Viral: ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಸರ್; ಪತ್ನಿಯ ಹಲ್ಲೆ, ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ

ಇತ್ತೀಚಿನ ದಿನಗಳಲ್ಲಿ ಹೆಂಡ್ತಿ ಗಂಡನ ಮೇಲೆ ಹಲ್ಲೆ ನಡೆಸುವ, ಬಾಯ್‌ಫ್ರೆಂಡ್‌ ಸಲುವಾಗಿ ಗಂಡನನ್ನೇ ಕೊಲೆ ಮಾಡುವುದು ಸೇರಿದಂತೆ ಪುರುಷರ ಮೇಲಾಗುವ ದೌರ್ಜನ್ಯಗಳ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಪತ್ನಿ ತನ್ನ ಗಂಡನಿಗೆ ಮನಬಂದಂತೆ ಥಳಿಸಿದ್ದಾಳೆ. ಹಲ್ಲೆಯ ದೃಶ್ಯವನ್ನು ಹಿಡನ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದು ನನ್‌ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಎಂದು ಪತಿರಾಯ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral: ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಸರ್; ಪತ್ನಿಯ ಹಲ್ಲೆ, ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ
ವೈರಲ್​​ ವಿಡಿಯೋ
Edited By:

Updated on: Apr 03, 2025 | 9:39 AM

ಮಧ್ಯಪ್ರದೇಶ, ಏ. 02: ಹಿಂದೆಲ್ಲಾ ಗಂಡ (husband) ಹೆಂಡತಿಯ (wife) ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡಂದಿರ, ಪುರುಷರ ಮೇಲಾಗುವ ದೌರ್ಜನ್ಯ(violence), ಮನಸಿಕ ಕಿರುಕುಳದ (harassment) ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಒಂದಷ್ಟು ಸಮಯಗಳ ಹಿಂದೆ ಟೆಕ್ಕಿ ಅತುಲ್‌ ಸುಭಾಷ್‌ (Atul Subhash) ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಯೊಂದು ನಡೆದಿತ್ತು. ಮಧ್ಯ ಪ್ರದೇಶದಲ್ಲಿ (Madhya Pradesh) ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಚಿನ್ನ, ಹಣಕ್ಕೆ ಬೇಡಿಕೆಯಿಟ್ಟು ಮಹಿಳೆಯೊಬ್ಬಳು ತನ್ನ ತಾಯಿ ಹಾಗೂ ಸಹೋದರನೊಂದಿಗೆ ಸೇರಿ ತನ್ನ ಗಂಡನ ಮೇಲೆಯೇ ಹಲ್ಲೆ ನಡೆಸಿದ್ದಾಳೆ. ಹೆಂಡತಿಯ ಕ್ರೌರ್ಯದ ಈ ದೃಶ್ಯವನ್ನು ಹಿಡನ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಬಳಿಕ ಕಂಪ್ಲೇಂಟ್‌ ಕೊಟ್ಟು ದಯವಿಟ್ಟು ನನ್‌ ಹೆಂಡ್ತಿಯಿಂದ ನನ್ನನ್ನು ಕಾಪಾಡಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಮಧ್ಯಪ್ರದೇಶದ ಪನ್ನಾ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಹೋದರ ಹಾಗೂ ತಾಯಿಯ ಜೊತೆ ಸೇರಿ ಮಹಿಳೆಯೊಬ್ಬಳು ಚಿನ್ನಾಭರಣ ಹಾಗೂ ಹಣ ಕೊಡುವಂತೆ ಒತ್ತಾಯಿಸಿ ತನ್ನ ಗಂಡನ ಮೇಲೆಯೇ ದೈಹಿಕ ಹಲ್ಲೆ ನಡೆಸಿದ್ದಾಳೆ. ಅಷ್ಟೇ ಅಲ್ಲದೆ ಗಂಡನಿಗೆ ಮಾನಸಿಕ ಹಿಂಸೆಯನ್ನು ಕೂಡ ನೀಡಿದ್ದಾಳೆ. ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ ಪತಿರಾಯ ದಯವಿಟ್ಟು ನನಗೆ ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ. ಲೊಕೇಶ್‌ ಎಂಬಾತನಿಗೆ ಆತನ ಪತ್ನಿ ಹರ್ಷಿತಾ ಹಲ್ಲೆ ನಡೆಸಿದ್ದು, ಈ ದೃಶ್ಯವನ್ನು ಹಿಡನ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಳಿಕ ಪೊಲೀಸ್‌ ಠಾಣೆಗೆ ಹೋಗಿ ನನಗೆ ರಕ್ಷಣೆ ಕೊಡಿ ಎಂದು ಲೊಕೇಶ್‌ ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು MeghUpdates ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪತ್ನಿ ತನ್ನ ಗಂಡನ ಶರ್ಟ್‌ ಕಾಲರ್‌ ಹಿಡಿದು ಮನಬಂದಂತೆ ಹಲ್ಲೆ ನಡೆದುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತರಕರಡಿಯ ಮೇಲೆ ಅಟ್ಯಾಕ್‌ ಮಾಡಿದ ಮೂರು ಚಿರತೆ

ಏಪ್ರಿಲ್‌ 02 ರಂದು ಶೇರ್‌ ಮಾಡಲಾದ ಈ ವಿಡಿಯೋ 7.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಹಿಳೆಯರಿಗೆ ಅಧಿಕಾರ ಸ್ವಾತಂತ್ರ್ಯ ನೀಡಿದಾಗ ಹೀಗೆಯೇ ಆಗೋದುʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಗ ಎಲ್ಲಿ ಹೋದ್ರು ಮಾನವ ಹಕ್ಕುಗಳ ಬಗ್ಗೆ ಮಾತನಾಡೋರುʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೂಡಲೇ ಆಕೆಯನ್ನು ಬಂಧಿಸಿʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ