AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪಿಜ್ಜಾ ಆರ್ಡರ್‌ ತೆಗೆದುಕೊಳ್ಳಲು ನಿರಾಕರಿಸಿದ ಕಾರಣಕ್ಕೆ ತಡರಾತ್ರಿ ಕೆಫೆಯಲ್ಲಿ ಗುಂಡು ಹಾರಿಸಿ ಯುವಕನ ಪುಂಡಾಟ; ವಿಡಿಯೋ ವೈರಲ್‌

ಇಲ್ಲೊಂದು ಆಘಾತಕಾರಿ ವಿಡಿಯೋ ವೈರಲ್‌ ಆಗುತ್ತಿದ್ದು, ತಡರಾತ್ರಿ ಪಿಜ್ಜಾ ಆರ್ಡರ್‌ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಕೆಫೆಯಲ್ಲಿ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಬಂದೂಕು ತೋರಿಸಿ ಬೆದರಿಕೆಯೊಡ್ಡಿ ಸಿಬ್ಬಂದಿಯ ಕೈಯಲ್ಲಿ ಪಿಜ್ಜಾ ಮಾಡಿಸಿಕೊಂಡು ತಿಂದು ಅಲ್ಲಿಂದ ಪರಾರಿಯಾಗಿದ್ದಾನೆ.

ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Nov 15, 2024 | 6:14 PM

Share

ಹೊಟ್ಟೆ ಹಸಿವಾದರೆ ಮನುಷ್ಯನಿಗೆ ಬಹಳ ಕೋಪ ಬರುತ್ತದೆ. ಈ ಮಾತನ್ನು ಹಲವು ಜನ ಹೇಳೋದನ್ನು ಕೂಡಾ ಕೇಳಿರುತ್ತೀರಿ ಅಲ್ವಾ. ಈ ಮಾತಿಗೆ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ತಡರಾತ್ರಿ ಹಸಿದು ಬಂದ ಯುವಕನೊಬ್ಬ ಕೆಫೆಯಲ್ಲಿ ಪಿಜ್ಜಾ ಆರ್ಡರ್‌ ಮಾಡಿದ್ದಾನೆ. ಲೇಟ್‌ ಆಯ್ತು ಎಂಬ ಕಾರಣಕ್ಕೆ ಆರ್ಡರ್‌ ತೆಗೆದುಕೊಳ್ಳಲು ಕೆಫೆ ಸಿಬ್ಬಂದಿ ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಆ ಯುವಕ ಕೆಫೆಯಲ್ಲಿ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಬಂದೂಕು ತೋರಿಸಿ ಬೆದರಿಕೆಯೊಡ್ಡಿ ಸಿಬ್ಬಂದಿಯ ಕೈಯಲ್ಲಿ ಪಿಜ್ಜಾ ಮಾಡಿಸಿಕೊಂಡು ತಿಂದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು, ಇನ್ನೇನೂ ಕೆಫೆ ಕ್ಲೋಸಿಂಗ್‌ ಟೈಮ್‌ ಅನ್ನುವಷ್ಟರಲ್ಲಿ ಬಂದೂಕಿನ ಸಮೇತ ಕೆಫೆಗೆ ನುಗ್ಗಿದ್ದ ಯುವಕನೊಬ್ಬ ಪಿಜ್ಜಾ ಆರ್ಡರ್‌ ಮಾಡಿದ್ದಾನೆ. ಕ್ಲೋಸಿಂಗ್‌ ಟೈಮ್‌ ಆದ್ದರಿಂದ ಆರ್ಡರ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದಾಗ ಕೆಫೆಟೇರಿಯಾದ ಬಾಲಿಗೆ ಗುಂಡು ಹಾರಿಸಿ, ಬಂದೂಕು ತೋರಿಸಿ ಪಿಜ್ಜಾ ಮಾಡಿಕೊಡುವಂತೆ ಬೆದರಿಕೆ ಹಾಕಿದ್ದಾನೆ. ನಂತರ ಪಿಜ್ಜಾ ತಿಂದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೆಫೆ ಸಿಬ್ಬಂದಿಗಳು ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತ್ತು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಸೂಪರ್‌ ಮಾರ್ಕೆಟ್‌ನಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತು, ಹಾಲು ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

FreePressMP ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಂದೂಕು ಹಿಡಿದು ಯುವಕನೊಬ್ಬ ಕೆಫೆಯೊಳಗೆ ನುಗ್ಗುವಂತಹ ದೃಶ್ಯವನ್ನು ಕಾಣಬಹುದು. ಆರ್ಡರ್‌ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಕೆಫೆಟೇರಿಯಾ ಬಾಗಿಲಿನ ಬಳಿ ಗುಂಡು ಹಾರಿಸಿ ಬಳಿಕ ಬಂದೂಕು ಹಿಡಿದುಕೊಂಡು ಬಂದು ಪಿಜ್ಜಾ ಮಾಡಿಕೊಡುವಂತೆ ಬೆದರಿಕೆಯೊಡ್ಡಿದ್ದಾನೆ. ಈ ಆಘಾತಕಾರಿ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ