ಈ ಐಫೋನ್ ಶೋಕಿ ದಿನೇ ದಿನೇ ಹೆಚ್ಚಾಗುತ್ತಿದೆ. ಯಾರ ಕೈಯಲ್ಲಿ ನೋಡಿದ್ರೂ ಇದೇ ಫೋನ್. ಕೆಲವರು ಶೋಕಿಗಾಗಿ ಸಾಲ ಮಾಡಿ ಆದ್ರೂ ತುಪ್ಪ ತಿನ್ನು ಎಂಬ ಮಾತಿನಂತೆ ಸಾಲ ಮಾಡಿ ಈ ಬ್ರಾಂಡೆಡ್ ಫೋನ್ ಅನ್ನು ಖರೀದಿ ಮಾಡುತ್ತಾರೆ. ಇನ್ನೂ ಕೆಲ ಸಮಯದ ಹಿಂದೆ ದಂಪತಿಗಳಿಬ್ಬರು ಐಫೋನ್ ಖರೀದಿಸಲು ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ ಸುದ್ದಿಯೊಂದು ವೈರಲ್ ಆಗಿತ್ತು. ಇದೀಗ ಇಲ್ಲೊಬ್ಬ ಯುವಕ ಐಫೋನ್ ಗಾಗಿ 3 ದಿನಗಳ ಕಾಲ ಊಟ ಬಿಟ್ಟು ಕುಳಿತಿದ್ದು, ಮಗನ ಕಷ್ಟವನ್ನು ನೋಡಲಾರದೆ ಹೂವಿನ ವ್ಯಾಪಾರ ಮಾಡುವ ತಾಯಿ ತಾನು ಕಷ್ಟ ಕಾಲಕ್ಕೆ ಕೂಡಿಟ್ಟ ಹಣದಿಂದ ಮಗನಿಗೆ ಫೋನ್ ಕೊಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೆತ್ತವರು ಮಕ್ಕಳಿಗಾಗಿ ಎಂತಹ ತ್ಯಾಗ ಬೇಕಾದರೂ ಮಾಡುತ್ತಾರೆ, ಎಷ್ಟೇ ಕಷ್ಟ ಆದ್ರೂ ಮಕ್ಕಳು ಇಷ್ಟ ಪಟ್ಟು ಕೇಳಿದ ವಸ್ತುಗಳನ್ನು ತೆಗೆದುಕೊಡುತ್ತಾರೆ. ಇಲ್ಲೊಬ್ಬ ಬಡ ತಾಯಿಯೂ ಐಫೋನ್ ಗಾಗಿ ಹಠ ಮಾಡಿ ಕುಳಿತ ಮಗನಿಗೆ ಕಷ್ಟ ಪಟ್ಟು ಸಂಪಾದಿಸಿದ ಹಣದಿಂದ ದುಬಾರಿ ಫೋನ್ ಕೊಡಿಸಿದ್ದಾರೆ. ಹೌದು ದೇವಸ್ಥಾನದ ಹೊರಗೆ ಹೂ ಮಾರಿ ಜೀವನ ಸಾಗಿಸುತ್ತಿದ್ದ ಈಕೆ ತನ್ನ ಮಗ ಊಟ ಬಿಟ್ಟು ಕುಳಿತಿದ್ದಾನೆ ಎಂಬ ಕಾರಣಕ್ಕೆ ಎಷ್ಟೇ ಕಷ್ಟ ಆದ್ರೂ ಕೂಡಾ ಮಗನಿಗೆ ದುಬಾರಿ ಫೋನ್ ಕೊಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This Guy stopped eating food and was demanding iPhone from her mother, His mother finally relented and gave him money to buy iPhone. She sells flowers outside a mandir.
pic.twitter.com/CS59FAS4Z4— Ghar Ke Kalesh (@gharkekalesh) August 18, 2024
ಈ ಕುರಿತ ಪೋಸ್ಟ್ ಒಂದನ್ನು @gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಯುವಕ ಐಫೋನ್ ಬೇಕೆಂದು ಹಠ ಹಿಡಿದು ಊಟ ಸೇವಿಸುವುದನ್ನೇ ನಿಲ್ಲಿಸುತ್ತಾನೆ. ಮಗನ ಕಷ್ಟ ನೋಡಲಾರದೆ ದೇವಸ್ಥಾನದಲ್ಲಿ ಹೂ ಮಾರುವ ತಾಯಿ ಮಗನಿಗೆ ದುಬಾರಿ ಫೋನ್ ಕೊಡಿಸಿದರು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಮೊಬೈಲ್ ಅಂಗಡಿ ಮಾಲೀಕ ಐಫೋನ್ ಖರೀದಿಸಲು ಬಂದ ತಾಯಿ ಮಗನ ಬಳಿ ಮಾತನಾಡಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಐಫೋನ್ ಬೇಕೆಂದು ಮಗ ಊಟ ಬಿಟ್ಟು ಕುಳಿತಿದ್ದು, ಇದನ್ನು ಸಹಿಸಲಾರದೆ ಕಷ್ಟಪಟ್ಟು ಮಗನಿಗೆ ಮೊಬೈಲ್ ಕೊಡಿಸುತ್ತಿದ್ದೇನೆ ಎಂದು ತಾಯಿ ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅರರೇ…. ಈ ಪುಟ್ಟ ಪೋರಿ ಅದೆಷ್ಟು ಚಂದವಾಗಿ ದೋಸೆ ಮಾಡುತ್ತಾಳೆ ನೋಡಿ
ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಐಫೋನ್ ಶೋಕಿ ಕೆಳ ಮಧ್ಯಮ ವರ್ಗದ ಪೋಷಕರ ಮೇಲೆ ಪರಿಣಾಮ ಬೀರುತ್ತಿದೆ’ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ದೃಶ್ಯ ನೋಡಲು ತುಂಬಾ ದುಃಖಕರವಾಗಿದೆ. ಆ ತಾಯಿ ತುಂಬಾ ಬೇಸರಗೊಂಡಂತೆ ಕಾಣುತ್ತಿದೆ’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಕ್ಕಳು ಹಠ ಮಾಡಿದ್ರೂ ಎಂಬ ಕಾರಣಕ್ಕೆ ಅವರು ಕೇಳಿದನ್ನೆಲ್ಲಾ ಕೊಡಿಸುವ ಅವಶ್ಯಕತೆ ಇಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ