Love Affair : ‘ಡಿಸ್ಟನ್ಸ್ ರಿಲೇಶನ್ಶಿಪ್ಗೆ ಅಡಿ ಇಡುವ ಮೊದಲು ಕೊನೆಯ ಬಾರಿ ನಾವಿಬ್ಬರೂ ದೈಹಿಕ ಸಂಪರ್ಕಕ್ಕೆ ಒಳಗಾದೆವು. ಈತನಕವೂ ಕಾಂಡೋಮ್ ಇಲ್ಲದೆಯೇ ಸುರಕ್ಷಿತ ಸಂಭೋಗ ಸಾಧಿಸಿದ್ದರಿಂದ ಈ ಬಾರಿಯೂ ಹಾಗೇ ಆಗಲಿ ಎಂದು ನನ್ನ ಹುಡುಗಿ ಬಯಸಿದಳು. ಆದರೆ, ಅಂದುಕೊಂಡಂತೆ ಆಗಲಿಲ್ಲ. ಎರಡು ವಾರಗಳಿಂದ ಗರ್ಭಾವಸ್ಥೆಯ ಲಕ್ಷಣಗಳು ತೋರಿ ಆಕೆಯನ್ನು ಕಂಗೆಡಿಸುತ್ತಿವೆ. ನಾನು ವಿಶ್ವವಿದ್ಯಾಲಯದಲ್ಲಿ ಆಕೆ ಮನೆಯಲ್ಲಿ. ಹಾಗಾಗಿ ಪರಸ್ಪರರು ಭೇಟಿಯಾಗಲು ಸಾಧ್ಯವಿಲ್ಲ. ಹಾಗೆಂದು ನಮ್ಮ ನಮ್ಮ ಕುಟುಂಬಗಳಿಗೆ ಹೇಳುವುದೂ ಸಾಧ್ಯವಿಲ್ಲ. ಮಗುವನ್ನು ಪಡೆಯಲು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನಾವು ಸಬಲರಲ್ಲ. ಆದಕಾರಣ ಗರ್ಭಪಾತ (Abortion) ಮಾಡಿಸದೇ ಗತ್ಯಂತರವಿಲ್ಲ. ಈ ವಿಷಯವಾಗಿ ಸುರಕ್ಷಿತ ವಿಧಾನ ಯಾವುದು ಎಂದು ದಯವಿಟ್ಟು ತಿಳಿಸಬಹುದೆ?’ ರೆಡ್ಡಿಟ್ನಲ್ಲಿ ಭಾರತೀಯ ಯುವಕನೊಬ್ಬ ಸಹಾಯ ಕೋರಿ ಪೋಸ್ಟ್ ಮಾಡಿದ್ದಾನೆ.
ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?
7 ಗಂಟೆಗಳ ಹಿಂದೆ ಮಾಡಿದ ಈ ಪೋಸ್ಟ್ಗೆ 500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಜನರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಹೆಚ್ಚಿನ ಪಾಲು ಜನರು ಗಂಭೀರವಾಗಿಯೇ ಸಲಹೆ, ಸೂಚನೆ ನೀಡಿದ್ದಾರೆ. ಕೆಲ ಡಾಕ್ಟರ್ಗಳು ಕೂಡ ಇಲ್ಲಿ ಪಾಲ್ಗೊಂಡಿದ್ದಾರೆ.
I got my gf pregnant in Masters. We don’t want to continue with it. What should we do?
byu/go_champ inindia
ಈ ಹಂತದಲ್ಲಿ ಯಾವುದೇ ರೀತಿಯ ಮನೆಮದ್ದು ಮಾಡಬೇಡಿ. ಸ್ವಯಂ ಔಷಧಿಯನ್ನೂ ತೆಗೆದುಕೊಳ್ಳಬೇಡಿ. ನಾನು ದಿನಕ್ಕೆ ನೂರಾರು ರೋಗಿಗಳ ತಪಾಸಣೆ ಮಾಡುತ್ತೇನೆ. ಅವರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ರಕ್ತಸ್ರಾವ ನಿಲ್ಲುತ್ತಿಲ್ಲ ಎಂದು ಆಘಾತಗೊಂಡು ನನ್ನಲ್ಲಿಗೆ ಬರುತ್ತಾರೆ. ಎಂದಿದ್ಧಾರೆ ಒಬ್ಬ ವೈದ್ಯರು. ಯಾವುದೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಅಲ್ಟ್ರಾ ಸೌಂಡ್ ಮಾಡಿಸಿ. ಗರ್ಭಾವಸ್ಥೆಯ ಲಕ್ಷಣಗಳು ಸಾಮಾನ್ಯವಾಗಿ ಒಂದು ತಿಂಗಳ ನಂತರ ಕಾಣಿಸಿಕೊಳ್ಳುತ್ತವೆ. ನಿಮ್ಮ ಹುಡುಗಿ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಸೂರತ್ನ ಬೀದಿಯಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು; ಆರಿಸಿಕೊಳ್ಳಲು ಹೆಣಗಾಡುತ್ತಿರುವ ಜನ
ದಯವಿಟ್ಟು ಮುಂದಿನ ಸಲ ಕಾಂಡೋಮ್ ಬಳಸಿ. ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಇದು ತುಂಬಾ ವೈಯಕ್ತಿಕ ನಿರ್ಧಾರ, ರೆಡ್ಡಿಟ್ ಸದಸ್ಯರ ಸಲಹೆಯನ್ನು ನಿರೀಕ್ಷಿಸದಿರಿ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಹುಡುಗಿ ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆ ಮಾಡಿದ್ದಾರೆಯೇ? ಅದು ಪಾಸಿಟಿವ್ ಬಂದಿದ್ದರೆ ವೈದ್ಯರ ಬಳಿ ಹೋಗಿ, ಜೊತೆಗೆ ನೀವೂ ಹೋಗಿ. ಅಥವಾ ನಂಬಿಕೆಯುಳ್ಳ ಸ್ನೇಹಿತರು/ಕುಟುಂಬ ಸದಸ್ಯರೊಂದಿಗೆ ಹೋಗಲು ತಿಳಿಸಿ ಎಂದಿದ್ದಾರೆ ಮಗದೊಬ್ಬರು. ಒಟ್ಟಾರೆಯಾಗಿ ತಡಮಾಡಬೇಡಿ ಎಂದಿದ್ದಾರೆ ಅನೇಕರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:18 pm, Tue, 26 September 23