Viral: ಕೀಟಲೆ ಮಾಡಿದವನನ್ನು ಅಟ್ಟಾಡಿಸಿಕೊಂಡು ಹೋದ ಗಜರಾಜ; ವಿಡಿಯೋ ವೈರಲ್
ಕೆಲವೊಬ್ಬ ತರ್ಲೆ ಹುಡುಗರು ನಾಯಿ, ಕೋತಿ ಹೀಗೆ ಕೆಲವೊಂದಿಷ್ಟು ಪ್ರಾಣಿಗಳಿಗೆ ಕೀಟಲೆ ಮಾಡುವುದು, ಅವುಗಳಿಗೆ ಚುಡಾಯಿಸುವುದು ಹೀಗೆ ಅಧಿಕಪ್ರಸಂಗಿತನವನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ರಸ್ತೆ ದಾಟುತ್ತಿದ್ದ ಕಾಡಾನೆಗೆ ಪದೇ ಪದೇ ಕೀಟಲೆ ಕೊಟ್ಟಿದ್ದು, ಇದರಿಂದ ಕೋಪಗೊಂಡ ಆನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಯುವಕನ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಕೆಲವೊಂದಿಷ್ಟು ಜನಕ್ಕೆ ಎಲ್ಲಿ, ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನವೇ ಇರುವುದಿಲ್ಲ. ವಿದ್ಯಾವಂತರಾಗಿದ್ದರೂ ತಮ್ಮ ಮೋಜು ಮಸ್ತಿಗಾಗಿ ಅನಾಗರಿಕರಂತೆ ನಡೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ದುರ್ವರ್ತನೆಯನ್ನು ತೋರಿದ್ದಾನೆ. ಹೌದು ಅರಣ್ಯ ಪ್ರದೇಶಗಳ ಬಳಿ ಕಾಡು ಪ್ರಾಣಿಗಳು ಓಡಾಡುವ ಸಂದರ್ಭದಲ್ಲಿ ಅವುಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ಗೊತ್ತಿದ್ದರೂ ಕೂಡಾ ಈ ಯುವಕ ತನ್ನ ಪಾಡಿಗೆ ರಸ್ತೆ ದಾಟುತ್ತಿದ್ದ ಕಾಡಾನೆಗೆ ಕೀಟಲೆ ಕೊಟ್ಟಿದ್ದಾನೆ. ಇದರಿಂದ ಕಿರಿಕಿರಿ ಉಂಟಾಗಿ ಕೆರಳಿದ ಆನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಯುವಕನ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಸ್ವಾನ್ (ParveenKaswan) ಆನೆಗೆ ಕೀಟಲೆ ಮಾಡಿದ ಯುವಕ ವಿರುದ್ಧ ಗರಂ ಆಗಿದ್ದು, ಇಲ್ಲಿ ನಿಜವಾದ ಪ್ರಾಣಿ ಯಾರು? ದಯವಿಟ್ಟು ನಿಮ್ಮ ಮೋಜಿಗಾಗಿ ಕಾಡು ಪ್ರಾಣಿಗಳನ್ನು ಕೆರಳಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಈ ವಿಡಿಯೋದಲ್ಲಿ ಪ್ರಾಣಿಯನ್ನು ಗುರಿತಿಸಿ; ಬಹುಶಃ ನೀವು ವಯಸ್ಸಿನಲ್ಲಿ ಚಿಕ್ಕವರಾಗಿರಬಹುದು. ಆನೆಯನ್ನು ಮೀರಿಸುವ ಶಕ್ತಿಯೂ ನಿಮ್ಮಲ್ಲಿರಬಹುದು. ಆದರೆ ಸಿಟ್ಟಿಗೆದ್ದ ಈ ಪ್ರಾಣಿಗಳು ಮುಂದಿನ ಕೆಲವು ದಿನಗಳವರೆಗೆ ಮನುಷ್ಯರನ್ನು ಕಂಡ್ರೆ ಶಾಂತವಾಗಿ ವರ್ತಿಸುವುದಿಲ್ಲ. ಹಾಗಾಗಿ ದಯವಿಟ್ಟು ನಿಮ್ಮ ಮೋಜಿಗಾಗಿ ಕಾಡು ಪ್ರಾಣಿಗಳನ್ನು ಕೆರಳಿಸಬೇಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Identify the animal in this video.
Maybe you are young and you can outrun the elephants. But these irritated animals don’t behave peacefully if they see other human for next few days. Don’t irritate wild animals for your fun. pic.twitter.com/chYlLeqx3d
— Parveen Kaswan, IFS (@ParveenKaswan) January 12, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಜಪಡೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಆನೆಯೊಂದಕ್ಕೆ ಯುವಕನೊಬ್ಬ ಕೀಟಲೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನ ಚೇಷ್ಟೆಯಿಂದ ಕೆರಳಿದ ಆನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಇಷ್ಟೆಲ್ಲಾ ಅವಾಂತರ ಆದ್ರೂ ಕೂಡಾ ಯುವಕ ಪದೇ ಪದೇ ಆನೆಗಳಿಗೆ ಕೀಟಲೆ ಕೊಟ್ಟಿದ್ದಾನೆ.
ಇದನ್ನೂ ಓದಿ: ಏನ್ ಎನರ್ಜಿಟಿಕ್ ಡ್ಯಾನ್ಸ್ ನೋಡಿ… ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ತಂದೆ-ಮಗ; ವಿಡಿಯೋ ವೈರಲ್
ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಆ ಎರಡು ಕಾಲಿನ ಪ್ರಾಣಿಯನ್ನು ಒದ್ದು ಒಳಗೆ ಹಾಕ್ಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮನುಷ್ಯನನ್ನು ಪ್ರಾಣಿ ಎಂದು ಕರೆಯಬೇಡಿ, ಅದು ಮುಗ್ಧ ಪ್ರಾಣಿಗಳಿಗೆ ಅವಮಾನ ಮಾಡಿದಂತಾಗುತ್ತದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ