Australia Beach: ಸಮುದ್ರಕ್ಕೆ ಈಜಲು ಹೋದವನಿಗೆ ಆಕ್ಟೋಪಸ್​ ಜಲಚರಿ ಹೊಡೆದದ್ದು ಈಗ ವೈರಲ್​

ಮಜವಾಗಿ ರಜ ಕಳೆಯೋಣ ಎಂದು ಆಸ್ಟ್ರೇಲಿಯಾದ ಜಿಯಾಗ್ರಫಿ ಬೇ ಬಳಿ ಸಮುದ್ರಕ್ಕೆ ಇಳಿದವನಿಗೆ ಊಹೆಗೂ ಮೀರಿದ ಅನುಭವ ಆಯ್ತು. ಆಕ್ಟೋಪಸ್​ ಜಲಚರಿ ಅವನ ಕೈ ಕುತ್ತಿಗೆ ಮತ್ತು ಬೆನ್ನಿಗೆ ಚೆನ್ನಾಗಿ ಬಾರಿಸಿದ್ದನ್ನು ಆತ ಹೇಳಿಕೊಂಡಿದ್ದು ಈಗ ಎಲ್ಲೆಲ್ಲೂ ವೈರಲ್​ ಆಗಿದೆ.

Australia Beach: ಸಮುದ್ರಕ್ಕೆ ಈಜಲು ಹೋದವನಿಗೆ ಆಕ್ಟೋಪಸ್​ ಜಲಚರಿ ಹೊಡೆದದ್ದು ಈಗ ವೈರಲ್​
ಜಿಯೊಲಾಜಿಸ್ಟ್​ ಲಾ ಕಾರ್ಲ್​ಸನ್ ಹಂಚಿಕೊಂಡಿರುವ ಚಿತ್ರ. (Screengrab/Instagram/la ncekarlson)
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 02, 2021 | 9:25 PM

ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲಿನಷ್ಟೇ ನೀರು ಎಂಬ ಗಾದೆ ನಮ್ಮಲ್ಲಿದೆ. ಅರ್ಥವೇನೆಂದರೆ ಕೆಲವರಿಗೆ, ಎಲ್ಲಿ ಹೋದರೂ ಬ್ಯಾಡ್ ಲಕ್ ಬಿಡಲ್ಲ. ಕೆಲಸದ ಒತ್ತಡ, ಬಾಸ್​ನ ಬಯ್ಗುಳದಿಂದ ದೂರ ಹೋಗಿ ಹಾಯಾಗಿ ರಜೆ ಕಳೆದು ಬರೋಣ ಎಂದವರಿಗೆ ಏನಾದರೂ ಕಂಟಕ ಬಂದರೆ? ಹೀಗೆ ಆಯ್ತು ಇಲ್ಲೊಬ್ಬ ವಿಜ್ಞಾನಿಗೆ. ಲಾನ್ಸ್ ಕಾರ್ಲಸನ್ ಎಂಬ ಭೂ ವಿಜ್ಞಾನಿ ರಜೆ ಕಳೆಯಲು ಆಸ್ಟ್ರೇಲಿಯದ ಜಿಯಾಗ್ರಫಿ ಬೇ ಎಂಬಲ್ಲಿ ಒಂದು ರೆಸಾರ್ಟ್ನಲ್ಲಿ ತನ್ನ ಕುಟುಂಬದೊಂದಿಗೆ ಇಳಿದುಕೊಂಡು ಆರಾಮಾಗಿ ಈಜಲೇಂದು ಸಮುದ್ರಕ್ಕೆ ಹೋಗಿದ್ದ. ಅಲ್ಲಿ ಎಂಟು ಕಾಲಿನ ಜಲಚರ ಆಕ್ಟೋಪಸ್ ಚೆನ್ನಾಗಿ ಬಾರಿಸಿದೆ. ಇದರಿಂದ ಕಂಗಾಲಾದ ಆತ ತಪ್ಪಿಸಿಕೊಳ್ಳಲು ಹೋದರೂ ಬಿಡದ ಅದು. ಅವನ ಕುತ್ತಿಗೆ ಕೈ ಮತ್ತು ಬೆನ್ನಿಗೆ ಚೆನ್ನಾಗಿ ಬಾರಿಸಿದೆ. ಆ ಆಕ್ಟೋಪಸ್ ಆತನಿಗೆ ಹೊಡೆಯುವ ಸುದ್ದಿ ಈಗ ಎಷ್ಟು ಸುದ್ದಿ ಮಾಡಿದೆ ಎಂದರೆ ಬಿಬಿಸಿ ಇದನ್ನು ವಿಶೇಷವಾಗಿ ಪ್ರಕಟಿಸಿದೆ.

ಕಾರ್ಲ್ಸನ್ ನಮ್ಮಂತೆ ಸಾಮಾನ್ಯ ಮನುಷ್ಯ ಅಲ್ಲ. ಸಮುದ್ರ ತಟದಲ್ಲಿ ನೀರಿಗೆ ಬಿದ್ದು ಮುಳುಗುವ ಅಥವಾ ಇನ್ನೇನಾದರೂ ಅನಾಹುತ ಆಗುವಾಗ ಅಂತವರನ್ನು ತಪ್ಪಿಸಲೆಂದೇ ರಕ್ಷಿಸಲು ಇರುವ ಲೈಫ್ ಗಾರ್ಡ್. ಅವರಿಗೇನು ಸಮುದ್ರ ಹೊಸದಲ್ಲ. ಈ ಜೀವಜಂತುಗಳನ್ನು ಕಾಣದೇ ಇರುವವನಲ್ಲ. ತಾನು ಇಳಿದುಕೊಂಡಿದ್ದ ರೆಸಾರ್ಟ್​ ಪಕ್ಕದಲ್ಲಿ ಸಮುದ್ರಕ್ಕೆ ಇಳಿದಿದ್ದ ಆತನಿಗೆ ಮೊದಲು ಇದು ಗೊತ್ತಾಗಲಿಲ್ಲವಂತೆ. ಆತ ಏನು ವಿಚಾರ ಮಾಡಿದ ಅಂದರೆ ಮೃದ್ವಂಗಿ ನೀರು ಬಾತುಕೋಳಿಯನ್ನು ಹಿಮ್ಮೆಟ್ಟಿಸಲು ತನ್ನ ಶಕ್ತಿ ಮೀರಿ ಹೋರಾಟ ಮಾಟುತ್ತಿದೆ ಎಂದುಕೊಂಡ.

ಆದರೆ ಆಗಿದ್ದೇ ಬೇರೆ. ತನ್ನ ಎರಡು ವರ್ಷದ ಮಗಳೊಂದಿಗೆ ಆ ಜೀವಿಯ ಹತ್ತಿರ ಹೋಗಿ ವಿಡಿಯೋ ಶೂಟ್ ಮಾಡತೊಡಗಿದೆ. ಕ್ಷಣ ಮಾತ್ರದಲ್ಲಿ ಆ ಜೀವಿ ಇವರತ್ತ ನುಗ್ಗಿ ಬಂತು. ನನಗೆ ಶಾಕ್ ಆಯ್ತು. ಏಕೆಂದರೆ ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಕೊನೆಗೆ ಮಗಳನ್ನು ತಿರುಗಿ ರೆಸಾರ್ಟ್​ನಲ್ಲಿ ಬಿಟ್ಟು ಮತ್ತು ಸಮುದ್ರಕ್ಕೆ ಇಳಿದಾಗ ಅದೇ ಆಕ್ಟೋಪಸ್ ಮತ್ತೆ ಇವನನ್ನು ಬೆನ್ನೆತ್ತಿಕೊಂಡು ಬಂತು. ಆಗ ಅದು ಎಬ್ಬಿಸಿದ ಅಬ್ಬರ ಎಷ್ಟಿತ್ತು ಎಂದರೆ ಆತನ ಕನ್ನಡಕ ಕೂಡ ಮಸುಕಾಯಿತು. ಆತನಿಗೆ ಸುತ್ತಲಿನ ಸಮುದ್ರ ಕಾಣದಂತಾಗಿತ್ತು ಎಂದು ಆತ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾನೆ.

ಲಾನ್ಸ್​ಕಾರ್ಲ್​ಸನ್ ಹಂಚಿಕೊಂಡಿರುವ ಆಕ್ರಮಣಕಾರಿ ಆಕ್ಟೋಪಸ್​ನ ವಿಡಿಯೊ ಇಲ್ಲಿದೆ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

Lance Karlson • Author (@lancekarlson) ರಿಂದ ಹಂಚಲಾದ ಪೋಸ್ಟ್

ಇದನ್ನೂ ಓದಿ:

ಸಮುದ್ರಕ್ಕೆ ಇಳಿಯಲು ಪ್ರಯತ್ನಿಸಿದ ಐವರು ಯುವಕರಿಗೆ ‘ಕೋಳಿ ನಡಿಗೆ’ ಶಿಕ್ಷೆ; ಇಂಥ ವಾಕ್​ ನೀವು ನೋಡಿರಲಿಕ್ಕಿಲ್ಲ !

ಸಮುದ್ರಕ್ಕೆ ರಾಹುಲ್​ ಗಾಂಧಿ ಜಿಗಿದಿದ್ದಾಗಲೀ, ಘಟನೆಯ ಚಿತ್ರೀಕರಣವಾಗಲೀ ಪೂರ್ವನಿಯೋಜಿತವಲ್ಲ

( Man whipped by angry octopus at Australian beach )

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!