Love Proposal: ಪ್ರೀತಿ ಎನ್ನುವುದು ಬದುಕಿನ ಭರವಸೆ ಮತ್ತು ಶಕ್ತಿ. ಪ್ರತಿಯೊಬ್ಬರ ಬದುಕಿನಲ್ಲಿಯೂ ಅದಕ್ಕೆ ವಿಶೇಷ ಸ್ಥಾನ. ಜೊತೆಯಾಗಿ ಸಾಗುವ ಜೀವಗಳಿವೆ ಜೀವಜಲ. ಹಾಗಾಗಿ ಅದಕ್ಕೆ ಸಂಬಂಧಿಸಿದ ಸಂಭ್ರಮಾಚರಣೆಗಳೂ ನೆನಪಿನಲ್ಲಿ ಉಳಿಯುವಂತೆ ಇರಬೇಕು ಎಂದು ಪ್ರತೀ ಜೋಡಿಯೂ ಪರಸ್ಪರ ಆಶಿಸುತ್ತದೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ತಮ್ಮ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ ಯಶರಾಜ್ ಛಾಬ್ರಾ ಎನ್ನುವವರು. ಇದಿಷ್ಟೇ ಆಗಿದ್ದರೆ ಈ ಜೋಡಿ ಸುದ್ದಿಯಾಗುತ್ತಿರಲಿಲ್ಲ. ಪ್ರೇಮನಿವೇದನೆ ಯಶಸ್ವಿಯಾಗಿ ನೆರವೇರಲು ವಿಮಾನ ನಿಲ್ದಾಣದ ಸಿಬ್ಬಂದಿಯ ವಿಶೇಷ ಸಹಾಯವನ್ನೂ ಯಶರಾಜ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : Viral Video: ಎಂಜಿನ್ ಇಲ್ಲ ಚಾಲಕನಿಲ್ಲ ನಿಗೂಢವಾಗಿ ಚಲಿಸಿದ ರೈಲು; ಆತ್ಮನಿರ್ಭರ್ ರೈಲು ಎಂದ ನೆಟ್ಟಿಗರು
ಆ. 28ರಂದು ಈ ವಿಡಿಯೋ ಅನ್ನು ಆಕ್ಲೆಂಡ್ ಏರ್ಪೋರ್ಟ್ ಇನ್ಸ್ಟಾಗ್ರಾಂನ ಅಧಿಕೃತ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದೆ. ಇಡೀ ವಿಮಾನ ನಿಲ್ದಾಣವೇ ಈ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಆಕ್ಲೆಂಡ್ನ ಬ್ಯಾಂಕಿಂಗ್ ಸ್ಪೆಷಲಿಸ್ಟ್ ಯಶರಾಜ್ ಆ. 18ರಂದು ಗೆಳತಿ ರಿಯಾ ಶುಕ್ಲಾಗೆ ಪ್ರೇಮ ನಿವೇದನೆ ಮಾಡಿಕೊಂಡ ರೀತಿಯನ್ನು ಕಂಡು ನೆಟ್ಮಂದಿ ಅಚ್ಚರಿಯಾಗಿದೆ.
ಆಕ್ಲೆಂಡ್ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರಿಯಾ ಮೆಲ್ಬೋರ್ನ್ನಿಂದ ಆಕ್ಲೆಂಡ್ಗೆ ಮರಳುವ ಹೊತ್ತಿನಲ್ಲಿ ಯಶ್ರಾಜ್ ಹೀಗೊಂದು ಅಚ್ಚರಿಯನ್ನು ಆಕೆಗೆ ನೀಡಿದ್ದಾರೆ. ‘ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವಿಚಾರಿಸಿದಾಗ ಪ್ರೊಟೊಕಾಲ್ ಇರುವುದಾಗಿ ಹೇಳಿದರು. ಕೊನೆಗೆ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಮ್ಯೂನಿಕೇಷನ್ ಮ್ಯಾನೇಜರ್ ಲಾರಾ ಪ್ಲ್ಯಾಟ್ಸ್ ಅವರೊಂದಿಗೆ ಮಾತನಾಡಿ ದಯವಿಟ್ಟು ನನ್ನ ಕನಸಿಗೆ ಸಹಕರಿಸಿ ಎಂದು ಕೇಳಿಕೊಂಡೆ. ಹೂಗುಚ್ಛ ಕೇಕ್ ಮತ್ತು ಕುಟುಂಬದವರ ಉಪಸ್ಥಿತಿಗಾಗಿ ಲಾರಾ ಸಹಾಯ ಮಾಡಿದ್ದಾರೆ. ವೃತ್ತಿಪರ ಛಾಯಾಗ್ರಾಹಕ ತಂಡ ಇದನ್ನು ಸೆರೆಹಿಡಿದಿದೆ. ಒಟ್ಟಾರೆಯಾಗಿ ಈ ಕ್ಷಣಗಳಿಗಾಗಿ ಒಂದು ತಿಂಗಳು ತಯಾರಿ ನಡೆಸಲಾಗಿತ್ತು’ ಎಂದು ಯಶರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ : Viral Video: ಹಾವುಗಳೊಂದಿಗೆ ಹಾಯಾಗಿ ನಿದ್ರಿಸುವ ಬಾಲಕಿ; ದಿಗ್ಭ್ರಾಂತರಾದ ನೆಟ್ಟಿಗರು
ರಿಯಾ ಆ. 18ರಂದು ಟ್ರಾಫಿಕ್ನಿಂದಾಗಿ ವಿಮಾನವನ್ನು ತಪ್ಪಿಸಿಕೊಂಡರು. ಮತ್ತೆ ಬೇರೊಂದು ವಿಮಾನ ವ್ಯವಸ್ಥೆ ಮಾಡಲಾಯಿತು. ಆಕ್ಲೆಂಡ್ಗೆ ಬಂದಿಳಿದಾಗ ಆಕೆಯ ಲಗೇಜ್ ಮಿಸ್ ಆಗಿತ್ತು. ಆಕೆ ದೂರು ನೀಡಲು ಹೆಲ್ಪ್ ಡೆಸ್ಕ್ಗೆ ಹೋಗುವಾಗ ಆಕೆಯ ಕುಟುಂಬ ಸದಸ್ಯರು ತಮ್ಮೆಡೆ ಬರುವಂತೆ ಒತ್ತಾಯಿಸುತ್ತಲೇ ಇದ್ದರು. ಅವರ ಪ್ರೀತಿಗೆ ಮಣಿದು ಆಕೆ ಅವರೆಡೆ ಬರುತ್ತಿದ್ದಾಗ ಯಶ್ರಾಜ್ ಮೊಣಕಾಲನ್ನೂರಿದ ಭಂಗಿಯಲ್ಲಿ ಅಚ್ಚರಿ ನೀಡಿದರು.
ಇದನ್ನೂ ಓದಿ : Viral Video: ದೆಹಲಿ; ಓವರ್ ಬ್ರಿಡ್ಜ್ ಮೆಟ್ಟಿಲುಗಳ ಮೇಲೆ ಆಟೋ ಓಡಿಸಿದ ಧೀರಚಾಲಕ
ನಿಜಕ್ಕೂ ಆ ಕ್ಷಣಗಳು ಸಾಕಷ್ಟು ಅಚ್ಚರಿ ಮತ್ತು ಶೃಂಗಾರಮಯವಾಗಿ ಕೂಡಿದ್ದವು ಎಂದು ರಿಯಾ ಹೇಳಿದ್ಧಾರೆ. ಈ ಜೋಡಿ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮದುವೆಯಾಗಲು ತಯಾರಿ ನಡೆಸಲಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:48 am, Tue, 5 September 23