Mother and Daughter: ನೃತ್ಯ ನಮ್ಮ ಮನಸ್ಸು ದೇಹವನ್ನು ತಣಿಸುತ್ತದೆ. ಆಹ್ಲಾದಕರ ಅನುಭವವನ್ನು ನೀಡುತ್ತದೆ. ನಿತ್ಯದ ಜಂಜಾಟಗಳಿಂದ ಮುಕ್ತಿ ಪಡೆಯಲು ಈಗಲೂ ಎಷ್ಟೋ ಮನೆಗಳಲ್ಲಿ ಮನೆಮಂದಿ ನರ್ತಿಸುವ ಅಭ್ಯಾಸವನ್ನಿಟ್ಟುಕೊಂಡಿದ್ದಾರೆ. ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ (Social Media) ಹಾಕುತ್ತಾರೆ ಇನ್ನೂ ಕೆಲವರು ತಮ್ಮ ಪಾಡಿಗೆ. ಇದೀಗ ವೈರಲ್ ಆಗಿರುವ ತಾಯಿ ಮಗಳು ಜೊತೆಯಾಗಿ ನರ್ತಿಸಿದ ವಿಡಿಯೋ ನೋಡಿ. ಬಚ್ನಾ ಏ ಹಸೀನೋ (Bachna Ey Haseeno) ಹಿಂದಿ ಟ್ರ್ಯಾಕ್ಗೆ ಇವರು ಆಕರ್ಷಕವಾಗಿ ನರ್ತಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಯನ್ನು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ : Viral: ಬೆಂಗಳೂರು; ಎಸ್ಎಸ್ಎಲ್ಸಿ ಮುಗಿಸಿ 38 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆಯಲಿರುವ ಆಟೋ ಚಾಲಕ
ಇನ್ಸ್ಟಾಗ್ರಾಂನ Mom Daughter Dance ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅನ್ನು ನಿನ್ನೆ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು ಒಂದು ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 8,000 ಜನರು ಲೈಕ್ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ಅನ್ನು ನೋಡಿ ಖುಷಿಯಿಂದ ಸ್ಪಂದಿಸುತ್ತಿದ್ದಾರೆ.
ತುಂಬಾ ಚೆನ್ನಾಗಿ ನರ್ತಿಸಿದ್ದೀರಿ, ದಯವಿಟ್ಟು ಆದಿವಾಸಿಗಳ ಡ್ಯಾನ್ಸ್ ಮಾಡಿ ಎಂದಿದ್ದಾರೆ ಒಬ್ಬರು. ಆಂಟೀ ದಪ್ಪಗಿದ್ದರೂ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ಅಮ್ಮನ ಎನರ್ಜಿ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು. ಅಮ್ಮನಿಗೆ ಮಗಳು ಸ್ಫೂರ್ತಿಯೋ, ಮಗಳಿಗೆ ಅಮ್ಮ ಸ್ಫೂರ್ತಿಯೋ? ಎಂದು ಕೇಳಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral: ಗಣಿತ ಪರೀಕ್ಷೆಯಲ್ಲಿ ಸೊನ್ನೆ ಪಡೆದ ಮಗಳು; ಇಂಥ ಅಂಕ ಗಳಿಸಲು ತುಂಬಾ ಧೈರ್ಯ ಬೇಕು ಎಂದ ತಾಯಿ
ಆಂಟೀ ಮನಸ್ಸಿನಿಂದ ತಾವಿನ್ನೂ 20 ವರ್ಷದ ಹುಡುಗಿ ಎಂದೇ ಭಾವಿಸಿರಬೇಕು, ಹೀಗೆ ಯೋಚಿಸಿ ಬದುಕುವುದು ಬಹಳ ಒಳ್ಳೆಯದು. ಅದಕ್ಕಾಗಿಯೇ ಅವರು ಇಷ್ಟು ಸಲೀಸಾಗಿ ನರ್ತಿಸಲು ಸಾಧ್ಯವಾಗಿದೆ ಎಂದಿದ್ದಾರೆ ಒಬ್ಬರು. ಅಂತೂ ನೆಟ್ಟಿಗರು ಈ ಅಮ್ಮ ಮಗಳ ಶಕ್ತಿ ಮತ್ತುಉತ್ಸಾಹ ನೋಡಿ ಖುಷಿಗೊಂಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:22 am, Wed, 30 August 23