Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ.

Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್
ಲವ್ ಬ್ರೇಕ್​ಅಪ್

Updated on: Mar 02, 2023 | 1:14 PM

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ. ದೂರವಾದ ಬಳಿಕ ಇಬ್ಬರೂ ನೋವು ಅನುಭವಿಸುತ್ತಾರೆ, ಇಗೋ ಎನ್ನುವುದು ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದಂತೆ ಮಾಡಿ, ದೂರವಾಗಲು ಕಾರಣವಾಗುತ್ತದೆ.
ಆದರೆ ಬ್ರೇಕ್​ಅಪ್ ಬಳಿಕ ಪ್ರತಿಯೊಬ್ಬ ಪ್ರೇಮಿಗಳು ತಾವು ತಮ್ಮ ಸಂಗಾತಿಗೆ ಕೊಟ್ಟ ಉಡುಗೊರೆಯನ್ನು ವಾಪಸ್ ಕೇಳುತ್ತಾರೆ, ಇನ್ನೋ ಯಾವುದೇ ಖರ್ಚು, ವೆಚ್ಚಗಳನ್ನು ಅವರ ಮುಂದಿಡುತ್ತಾರೆ. ಇದೆಲ್ಲದರಿಂದ ಅವರನ್ನು ಇರಿಟೇಟ್ ಮಾಡಬೇಕು ಎನ್ನುವ ಆಲೋಚನೆ ಅಷ್ಟೇ ಇರುತ್ತದೆ.

ಆದರೆ ಇಲ್ಲೊಬ್ಬ ಪ್ರೇಮಿ ಬ್ರೇಕ್​ಅಪ್ ಆದ ಬಳಿಕ ನಮ್ಮ ಲವ್ ಬ್ರೇಕ್ ಅಪ್ ಆಗಿದೆ ಎಂದು ಒಪ್ಪಿಕೊಂಡು ಈ ಪತ್ರದಲ್ಲೊಂದು ಸಹಿ ಹಾಕು ಎಂದು ಹೇಳಿ ವಾಟ್ಸ್​ಆ್ಯಪಾ್​ನಲ್ಲಿ ಪತ್ರ ಒಂದನ್ನು ಕಳಿಸಿದ್ದಾನೆ. ಜೀವನದಲ್ಲಿ ಪ್ರೀತಿ, ಬ್ರೇಕ್​ಅಪ್ ಎಲ್ಲವೂ ಸಾಮಾನ್ಯ, ಅಂತಹ ಸಮಯದಲ್ಲಿ ಬ್ರೇಕ್​ಅಪ್ ಬಗ್ಗೆ ದೃಢವಾದ ಉತ್ತರ ಸಿಕ್ಕಿದರೆ ಉತ್ತಮ, ಇಲ್ಲವಾದರೆ ಸದಾ ದ್ವಂದ್ವದಲ್ಲೇ ಬದುಕಬೇಕಾಗುತ್ತದೆ.

ಮತ್ತಷ್ಟು ಓದಿ: ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

ನಮ್ಮ ಬ್ರೇಕ್​ಅಪ್ ಅಧಿಕೃತವಾಗಿರಬೇಕು, ಆಮೇಲೆ ಯಾವಾಗಲೋ ನನ್ನ ಗರ್ಲ್​ಫ್ರೆಂಡ್ ಎಂದು ಹೇಳಿಕೊಂಡು ಬರಬಾರದು ಎನ್ನುವ ಉದ್ದೇಶದಿಂದ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಈ ಸಂದೇಶವನ್ನು ಕಳುಹಿಸಿದ್ದಾನೆ.

ಈ ಪೋಸ್ಟ್​ ಅನ್ನು 4.7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ, 5,800 ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಸಾಕಷ್ಟು ಮಂದಿ ಈ ಉಪಾಯವನ್ನು ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ, ಇನ್ನೂ ಕೆಲವರು ಉತ್ತಮ ನಿರ್ಧಾರ ಎಂದಿದ್ದಾರೆ. ಇನ್ನೂ ಕೆಲವರು ತಾನೂ ಕೂಡ ಹೀಗೆಯೇ ಮಾಡುತ್ತೇನೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us