Viral News: ಪ್ರೇಯಸಿಯ ನಿರ್ಧಾರದಿಂದ 78 ಕೋಟಿ ರೂ. ಕಳೆದುಕೊಂಡ ಯುವಕ
ತನ್ನ ಗೆಳತಿ ಮಾಡಿದ ತಪ್ಪಿನಿಂದಾಗಿ ಬ್ರಿಟಿಷ್ ವ್ಯಕ್ತಿಯ ಮಿಲಿಯನೇರ್ ಆಗುವ ಕನಸು ನಿರಾಶೆಯಾಗಿದೆ. ಬರೋಬ್ಬರಿ 78 ಕೋಟಿ ರೂ. ಕಳೆದುಕೊಂಡು ತಲೆಗೆ ಕೈಕೊಟ್ಟು ಕುಳಿತಿದ್ದಾನೆ. ಗೆಳತಿಯ ಮಾತು ಕೇಳಿ ತಕ್ಷಣ ಕುಸಿದು ಬಿದ್ದಿದ್ದಾನೆ. ಸಂತೋಷವೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿದೆ.
ಇತ್ತೀಚಿನ ದಿನಗಳಲ್ಲಿ, ಗೆಳತಿ-ಗೆಳೆಯ ಸಂಬಂಧದ ಟ್ರೆಂಡ್ ಜೋರಾಗಿ ನಡೆಯುತ್ತಿದೆ, ಆದರೆ ಗೆಳತಿಯ ಒಂದು ತಪ್ಪಿನಿಂದ ಯಾರಾದರೂ ಕೋಟ್ಯಂತರ ಮೌಲ್ಯದ ನಷ್ಟವನ್ನು ಅನುಭವಿಸಿದರೆ ಹೇಗಿರುತ್ತದೆ ಎಂದು ಊಹಿಸಿ. ಹೌದು, ಬ್ರಿಟನ್ ನಿವಾಸಿ ಜೇಕಬ್ ಸೈಮನ್ ಎಂಬಾತನಿಗೂ ಇಂತಹದ್ದೇ ಘಟನೆ ನಡೆದಿದೆ. ವಾಸ್ತವವಾಗಿ, ಜೇಕಬ್ ಅವರು ಒಂದು ದಿನ ಲಾಟರಿ ಗೆಲ್ಲುವ ಮೂಲಕ ಖಂಡಿತವಾಗಿಯೂ ಮಿಲಿಯನೇರ್ ಆಗುತ್ತಾರೆ ಎಂಬ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದರು. ಆದ್ದರಿಂದ ಆತ ಹಲವು ವರ್ಷಗಳಿಂದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದ ಮತ್ತು ಪ್ರತಿ ಬಾರಿ ಒಂದೇ ಸಂಖ್ಯೆಯ ಟಿಕೆಟ್ ಖರೀದಿಸುತ್ತಿದ್ದ.
ದಿ ಸನ್ ವರದಿಯ ಪ್ರಕಾರ, ಇತ್ತೀಚೆಗೆ ಜಾಕೋಬ್ ಅವರು ವರ್ಷಗಳಿಂದ ಖರೀದಿಸುತ್ತಿದ್ದ ಅದೇ ಸಂಖ್ಯೆಯ ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದರು. ಲಾಟರಿ ಫಲಿತಾಂಶ ಹೊರಬಿದ್ದಾಗ ಜೇಕಬ್‌ಗೆ ಅತೀವ ಆನಂದವಾಯಿತು. ಈ ಬಾರಿ ಅವರ ಸಂಖ್ಯೆ ಅದೃಷ್ಟಶಾಲಿ ಎಂದು ಸಾಬೀತಾಯಿತು. ಯಾಕೆಂದರೆ ಹಲವು ವರ್ಷಗಳಿಂದ ಖರೀದಿಸುತ್ತಿದ್ದ ಒಂದೇ ಸಂಖ್ಯೆಗೆ ಈ ಸಲ ಅದೃಷ್ಟ ಒಲಿದಿದೆ. ಆ ನಂಬರ್ 7.5 ಮಿಲಿಯನ್ ಪೌಂಡ್ ಅಂದರೆ ಸುಮಾರು 78 ಕೋಟಿ ಲಾಟರಿ ಗೆದ್ದಿದೆ. ಈ ಖುಷಿಯನ್ನು ತಕ್ಷಣ ತನ್ನ ಪ್ರೇಯಸಿಗೆ ತಿಳಿಸಲು ಕರೆಮಾಡಿದ್ದಾನೆ. ಆದರೆ ಗೆಳತಿಯ ಮಾತು ಕೇಳಿ ತಕ್ಷಣ ಕುಸಿದು ಬಿದ್ದಿದ್ದಾನೆ. ಸಂತೋಷವೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿದೆ.
ಇದನ್ನೂ ಓದಿ: ಒಂದು ತಿಂಗಳ ಮಗುವನ್ನು ಓವನ್ನಲ್ಲಿ ಸುಟ್ಟು ಕೊಂದ ತಾಯಿ!
ಟಿಕೆಟ್ ನಂಬರ್ ಬದಲಾಯಿಸಿದ್ದ ಪ್ರೇಯಸಿ:
ಪ್ರತೀ ಸಲ ಒಂದೆ ನಂಬರ್ ಖರೀದಿಸುತ್ತಿದ್ದನ್ನು ಕಂಡು ಬೇಸರಗೊಂಡಿದ್ದ ಪ್ರೇಯಸಿ. ಈ ಸಲ ನಂಬರ್ ಬದಲಾಯಿಸಲು ನಿರ್ಧರಿಸದ್ದಾಳೆ. ಅದರಂತೆ ಆತ ಈ ಸಲ ಖರೀದಿಸಿದ್ದ ಲಾಟರಿ ಟಿಕೇಟ್ ಬದಲಾಯಿಸಿದ್ದಾಳೆ. ತನ್ನ ಗೆಳತಿಯ ಒಂದೇ ಒಂದು ತಪ್ಪಿನಿಂದಾಗಿ ಜೇಕಬ್ 78 ಕೋಟಿ ರೂ. ಕಳೆದುಕೊಂಡಿದ್ದಾನೆ ಈಗ ಇಬ್ಬರೂ ಪಶ್ಚಾತ್ತಾಪ ಪಡುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ