Viral Video: ‘ಕಾವಾಲಾ ಕಾವು’ ಇದೀಗ ಮುಂಬೈ ಪೊಲೀಸರೊಬ್ಬರಿಗೆ; ಭಲೇ ಎಂದ ನೆಟ್ಟಿಗರು

Kaavaalaa : ಮೊನ್ನೆಯಷ್ಟೇ ಜಪಾನಿನ ರಾಯಭಾರಿ ಕಾವಾಲಾ ಹಾಡಿಗೆ ನರ್ತಿಸಿ ರೀಲ್ ಮಾಡಿದ್ದರು. ಇದೀಗ ಮುಂಬೈನ ಪೊಲೀಸರು ಇದೇ ಟ್ರೆಂಡಿಂಗ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನೆಟ್ಟಿಗರು ಪೊಲೀಸರ್ ಅನ್ಮೋಲ್ ಕಾಂಬ್ಳೆಯವರ ನೃತ್ಯಾಸಕ್ತಿಯನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ನೀವು ಈಗಿನ ಪೀಳಿಗೆಗೆ ಸ್ಫೂರ್ತಿ ಎನ್ನುತ್ತಿದ್ಧಾರೆ. ನೀವು?

Viral Video: ಕಾವಾಲಾ ಕಾವು ಇದೀಗ ಮುಂಬೈ ಪೊಲೀಸರೊಬ್ಬರಿಗೆ; ಭಲೇ ಎಂದ ನೆಟ್ಟಿಗರು
ಮುಂಬೈನ ಪೊಲೀಸ್​ ಅನ್ಮೋಲ್ ಕಾಂಬ್ಳೆ ಮತ್ತು ಶ್ರೇಯಾ ಸಿಂಗ್

Updated on: Aug 21, 2023 | 1:05 PM

Jailer : ಸಾಮಾಜಿಕ ಜಾಲತಾಣಗಲ್ಲಿ ಈಗೇನಿದ್ದರೂ ‘ಜೈಲರ್’ನದೇ​ ಹವಾ. ಜಗತ್ತಿನ ಬೇರೆಬೇರೆ ದೇಶಗಳ ಸಿನಿಪ್ರಿಯರು, ನೃತ್ಯಪ್ರಿಯರು ಮತ್ತು ರಜಿನಿಕಾಂತ್​ ತಮನ್ನಾ ಭಾಟಿಯಾ (Tamanna Bhatiya) ಅಭಿಮಾನಿಗಳು ಈ ಸಿನೆಮಾದ ‘ಕಾವಾಲಾ’ ಹಾಡಿಗೆ ಹೆಜ್ಜೆ ಹಾಕುತ್ತಲೇ ಇದ್ದಾರೆ. ಭಾರತ ಒಳಗೊಂಡಂತೆ ಜಪಾನ್​, ಕೊರಿಯಾ, ದಕ್ಷಿಣ ಕೊರಿಯಾ ಮುಂತಾದ ದೇಶಗಳ ರೀಲಿಗರು ಉತ್ಸಾಹದಿಂದ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಜಪಾನಿನ ರಾಯಭಾರಿ ಕೂಡ ಈ ಹಾಡಿಗೆ ಹೆಜ್ಜೆ ಹಾಕಿ ಶಿಳ್ಳೆ ಹೊಡೆಸಿಕೊಂಡಿದ್ದರು. ಇದೀಗ ಮುಂಬೈನ ಪೊಲೀಸ್​ ಅಮೋಲ್ ಕಾಂಬ್ಳೆ ಶ್ರೇಯಾ ಸಿಂಗ್​ ಎಂಬ ಕಲಾವಿದೆಯೊಂದಿಗೆ ತಮನ್ನಾರ ಈ ಹಾಡಿಗೆ ಹೆಜ್ಜೆ ಹಾಕಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜುಲೈ 21 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಇನ್​​ಸ್ಟಾಗ್ರಾಮಿನಲ್ಲಿ ಈತನಕ 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ತಮಗನ್ನಿಸಿದ್ದನ್ನು ಪ್ರತಿಕ್ರಿಯಿಸಿದ್ದಾರೆ. ಇದು ವಾಹ್​, ಅದ್ಭುತವಾದ ನೃತ್ಯ ಶೈಲಿ ಎಂದಿದ್ದಾರೆ ಒಬ್ಬರು. ಇದು ತುಂಬಾ ಒಳ್ಳೆಯ ಪ್ರದರ್ಶನ ಅಣ್ಣಾ ಎಂದಿದ್ದಾರೆ ಇನ್ನೊಬ್ಬರು. ಅತ್ಯಂತ ಸುಂದರವಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ಆಹಾ ಎಂಥ ಮಸ್ತ್ ಸ್ಟೆಪ್ಸ್​ ಎಂದಿದ್ದಾರೆ ಇನ್ನೂ ಒಬ್ಬರು.

ಪೊಲೀಸ್ ಅಮೋಲ್​ ಕಾಂಬ್ಳೆ ಮತ್ತು ಕಲಾವಿದೆ ಶ್ರೇಯಾ ಸಿಂಗ್​ರ ಕಾವಾಲಾ ಡ್ಯಾನ್ಸ್​

ಪೊಲೀಸ್ ಅಮೋಲ್​ ನರ್ತಿಸಿರುವುದು ಇದು ಮೊದಲೇನಲ್ಲ. ಇವರ ಇನ್​ಸ್ಟಾಗ್ರಾಂನ ಖಾತೆಯಲ್ಲಿ ಬೇರೆ ಬೇರೆ ಕಲಾವಿದ ಮತ್ತು ಕಲಾವಿದೆಯರೊಂದಿಗೆ ಇವರು ಡ್ಯಾನ್ಸ್ ರೀಲ್ ಮಾಡಿದ್ದಾರೆ. ದೇಶದ ಸೇವೆಗಾಗಿ ತಾನು ಸದಾ ಸಿದ್ಧ ಎಂದು ತಮ್ಮ ಬಯೋನಲ್ಲಿ ಬರೆದುಕೊಂಡಿದ್ದಾರೆ ಅಮೋಲ್​. ಇವರ ಹವ್ಯಾಸಕ್ಕೆ ಇವರ ವೃತ್ತಿ, ತೂಕ, ವಯಸ್ಸು ಯಾವುದೂ ಅಡ್ಡಿಯಾದಂತಿಲ್ಲ. ಇನ್ನೊಬ್ಬ ಕಲಾವಿದೆಯೊಂದಿಗೆ ನರ್ತಿಸಿದ ಈ ರೀಲ್​ ನೋಡಿ.

ಹೇಗಿದೆ ಪೊಲೀಸರ ಮತ್ತೊಂದು ರೀಲ್​

ಪೊಲೀಸ್​ ಇಲಾಖೆಯಲ್ಲಿ ಇದಕ್ಕೆಲ್ಲ ಅನುಮತಿ ಇದೆಯಾ ಎಂದು ಕೇಳಿದ್ದಾರೆ ಕೆಲವರು. ನಿಜಕ್ಕೂ ನಿಮ್ಮ ಉತ್ಸಾಹ ಮೆಚ್ಚುವಂಥದ್ದು, ಯುವಪೀಳಿಗೆಗೆ ಸ್ಫೂರ್ತಿ ಎಂದಿದ್ದಾರೆ ಮತ್ತೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ