
ಮುಂಬೈ, ಫೆಬ್ರವರಿ 23: ಸ್ವಾಭಿಮಾನದ ಬದುಕೇ ಹಾಗೆ, ಎಷ್ಟೇ ಕಷ್ಟ ಆದ್ರೂ ದುಡಿಮೆ ತಿಂತಾರೆ ಹೊರತು ಯಾರ ಮುಂದೆಯೂ ಕೈ ಚಾಚಲ್ಲ. ಅದರಲ್ಲೂ ಇಳಿ ವಯಸ್ಸಿನ ವ್ಯಕ್ತಿಗಳು ಕಷ್ಟ ಪಟ್ಟು ದುಡಿಯುವುದನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಇದೀಗ ಇಲ್ಲೊಬ್ಬ ವೃದ್ಧೆಯೂ (elderly woman) ಮುಂಬೈ ರಸ್ತೆಯಲ್ಲಿ ಧೂಳು ಹಿಡಿದ ಕಾರುಗಳನ್ನು ತೊಳೆದು ಮೂರು ಹೊತ್ತಿನ ಕೂಳನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ. ಈ ಅಜ್ಜಿಗೆ ವ್ಯಕ್ತಿಯೊಬ್ಬರು ಸರ್ಪ್ರೈಸ್ ಉಡುಗೊರೆ ನೋಡಿ ಖುಷಿ ಪಡಿಸುವ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ.
ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಎರಡು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಣ್ಣಲ್ಲಿ ನೀರು ಬಂತು ಎಂದರೆ, ಇನ್ನೊಬ್ಬರು, ಇಳಿ ವಯಸ್ಸಿನಲ್ಲಿ ದುಡಿಯುವವರು ಯುವಕರಿಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣ ಸಿಗುವುದೇ ಅಪರೂಪ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Mon, 23 February 26