
ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳವಿದ್ರೂ ಒತ್ತಡ ಡಬಲ್ ಆಗಿರುತ್ತದೆ. ಕೆಲಸ ಸಾಕಪ್ಪ ಸಾಕೆಂದು ಜಾಬ್ ರಿಸೈನ್ ಮಾಡೋರೇ ಹೆಚ್ಚು. ಆದರೆ ಜೆನ್ ಝೀ ಯುವತಿ ಕಾರ್ಪೊರೇಟ್ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಕೇವಲ 3 ವೇತನ ಸಹಿತ ರಜೆಗಳು, 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬರುವಂತಿಲ್ಲ. ಕೆಲಸದ ಅವಧಿ 9 ಗಂಟೆಗೂ ಹೆಚ್ಚು. ಕಂಪನಿಯ ಈ ಎಲ್ಲಾ ರೂಲ್ಸ್ ಗೆ ಹೊಂದಿಕೊಂಡರೂ ಆರೋಗ್ಯ ಮಾತ್ರ ಕೈ ಕೊಡುತ್ತಲೇ ಇರುತ್ತದೆ. ತನ್ನ ಸೋದರ ಸಂಬಂಧಿ ಒಬ್ಬರು ಅನುಭವಿಸುವ ಒತ್ತಡದ ಬಗ್ಗೆ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಎಕ್ಸ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶೀತಲ್ (Sheetal) ಎಂಬ ಯುವತಿ ಕಾರ್ಪೊರೇಟ್ ನಲ್ಲಿ ಕೆಲಸ ಮಾಡುವ ತನ್ನ ಕಸಿನ್ ಅನುಭವಿಸುವ ಒತ್ತಡದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನನ್ನ ಸೋದರ ಸಂಬಂಧಿ ಹೊಸ ಕೆಲಸದ ಸ್ಥಳದಲ್ಲಿನ ರೂಲ್ಸ್ ಬಗ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಆಫೀಸಿನಲ್ಲಿ ಊಟಕ್ಕೆಂದು ನಿರ್ದಿಷ್ಟ ಟೈಮ್ ನೀಡಲಾಗಿದೆ. ನಾವು ಆ ಸಮಯದಲ್ಲಿ ಮಾತ್ರ ಊಟ ಮಾಡಬೇಕು. ಆಫೀಸಿನ ಟೈಮಿಂಗ್ಸ್ ಗಿಂತ ಮೊದಲೇ ಹಸಿವಾದ್ರೆ ಏನು ಮಾಡೋದು
ಮಾನಸಿಕ ಆರೋಗ್ಯ ತೀರಾ ಹದಗೆಟ್ಟಿದೆ
ತಿಂಗಳಿಗೆ ಕೇವಲ 3 ರಜೆ ಮಾತ್ರ. ಆಫೀಸಿಗೆ 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬರುವಂತಿಲ್ಲ. 9 ಗಂಟೆಗಳ ಕಾಲ ರೆಸ್ಟ್ ಇಲ್ಲದೇ ಕೆಲಸ ಮಾಡ್ಬೇಕು. ಮ್ಯಾನೇಜರ್ ವರ್ತನೆ ಅತಿರೇಕ ಅನಿಸುತ್ತದೆ. ಕೆಲಸದ ವಿಷ್ಯದಲ್ಲಿ ಡೌಟ್ ಇದ್ದರೆ ಕೇಳಿ. ಪ್ರಾಜೆಕ್ಟ್ ತುಂಬಾ ಮುಖ್ಯ, ಹೀಗಾಗಿ ಯಾವುದೇ ತಪ್ಪು ಮಾಡ್ಬೇಡಿ. ಕೆಲಸದ ಒತ್ತಡದಿಂದಾಗಿ ನನ್ನ ಮಾನಸಿಕ ಆರೋಗ್ಯ ಹಾಳಾಗಿದೆ. ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಬಂದಿದೆ. ನಾನು ಈ ಕೆಲಸಕ್ಕೆ ಸೇರಿದ್ದೆ ತಪ್ಪಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಫೀಸ್‌ನಲ್ಲಿ ಕಾಫಿ ಕುಡಿಯುವಂತಿಲ್ಲ; ಬಾಸ್‌ನ ವಿಚಿತ್ರ ರೂಲ್ಸ್‌ಗೆ ಉದ್ಯೋಗಿ ಶಾಕ್
ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅವಳಿಗೆ ತಿಳಿಸಿ ಒತ್ತಡದ ಭರಿತ ಕೆಲಸದ ಸ್ಥಳದಿಂದ ಹೊರಬರುವುದು ಹೇಗೆಂದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಮ್ಯಾನೇಜರ್ ಎಷ್ಟು ರೂಡ್ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕೆಲಸಕ್ಕೆ ರಿಸೈನ್ ಹೇಳುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ