Viral Video: ಮೊಸರು ಮತ್ತು ಹುಣಸೆಹಣ್ಣಿನ ಚಟ್ನಿ ಬೆರೆಸಿ ‘ರಸಗುಲ್ಲಾ ಚಾಟ್’ ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ನೋಡಿ

ಇಲ್ಲೋರ್ವ ರಸಗುಲ್ಲಾಕ್ಕೆ ಮೊಸರು ಮತ್ತು ಹುಣಸೆ ಹಣ್ಣಿನ ಚಟ್ನಿ ಸೇರಿಸಿ ಮಸಾಲೆ ರಸಗುಲ್ಲಾ ಚಾಟ್ ತಯಾರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ನೋಡಿ.

Viral Video: ಮೊಸರು ಮತ್ತು ಹುಣಸೆಹಣ್ಣಿನ ಚಟ್ನಿ ಬೆರೆಸಿ ‘ರಸಗುಲ್ಲಾ ಚಾಟ್’ ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ನೋಡಿ
ರಸಗುಲ್ಲಾ ಚಾಟ್
Edited By:

Updated on: Oct 22, 2021 | 8:36 AM

ಇತ್ತೀಚೆಗೆ ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬೇರೆ ಬೇರೆ ಪದಾರ್ಥಗಳನ್ನು ಬೆರೆಸಿ ಹೊಸ ರೆಸಿಪಿ ತಯಾರಿಸಲು ಜನರು ಮುಂದಾಗುತ್ತಾರೆ. ಆದರೆ ಕೆಲವು ಬಾರಿ ಸರಿ ಹೊಂದದ ಪದಾರ್ಥಗಳಿಂದ ತಯಾರಿಸಿದ ಕೆಲವು ತಿಂಡಿಗಳು ಹೆಚ್ಚು ಇಷ್ಟವಾಗುವುದಿಲ್ಲ. ಇದೀಗ ಚಾಟ್​ ರಸಗುಲ್ಲಾ ತಿಂಡಿಯೊಂದು ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ಕಣ್ಣಲ್ಲಿ ಇನ್ನೇನೇನ್ ನೋಡ್ಬೇಕಪ್ಪಾ ಎಂಬ ಅಭಿಪ್ರಾಯಗಳು ಸಹ ಕೇಳಿ ಬರುತ್ತಿದೆ.

ಇಲ್ಲೋರ್ವ ರಸಗುಲ್ಲಾಕ್ಕೆ ಮೊಸರು ಮತ್ತು ಹುಣಸೆ ಹಣ್ಣಿನ ಚಟ್ನಿ ಸೇರಿಸಿ ಮಸಾಲೆ ರಸಗುಲ್ಲಾ ಚಾಟ್ ತಯಾರಿಸಿದ್ದಾರೆ. ತಮಾಷೆಯಲ್ಲ! ನಿಜವಾಗಿಯೂ ಈತ ಹೊಸ ರೆಸಿಪಿಯೊಂದನ್ನು ತಯಾರಿಸಲು ಮುಂದಾಗಿದ್ದಾನೆ. ವೈರಲ್ ವಿಡಿಯೋದಲ್ಲಿ ಗಮನಿಸುವಂತೆ ಓರ್ವ ವ್ಯಕ್ತಿ ರಸಗುಲ್ಲಾವನ್ನು ಒಂದು ಬಟ್ಟಲಿನಲ್ಲಿ ಇಟ್ಟಿದ್ದಾನೆ. ರಸಗುಲ್ಲಾವನ್ನು ಎರಡು ಭಾಗಗಳಾಗಿ ಕತ್ತರಿಸಲಾಗಿದೆ. ನಂತರ ಹುಣಸೆ ಹಣ್ಣಿನ ರಸ ಮತ್ತು ಮೊಸರು ಹಾಕಿ ಬೆರೆಸುತ್ತಾನೆ. ನಂತರ ರೆಸಿಪಿಗೆ ಗೋಡಂಬಿ ದ್ರಾಕ್ಷಿ ಹಾಕಿ ಅಲಂಕರಿಸಲಾಗಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆನ್​ಲೈನ್​ನಲ್ಲಿ ಹಂಚಿಕೊಂಡಾಗಿನಿಂದ ವಿಡಿಯೋ ಫುಲ್ ವೈರಲ್ ಆಗಿದೆ. ವಿಲಕ್ಷಣ ಆಹಾರ ಸಂಯೋಜನೆಗಳನ್ನು ನೋಡಿದವರಲ್ಲಿ ಕೆಲವರು ಇಷ್ಟಪಟ್ಟಿಲ್ಲ. ಇನ್ನು ಕೆಲವರು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:

Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​

Viral Video: ಮೇಘಾಲಯ ಸಿಎಂ ಹಾಡಿದ ‘ಸಮ್ಮರ್ ಆಫ್ 69’ ಹಾಡಿಗೆ ನೆಟ್ಟಿಗರೆಲ್ಲಾ ಫಿದಾ