
ಹೆಚ್ಚಿನವರು ತಮ್ಮ ಹೆಂಡ್ತಿ ಮಕ್ಕಳಿಗಾಗಿ ದೂರದ ಬೆಂಗಳೂರಲ್ಲೋ, ಮುಂಬೈಯಲ್ಲೋ ಸಣ್ಣ ಪುಟ್ಟ ಉದ್ಯೋಗ (Job) ಮಾಡ್ತಾರೆ. ತನ್ನ ದುಡಿಮೆಯ ಹಣದಿಂದ ಹೆಂಡ್ತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ತನ್ನ ಊರಿನಿಂದ ತನ್ನ ಹೆಂಡ್ತಿ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಕರೆ ಬಂದರೆ ಆ ಸನ್ನಿವೇಶ ಹೇಗಿರಬಹುದು ಒಂದು ಒಮ್ಮೆ ಊಹಿಸಿ. ಮುಂಬೈನಲ್ಲಿ (Mumbai) ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿರುವ ವ್ಯಕ್ತಿಗೆ ನಿಮ್ಮ ಮಗಳಿಗೆ ಅಪಘಾತವಾಗಿದೆ ಎನ್ನುವ ಕರೆ ಬಂದಿದೆ. ಈ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ವ್ಯಕ್ತಿಯೂ ತಂದೆಯೊಬ್ಬನ ಆತಂಕ, ಚಡಪಡಿಕೆ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಟ್ಯಾಕ್ಸಿ ಚಾಲಕ ಹೇಳಿದ ಮಾತು ಈ ವ್ಯಕ್ತಿಯ ಮನಸ್ಸನ್ನು ನಾಟಿದೆಯಂತೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಮೆಹುಲ್ ಆರ್ ಥಕ್ಕರ್ ಹೆಸರಿನ ಎಕ್ಸ್ ಖಾತೆಯಲ್ಲಿ ದಾದರ್‌ನಲ್ಲಿ ಕಾಳಿ-ಪೀಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅನಿರೀಕ್ಷಿತವಾಗಿ ಸಂಭವಿಸಿದ ಸನ್ನಿವೇಶವನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ವ್ಯಕ್ತಿಯೊಬ್ಬರು, ನಾನು ಮುಂಬೈನ ದಾದರ್‌ನಲ್ಲಿ ಕಾಳಿ-ಪೀಲಿ ಟ್ಯಾಕ್ಸಿಯಲ್ಲಿದ್ದೆ.. ದಾರಿ ಮಧ್ಯದಲ್ಲಿ, ಚಾಲಕನಿಗೆ ಅವನ ಊರಿಂದ ಕರೆ ಬಂತು. ಅವನ ಮಗಳು ಅಪಘಾತಕ್ಕೀಡಾಗಿದ್ದಳು. ಭಯವು ತಕ್ಷಣ ಅವನನ್ನು ಆವರಿಸಿಕೊಳ್ಳುವುದನ್ನು ನಾನು ನೋಡಿದೆ. ನಾನು ಅವನನ್ನು ಕ್ಯಾಬ್ ನಿಲ್ಲಿಸಲು ಕೇಳಿದಾಗ, ಅವನ ಕೈಗಳು ನಡುಗುತ್ತಿದ್ದವು, ಅವನ ಧ್ವನಿಯೇ ಬರದಂತೆ ಆಯಿತು. ಅವನು ತಕ್ಷಣ ತನ್ನ ಹೆಂಡತಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿ ಸ್ಥಳಕ್ಕೆ ಹೋಗುವಂತೆ ಹೇಳಿದನು ಎಂದು ಆ ಸಂದರ್ಭವನ್ನು ವಿವರಿಸಿದ್ದಾರೆ.
On Monday, I was in a kaali-peeli taxi in Dadar, Mumbai..
Midway, the driver got a call from his native place. His daughter had met with an accident. I could see the panic instantly take over him..While I asked him to stop the cab, his hands were shaking, his voice broke, and… pic.twitter.com/telKVP8fYE
— Mehul R. Thakkar (@MehulThakkar_) October 29, 2025
ಆ ಬಳಿಕ ನಾವು ಅವನಿಗೆ ಮಾಹಿತಿ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿದೆವು. ಅದೃಷ್ಟವಶಾತ್, ಗಾಯ ಅಷ್ಟೇನು ದೊಡ್ಡದಾಗಿರಲಿಲ್ಲ. ಅವಳು ಗಾಯಗೊಂಡಿದ್ದಳು (ಬಹುಶಃ ಕೈ ಮುರಿದಿರಬಹುದು). ನಾನು ಮಾಡಬಹುದಾದ ಏಕೈಕ ವಿಷಯವೆಂದರೆ ಅವನಿಗೆ ಗಾಬರಿಯಾಗುವ ಬದಲು ನಿಧಾನವಾಗಿ ಉಸಿರಾಡಲು ಹೇಳಿದೆ. ಆದರೆ ಆ ನಂತರದಲ್ಲಿ ಅವನು ನಾನು ಮನೆಗೆ ಹೋಗಬೇಕು. ನನ್ನ ಕುಟುಂಬಕ್ಕೆ ಈಗ ಅಲ್ಲಿ ನನ್ನ ಅಗತ್ಯವಿದೆ. ಆದರೆ ನಾನು ಹೋದರೆ, ನಾನು 10 ದಿನಗಳವರೆಗೆ ಏನು ಆದಾಯವೇ ಇರಲ್ಲ. ಮನೆಗೆ ಹೋದರೆ ಹಣ ಬೇಕಾಗುತ್ತದೆ ಎಂದನು ಈ ಮಾತು ನನ್ನ ಮನಸ್ಸಿಗೆ ತಟ್ಟಿತು ಎಂದು ಹೇಳಿದ್ದಾರೆ.
ನಾವು ಆಗಾಗ್ಗೆ ಕೆಲಸ-ಜೀವನ ಸಮತೋಲನ, ರಜೆಗಳು, ಸಿಎಲ್, ಪಿ ಎಲ್, ಮಾನಸಿಕ ಆರೋಗ್ಯ ದಿನಗಳ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಸುತ್ತಲೂ ಈ ಆಫರ್ ಇಲ್ಲದೇ ದುಡಿಯುವ. ಪಾವತಿಸಿದ ರಜೆಗಳಿಲ್ಲ, ಸುರಕ್ಷತಾ ಜಾಲವಿಲ್ಲ, ಬ್ಯಾಕಪ್ ಯೋಜನೆಯಂತೂ ಇಲ್ಲವೇ ಇಲ್ಲ. ದಿನದಿಂದ ದಿನಕ್ಕೆ ಇವರ ಜೀವನವು ನಿಜವಾಗಿಯೂ ಎಲ್ಲರಿಗೂ ವಿಭಿನ್ನವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ, ದಿನದ ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ
ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮಗಳಿಗಿಂತ ಕೆಲಸ ಮುಖ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ನೀವು ಆ ಟ್ಯಾಕ್ಸಿ ಡ್ರೈವರ್ ಗೆ ಸಹಾಯ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ಮನಸ್ಸು ಮುಟ್ಟುವಂತಿದೆ. ನಿಜಕ್ಕೂ ಬದುಕು ಹೀಗೇನೆ ಅಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Fri, 31 October 25