿರ ರೂ. ಹಣವನ್ನು ಗಳಿಸಿದ್ದಾನೆ. ಇದೆಲ್ಲಾ ನನ್ನ ಗರ್ಲ್‌ಫ್ರೆಂಡ್ ಐಡಿಯಾ, ಆಕೆ ಕೊಟ್ಟ ಸಲಹೆಯಿಂದ ನಾನು ಇಷ್ಟು ಹಣ ಸಂಪಾದನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಕುರಿತ ವಿಡಿಯೋವನ್ನು ಆದರ್ಶ್ ತಿವಾರಿ (adarshtiwari20244) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವಕ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಿ 30 ರಿಂದ 40 ಸಾವಿರ ರೂಪಾಯಿ ಗಳಿಸಿರುವುದಾಗಿ ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಒಂದು ರೂಪಾಯಿ ಬಂಡವಾಳ ಹಾಕದೆ ನೀನು ಹಣ ಸಂಪಾದನೆ ಮಾಡಬಹುದೆಂದು ಗರ್ಲ್‌ಫ್ರೆಂಡ್ ಕೊಟ್ಟ ಐಡಿಯಾವಿದು ಎಂದು ಹೇಳಿದ್ದಾನೆ.
ಇದನ್ನೂ ಓದಿ: ಹುಲಿಯಂತೆ ಕಾಣಲು ನಾಯಿಗಳಿಗೆ ಬಣ್ಣ ಬಳಿದ ಚೀನಾದ ಮೃಗಾಲಯ; ವಿಡಿಯೋ ವೈರಲ್
ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 10.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಂಥಾ ಒಳ್ಳೆಯ ಮನಸ್ಸಿನ ಯುವಕ, ಒಂದು ಕ್ಷಣವೂ ಯೋಚಿಸದೆ ಎಲ್ಲಾ ಕ್ರೆಡಿಟ್ ಗೆಳತಿಗೆ ಕೊಟ್ಟʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಗರ್ಲ್‌ಫ್ರೆಂಡ್ ನಿಜವಾಗಿಯೂ ಅರ್ಥಶಾಸ್ತ್ರಜ್ಞೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಬಲಿಷ್ಠ ಮಹಿಳೆ ಇದ್ದೇ ಇರುತ್ತಾಳೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ