Mumbai: ‘ನಾನು ಕಳೆದುಕೊಂಡಿರುವ ಶಾಂತಿಯನ್ನು ಹುಡುಕಲು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ’ ಎಂದು ಮುಂಬೈನ ವೇದಿಕಾ ಆರ್ಯ ಎಂಬಾಕೆ Xನಲ್ಲಿ ಹಾಕಿದ ಪೊಲೀಸರನ್ನು (Police) ಟ್ಯಾಗ್ ಮಾಡಿದ್ದಾರೆ. ಇದೀಗ ನೆಟ್ಟಿಗರಿಗೆ ಒಳ್ಳೆಯ ಮನರಂಜನೆ ಕೊಡುತ್ತಿದೆ. ಸೃಜನಶೀಲರಾದ ಮುಂಬೈ ಪೊಲೀಸರು ಈ ಪೋಸ್ಟ್ಗೆ ಎಂದಿನಂತೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ. ತಮಾಷೆಯಾಗಿ ಆಕೆ ಈ ಪೋಸ್ಟ್ ಹಾಕಿದ್ದನ್ನು ಗಮನಿಸಿದ ಪೊಲೀಸರು ಸಿಕ್ಕ ಅವಕಾಶವನ್ನು ಬಿಡದೆ, ‘ಮಿಸ್ ಆರ್ಯ, ನಾವು ಹಲವಾರು ಮಂದಿ ಕೂಡ ಶಾಂತಿಯ ಹುಡುಕಾಟದಲ್ಲಿದ್ದೇವೆ. ಖಂಡಿತ ನೀವು ನಿಮ್ಮ ಆತ್ಮದಲ್ಲಿ ಅದನ್ನು ಕಂಡುಕೊಳ್ಳುತ್ತೀರಿ. ಈ ವಿಷಯವಾಗಿ ನಮ್ಮ ಮೇಲೆ ನೀವು ವಿಶ್ವಾಸವಿಟ್ಟಿದ್ದನ್ನು ಪ್ರಶಂಸಿಸುತ್ತೇವೆ, ಇನ್ನೇನಾದರೂ ಸ್ಪಷ್ಟತೆ ಬೇಕಿದ್ದರೆ ಖಂಡಿತ ನೀವು ನಮ್ಮ ಬಳಿ ಬರಬಹುದು’ ಎಂದು #EnsuringSukoonForMumbai #MumbaiFirst ಹ್ಯಾಷ್ಟ್ಯಾಗ್ ಸೇರಿಸಿದ್ದಾರೆ.
ಇದನ್ನೂ ಓದಿ : Viral Video: ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್ ಎಲ್ಲಿ ಎಂದ ನೆಟ್ಟಿಗರು
ಪೊಲೀಸರ ಈ ಫಿಲ್ಮಿ ಉತ್ತರ ಮತ್ತು ಬುದ್ಧಿವಂತಿಕೆ ನೆಟ್ಟಿಗರ ಮನಸ್ಸನ್ನು ಸೂರೆಗೊಂಡಿದೆ. ಮುಂಬೈ ಪೊಲೀಸರ ಹಾಸ್ಯಪ್ರಜ್ಞೆಯ ಪ್ರದರ್ಶನ ಪ್ರದರ್ಶನಗೊಳ್ಳುವುದು ಇದು ಮೊದಲ ಬಾರಿಯೇನಲ್ಲ. ಎರಡು ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್ ಅನ್ನು ಈತನಕ 1.4 ಲಕ್ಷ ಜನರು ನೋಡಿದ್ದಾರೆ. ಸುಮಾರು 500 ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
Many of us are in ‘talaash’ of ‘sukoon’ too Ms Arya! We appreciate your ‘aitbaar’ in us and are sure that you will find it in your ‘rooh’ – for anything else tangible, you may ‘beshaq’ come to us #EnsuringSukoonForMumbai #MumbaiFirst https://t.co/GkA3sTmf8n
— मुंबई पोलीस – Mumbai Police (@MumbaiPolice) October 31, 2023
ಅರೆ ವಾಹ್ ಶಾಹಿರಿ ಬರೆಯುವ ಪೊಲೀಸರಿದ್ದಾರೆ! ಎಂದಿದ್ದಾರೆ ಒಬ್ಬರು. ಓಹ್ ದೇವರೇ, ನೀವು ಪೊಲೀಸರು ಪ್ರತೀದಿನ ಏನೆಲ್ಲ ಅನುಭವಿಸಬೇಕು ಎನ್ನುವುದು ನಂಬಲಸಾಧ್ಯ ಎಂದಿದ್ದಾರೆ ಇನ್ನೊಬ್ಬರು. ಸಾಮಾಜಿಕ ಜಾಲತಾಣದ ಈ ಪುಟವನ್ನು ನಿರ್ವಹಿಸುವವರು ಯಾರು? ಅವರು ಹೀಗೆ ಆಗಾಗ ಮಿನುಗುತ್ತಿರುತ್ತಾರೆ ಮರೆಯಲ್ಲೇ ಎಂದಿದ್ದಾರೆ ಮತ್ತೊಬ್ಬರು. ಜಾವೇದ್ ಅಖ್ತರ್ ನಿಮ್ಮ ಐಡಿಯಿಂದ ಬರೆದಿರಬೇಕು ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ‘ಹುಡುಗ ಹರೆಯಕ್ಕೆ ಬಂದಿದ್ದಾನೆ ಬಯ್ಯದೇ ಪ್ರೀತಿಯಿಂದ ತಿದ್ದಿ’ ಎನ್ನುತ್ತಿರುವ ಶ್ವಾನಪ್ರೇಮಿಗಳು
ಸಾರ್ವಜನಿಕರೊಂದಿಗೆ ಶಾಂತವಾಗಿ, ಸಂವಾದಾತ್ಮಕ ಮತ್ತು ತಮಾಷೆಯಾಗಿ ಪ್ರತಿಕ್ರಿಯಿಸುವ ವಿಷಯವಾಗಿ ಮುಂಬೈ ಪೊಲೀಸರು ಪ್ರಸಿದ್ಧಿ ಪಡೆದಿದ್ದಾರೆ. 2015 ರ ಡಿಸೆಂಬರ್ನಲ್ಲಿ X ಖಾತೆ ತೆರೆಯಲಾಗಿದ್ದು ಈತನಕ ಸುಮಾರು 5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:13 pm, Fri, 3 November 23