AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆಫೀಸ್‌ನಲ್ಲಿ ಕಾಫಿ ಕುಡಿಯುವಂತಿಲ್ಲ; ಬಾಸ್‌ನ ವಿಚಿತ್ರ ರೂಲ್ಸ್‌ಗೆ ಉದ್ಯೋಗಿ ಶಾಕ್

ಕೆಲವೊಮ್ಮೆ ಬಾಸ್ ಕಿರಿಕಿರಿ ಎಷ್ಟು ಅಂದ್ರೆ ಉದ್ಯೋಗಿಗಳು ನಿಂತರೂ ತಪ್ಪು, ಕುಳಿತರೂ ತಪ್ಪು. ಆದರೆ ಇದೀಗ ಉದ್ಯೋಗಿಯೊಬ್ಬರು ತಮ್ಮ ಬಾಸ್‌ನ ವಿಚಿತ್ರ ನಿಯಮಕ್ಕೆ ಶಾಕ್ ಆಗಿದ್ದಾರೆ. ಹೌದು, ಆಫೀಸಿನಲ್ಲಿ ಕಾಫಿ ಕುಡಿಯುವಂತಿಲ್ಲ. ಕಾಫಿ ಕುಡಿಯಲೇ ಬೇಕು ಈ ಕೆಲಸ ಮಾಡಿ ಎಂದಿದ್ದಾರೆ. ಬಾಸ್‌ನ ಈ ರೂಲ್ಸ್‌ಗೆ ಉದ್ಯೋಗಿ ಬೇಸತ್ತು ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಆಫೀಸ್‌ನಲ್ಲಿ ಕಾಫಿ ಕುಡಿಯುವಂತಿಲ್ಲ; ಬಾಸ್‌ನ ವಿಚಿತ್ರ ರೂಲ್ಸ್‌ಗೆ ಉದ್ಯೋಗಿ ಶಾಕ್
ಸಾಂದರ್ಭಿಕ ಚಿತ್ರImage Credit source: HR Rise
ಸಾಯಿನಂದಾ
|

Updated on:Oct 19, 2026 | 10:54 AM

Share

ಕೆಲವರಿಗೆ ಏನು ಇಲ್ಲ ಅಂದ್ರೂ ಕಾಫಿ ಟೀ ಮಾತ್ರ ಟೈಮ್ ಟೈಮ್ ಗೆ ಕುಡಿಯುತ್ತಿರಬೇಕು. ಕೆಲ್ಸದ ನಡುವೆ ಕಾಫಿ ಟೀಗೆ ಅಡಿಕ್ಟ್ ಆಗಿರ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ (employee) ಬಾಸ್ ಮಾತ್ರ ಇದೇ ವಿಚಾರವಾಗಿ ರೂಲ್ಸ್ ಮಾಡಿದ್ದಾರೆ. ಡ್ಯೂಟಿ ಟೈಮ್‌ನಲ್ಲಿ ಕಾಫಿ ಕುಡಿಬಾರದು. ಕುಡಿಯಲೇಬೇಕು ಅಂತಿದ್ರೆ ಒಂದು ಗಂಟೆ ತಡವಾಗಿ ಆಫೀಸಿಗೆ ಬರುವಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಕಾಫಿ ವಿಚಾರವಾಗಿ ಬಾಸ್ ಹಾಕಿದ ವಿಚಿತ್ರ ರೂಲ್ಸ್ ಉದ್ಯೋಗಿಗೆ ತಲೆ ನೋವಾಗಿದೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಆಫೀಸಿನಲ್ಲಿ ಕಾಫಿ ಕುಡಿಯುವಂತಿಲ್ಲ

ಅಂಟಿವರ್ಕ್ (r/antiwork) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಕೆಲಸದ ಸಮಯದಲ್ಲಿ ನಾನು ಕಾಫಿ ಕುಡಿಯುವುದನ್ನು ಬಾಸ್ ಬಯಸದ ಕಾರಣ, ನಾನು ಒಂದು ಗಂಟೆ ತಡವಾಗಿ ಕೆಲಸ ಪ್ರಾರಂಭಿಸಬೇಕೆಂದು ಬಯಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ಕಚೇರಿಯಲ್ಲಿ ಕೆಲಸದ ಅವಧಿಯಲ್ಲಿ ಕಾಫಿ ಕುಡಿಯಲು ಅವಕಾಶವಿಲ್ಲ. ಥರ್ಮಸ್‌ನಲ್ಲಿ ಕಾಫಿ ತಂದು ಕುಡಿಯುವುದಕ್ಕೂ ಪರ್ಮಿಷನ್ ಇಲ್ಲ. ಇನ್ನು ಕಾಫಿ ತಯಾರಿಸುವ ಯಂತ್ರ ಕೇವಲ 20 ಸೆಕೆಂಡುಗಳ ದೂರದಲ್ಲಿದೆ. ಮೆಷಿನ್ ಹತ್ರ ಹೋಗಿ ಕಾಫಿ ಕುಡಿಯುವುದಕ್ಕೂ ನೋ ಪರ್ಮಿಷನ್. ಕಾಫಿ ಕುಡಿದ್ರೆ ಸಮಯ ವ್ಯರ್ಥ ಜತೆಗೆ ಕೆಲಸವೂ ಹಾಳಾಗುತ್ತದೆ ಎಂದು ಬಾಸ್ ಹೇಳ್ತಾರೆ. ಇಂತಹ ಅನುಭವ ಹಿಂದೆಂದಿಗೂ ಆಗಿರಲಿಲ್ಲ. ಆದರೆ ಕಾಫಿ ಕುಡಿಯದೇ ಇರಲು ಆಗಲ್ಲ. ಹೀಗಾಗಿ ಸಹೋದ್ಯೋಗಿ ಮಿತ್ರರು ನನ್ನ ಕಾಫಿ ತಯಾರಿಸುವ ಯಂತ್ರ ಬಳಿ ಕಳಿಸ್ತಾರೆ. ಕಳೆದ 4 ವರ್ಷಗಳಿಂದ ಅವರಿಗೆ ಯಾರೂ ಸಿಕ್ಕಿಲ್ಲ ಎಂದು ಬಾಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Boss wants me to start an hour later because he doesn’t want me to get a coffee during worktime by u/thaithaipoppetje17 in antiwork

ಸಣ್ಣ ವಿಷ್ಯದಲ್ಲೂ ಮೂಗು ತೂರಿಸುವ ಬಾಸ್

ಬೇಸರದ ಸಂಗತಿಯೆಂದರೆ ನಾನು ಈ ಕೆಲಸಕ್ಕೆ ಹೊಸಬನಾಗಿದ್ದೇನೆ. ಇಲ್ಲಿನ ಅಡುಗೆಯವರಲ್ಲಿ ಒಬ್ಬರು ನನ್ನ ಆಪ್ತ ಸ್ನೇಹಿತರಾಗಿದ್ದಾರೆ. ಆದರೆ, ನಮ್ಮ ಈ ಹೊಸ ಬಾಸ್ ಪ್ರತಿಯೊಂದು ಸಣ್ಣ ವಿಷಯದಲ್ಲೂ ಅನಗತ್ಯವಾಗಿ ಮೂಗು ತೂರಿಸುವ ಸ್ವಭಾವದವರಾಗಿದ್ದಾರೆ. ಬಾಸ್ ವರ್ತನೆ ತೀರಾ ಕೆಟ್ಟದಾಗಿದೆ. ಅವರು ಹೇಳುವ ಕೆಲ ಮಾತುಗಳು ಸುಳ್ಳು ಎಂಬುದು ನನಗೆ ಗೊತ್ತಾಗಿದೆ. ನನ್ನ ಬಾಸ್ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಅದು ಸುಳ್ಳು, ವಾಸ್ತವವಾಗಿ 2 ವರ್ಷಗಳಷ್ಟೇ ಆಗಿದೆ. ಹೀಗೆ ಇನ್ನೂ ಅನೇಕ ವಿಷಯಗಳಿವೆ ಆದರೆ ಅವೆಲ್ಲವನ್ನೂ ಇಲ್ಲಿ ವಿವರಿಸಲು ಹೋಗುವುದಿಲ್ಲ. ಈ ಬಾಸ್ ಕಾರಣದಿಂದಾಗಿ ಅನೇಕ ಉದ್ಯೋಗಿಗಳು ಕೆಲಸ ತ್ಯಜಿಸಿದ್ದಾರೆ. ಕೆಲಸದ ಸ್ಥಳದ ವಾತಾವರಣವು ತುಂಬಾ ಹದಗೆಟ್ಟಿದೆ ಎಂದು ಬಾಸ್ ನಡವಳಿಕೆ ಬಗ್ಗೆ ವಿವರಿಸಿದ್ದಾರೆ.

ಬಾಸ್‌ಗೆ ಹೊಂದಿಕೊಳ್ಳೋದು ದೊಡ್ಡ ಸಮಸ್ಯೆ

ಕಾಫಿಯ ವಿಷಯವಂತೂ ಸಣ್ಣದು ಬಿಡಿ, ಪ್ರಾರಂಭದಿಂದಲೂ ಬಾಸ್ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಹತ್ತು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿಗಳು ಸಣ್ಣ ವಿಷ್ಯಕ್ಕೂ ಮೂಗು ತೂರಿಸುವ ಹಾಗೂ ಸುಳ್ಳು ಹೇಳುವ ಈ ವ್ಯಕ್ತಿಗೆ ಹೆದರಿಕೊಂಡು ಬದುಕುತ್ತಿರುವುದನ್ನು ನೋಡುವುದು ತುಂಬಾ ಬೇಸರದ ಸಂಗತಿ. ಕೆಲವರು ಪ್ರತಿದಿನವೂ ಓವರ್ ಟೈಮ್ ಕೆಲಸ ಮಾಡಲು ಒಗ್ಗಿಕೊಂಡಿದ್ದಾರೆ. ನನಗೆ ಕೆಲಸ ಕಳೆದುಕೊಳ್ಳುವ ಭಯವಿಲ್ಲ; ನನಗೆ ಬೇರೆ ಅವಕಾಶಗಳು ಇವೆ. ನಾನು ಕೆಲಸ ಬಿಡುವುದಿಲ್ಲ, ಆದರೆ ನಂಬಲು ಸಾಧ್ಯವಾಗದ ಬಾಸ್ ನೊಂದಿಗೆ ಕೆಲಸ ಮಾಡಬೇಕಾದ ಈ ಪರಿಸ್ಥಿತಿಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ವಿಚಿತ್ರ ಕಾರಣಕ್ಕೆ ಬಾಸ್ ಗಡಿಯಾರದ ಸಮಯವನ್ನು ಮೂರು ನಿಮಿಷ ಮುಂದಕ್ಕೆ ಇಟ್ಟಿದ್ದಾನೆ. ಎಲ್ಲರೂ ಅದನ್ನು ಸರಿಪಡಿಸಿದರೂ, ಆತ ಮತ್ತೆ ಅದನ್ನು ಬದಲಾಯಿಸುತ್ತಲೇ ಇರುತ್ತಾನೆ ಎಂದು ಬಾಸ್ ನ ಮನಸ್ಥಿತಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ, ನೀವೊಬ್ಬರೇ ಅವರ ವಿರುದ್ಧ ಧ್ವನಿ ಎತ್ತಿದರೆ ಸಾಲದು, ಸಹೋದ್ಯೋಗಿಗಳು ನಿಮ್ಮ ಜತೆಗೆ ಜತೆಯಾಗಲಿ ಎಂದಿದ್ದಾರೆ. ಮತ್ತೊಬ್ಬರು, ಬಾಸ್ ನ ವಿಚಿತ್ರ ರೂಲ್ಸ್ ಮಾಡುವುದರ ಹಿಂದಿನ ಉದ್ದೇಶ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಪೋಸ್ಟ್ ನಲ್ಲಿ ಎಲ್ಲಾ ವಿಷ್ಯಗಳು ಇವೆ. ನಿಮ್ಮ ಸಮಸ್ಯೆಯೇನು ಎಂಬುದು ತಿಳಿಯುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sun, 18 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್