Viral Video: ಎಂತ ಸೆಕೆ ಮರ್ರೆ; ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಂಗಳೂರು ಯುವಕನ ಪ್ಲಾನ್ ನೋಡಿ…

ಬೇಸಿಗೆ ಕಾಲ ಆರಂಭವಾಗಿಯೇ ಬಿಟ್ಟಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿನ ಸೆಕೆಯ ವಾತಾವರಣವನ್ನು ನೋಡಿದ್ರೆ ಐಸ್ ನೀರನ್ನು ತೆಗೆದುಕೊಂಡು ಮೈಗೆಲ್ಲಾ ಸುರಿದು ಬಿಡೋಣ ಅಂತ ಭಾಸವಾಗುತ್ತೆ. ಹೀಗೆ ಶೆಕೆಯಿಂದ ಪಾರಾಗಲು ಜನರು ಹಲವಾರು ಸರ್ಕಸ್ ಮಾಡುತ್ತಿರುತ್ತಾರೆ. ಇದೇ ರೀತಿ ಇಲ್ಲೊಬ್ಬ ಯುವಕ ಬಿಸಿಲ ಬೇಗೆಯನ್ನು ತಣಿಸಲು ನೀರು ತುಂಬಿದ ಡ್ರಮ್ ಒಳಗೆಯೇ ಕುಳಿತು ಬಿಟ್ಟಿದ್ದಾನೆ. ಈ ಕುರಿತ ಫನ್ನಿ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral Video: ಎಂತ ಸೆಕೆ ಮರ್ರೆ; ಬಿಸಿಲಿನಿಂದ ತಪ್ಪಿಸಿಕೊಳ್ಳಲು  ಮಂಗಳೂರು ಯುವಕನ ಪ್ಲಾನ್ ನೋಡಿ…
Edited By:

Updated on: Mar 21, 2024 | 6:43 PM

ಸಾಮಾನ್ಯವಾಗಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ನಲ್ಲಿ ಸುಡು ಬಿಸಿಲು ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ ಅಂತ್ಯದಲ್ಲಿಯೇ ಬಿಸಿಲು ಬಂದೆರಗಿದೆ. ದಿನೇ ದಿನೇ ಬಿಸಿಲ ತಾಪ ಹೆಚ್ಚಾಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪ ಜೋರಾಗಿಯೇ ಇದೆ. ದಿನದ 24 ಗಂಟೆಯೂ ಫ್ಯಾನ್, ಎಸಿ, ಏರ್ ಕೂಲರ್ ಆನ್ ಮಾಡಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದ್ರೂ ಕೆಲಸ ಇತ್ತೆಂದು ಮನೆಯಿಂದ ಹೊರಗೆ ಕಾಲಿಟ್ರೆ ಬೆವರಿ ಸುಸ್ತಾಗಿ ಬಿಡುತ್ತೇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಸಿ ವಾತಾವರಣವನ್ನು ನೋಡಿದ್ರೆ ಐಸ್ ನೀರನ್ನು ತೆಗೆದುಕೊಂಡು ಮೈಗೆಲ್ಲಾ ಸುರಿದು ಬಿಡೋಣ ಅಂತ ಭಾಸವಾಗುತ್ತೆ. ಹೀಗೆ ಕೆಲವೊಬ್ಬರು ಈ ಶೆಕೆಯಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಬಿಸಿಲ ಬೇಗೆ ತಣಿಸಲು ನೀರು ತುಂಬಿದ ಡ್ರಮ್ ಒಳಗೆ ಕುಳಿತು ಬಿಟ್ಟಿದ್ದಾನೆ. ಈ ಕುರಿತ ಫನ್ನಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯುವಕನೊಬ್ಬ ಶೆಕೆ ತಡೆದುಕೊಳ್ಳಲಾರದೆ ಬಿಸಿಲ ಬೇಗೆಯನ್ನು ತಣಿಸಲು ನೀರು ತುಂಬಿದ ಡ್ರಮ್ ಒಳಗೆ ಕುಳಿತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ತುಳು ಕಂಟೆಂಟ್ ಕ್ರಿಯೆಟರ್ ಜಯು (@jayu_smiley_boy) ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಈ ಬಾರಿಯ ಶೆಕೆಗೆ ಮನೆಯ ಒಳಗೆ ಕೂರಲು ಕೂಡಾ ಆಗ್ತಿಲ್ಲ, ಮನೆಯಿಂದ ಹೊರಗೆ ಕಾಲಿಡಲು ಆಗ್ತಿಲ್ಲ ಎಂದು ನೀರು ತುಂಬಿದ ಡ್ರಮ್ ಒಳಗೆ ಕುಳಿತು ಎಂಜಾಯ್ ಮಾಡುತ್ತಾ ಬಿಸಿಲ ಬೇಗೆಯನ್ನು ತಣಿಸಲು ಹೊಸ ಪ್ಲಾನ್ ಕಂಡುಹಿಡಿದಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪತ್ನಿಯ ಗೂಗಲ್ ಖಾತೆಯಲ್ಲಿದ್ದ ಸೀಕ್ರೆಟ್ ಫೋಟೋಗಳನ್ನು ಕಂಡು ಬೆಚ್ಚಿ ಬಿದ್ದ ಪತಿ; ಅಷ್ಟಕ್ಕೂ ಅದರಲ್ಲಿ ಏನಿತ್ತು?

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಗೆ ಇಲ್ಲಿ ಒಂದು ಡ್ರಮ್ ನೀರು ಕೂಡಾ ಇಲ್ವೇʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಇದು ಒಳ್ಳೆ ಪ್ಲಾನ್ ಕಣ್ರಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕ ಬಳಕೆದಾರರು ಈ ಹಾಸ್ಯಮಯ ದೃಶ್ಯವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Thu, 21 March 24

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us