Viral: ‘ನನ್ನ ಮಲಮಗ ತನ್ನ ಸ್ನೇಹಿತರೆದುರು ನನ್ನನ್ನು ಮೊದಲ ಸಲ ಅಪ್ಪಾ ಎಂದು ಕರೆದಾಗ’

|

Updated on: Aug 14, 2023 | 12:31 PM

Father and Son : ಮದುವೆಯಿಂದಲೇ ಮೋಕ್ಷ ಎನ್ನುವ ಕಾಲ ಇದಲ್ಲ. ಒಂದು ಸಂಬಂಧದಲ್ಲಿ ಹೊಂದಾಣಿಕೆಯಾಗದಿದ್ದರೆ ಮತ್ತೊಂದು ಸಂಬಂಧಕ್ಕೆ ತೆರೆದುಕೊಳ್ಳುವಷ್ಟು ಸಹಜ ಕಾಲವಿದು. ಆದರೆ ಹಳೆಯ ಸಂಬಂಧದಿಂದ ಮಕ್ಕಳಿದ್ದಾಗ ಅವರು ಈ ಹೊಸ ಬಂಧವನ್ನು ಸ್ವೀಕರಿಸಲು ಅವಕಾಶ ನೀಡುವುದು ಅಕ್ಷರಶಃ ಸವಾಲು ಮತ್ತು ತಾಳ್ಮೆಯ ಪರೀಕ್ಷೆ. ಆ ತಾಳ್ಮೆ ಫಲಿಸಿದ ಕ್ಷಣ ಹೇಗಿರುತ್ತದೆ ಎಂದು ಓದಿ.

Viral: ನನ್ನ ಮಲಮಗ ತನ್ನ ಸ್ನೇಹಿತರೆದುರು ನನ್ನನ್ನು ಮೊದಲ ಸಲ ಅಪ್ಪಾ ಎಂದು ಕರೆದಾಗ
ಪ್ರಾತಿನಿಧಿಕ ಚಿತ್ರ
Follow us on

Fatherhood : ಬದುಕಿನಲ್ಲಿ ಯಾವುದ್ಯಾವುದೋ ಕಾರಣಗಳಿಗಾಗಿ ಗಂಡ-ಹೆಂಡತಿ ಸಂಬಂಧಗಳು ಮುರಿದುಹೋಗುತ್ತವೆ. ಮುರಿದು ಹೋದ ಮಾತ್ರಕ್ಕೆ ಬದುಕು ಮುಗಿಯಿತು ಅಂತಲ್ಲ. ಮುರಿಯುವಿಕೆಯೇ ಹೊಸ ಬದುಕಿನ ಆರಂಭಕ್ಕೆ ಸೂಚನೆ.  ಹಾಗೆಂದು ಹೊಸ ಬದುಕಿಗೆ ತೆರೆದುಕೊಳ್ಳುತ್ತಿದ್ದಂತೆ ಎಲ್ಲವೂ ತೆರೆಯ ಮೇಲಿನಂತೆ ಸುರಳಿತವಾಗಿ ಸಾಗುತ್ತದೆ ಅಂತಲ್ಲ. ಹಳೆಯ ಸಂಬಂಧದಿಂದ ಮಕ್ಕಳಿದ್ದಾಗ ಹೊಸ ಸವಾಲುಗಳು ಹುಟ್ಟುಕೊಳ್ಳುತ್ತವೆ. ಆಗ ಪರಸ್ಪರ ಹೊಸ ಬಂಧಗಳು ಬೆಸೆಯುವ ತನಕ ಪ್ರಯತ್ನ ನಡೆಸುತ್ತ ತಪಸ್ಸಿನಂತೆ ಕಾಯುವುದು ಅನಿವಾರ್ಯವಾಗುತ್ತದೆ. ಇದೀಗ ವೈರಲ್ ಆಗಿರುವ ಈ ರೆಡ್ಡಿಟ್​ ಪೋಸ್ಟ್​ ಗಮನಿಸಿ. ವ್ಯಕ್ತಿಯೊಬ್ಬರು ತಮ್ಮ ಮಲಮಗ (Stepson) ತನ್ನ ಸ್ನೇಹಿತರೆದುರು ತಮ್ಮನ್ನು ಮೊದಲ ಸಲ ‘ಅಪ್ಪಾ’ ಎಂದು ಕರೆದಿದ್ದನ್ನು ಅತ್ಯಂತ ಸಂತಸದಿಂದ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :  Viral Video: ಬೆನ್ನಿಗೆ ನಿಲ್ಲುವುದು ಎಂದರೆ ಇದೇ; ಇವರಿಬ್ಬರ ಬದುಕೀಗ ಮತ್ತೆ ಮೊದಲಿನಂತೆ

‘ನನ್ನ ಹೆಂಡತಿಯೊಂದಿಗೆ ಕಳೆದ 4 ವರ್ಷಗಳಿಂದ ವಾಸವಾಗಿದ್ದೇನೆ. ಆಕೆಗೆ ಹಳೆಯ ಸಂಬಂಧದಿಂದ 12 ವರ್ಷದ ಮಗನಿದ್ದಾನೆ. ಅವನು ಎಂದಿಗೂ ನನ್ನನ್ನು ದ್ವೇಷಿಸಲಿಲ್ಲ, ಆದರೆ ಅವನು ತನ್ನ ತಂದೆಯನ್ನು ಮಿಸ್​ ಮಾಡಿಕೊಳ್ಳುತ್ತಿರುತ್ತಾನೆ ಎನ್ನುವುದಂತೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಾಗಿಯೇ ಅವನು ನನ್ನನ್ನು ನನ್ನ ಹೆಸರಿನಿಂದಲೇ ಕರೆಯುತ್ತಿದ್ದ. ನನಗದು ಸ್ವಲ್ಪ ಇರಿಸುಮುರುಸಾಗುತ್ತಿತ್ತು. ಅವ ನನ್ನನ್ನು ಅಪ್ಪ ಅಂತಲೇ ಕರೆಯಲಿ ಎಂದು ನನ್ನ ಒಳಮನಸ್ಸು ಬಯಸುತ್ತಿತ್ತು. ಆದರೆ ಅವನನ್ನು ಎಂದಿಗೂ ಒತ್ತಾಯಿಸಲು ಹೋಗಲಿಲ್ಲ.’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಸಂದರ್ಭವನ್ನು ಅಪ್ಪ ಅಕ್ಷರಗಳಲ್ಲಿ ಹಿಡಿದಿಟ್ಟದ್ದು ಇಲ್ಲಿದೆ…

 

My stepson called me dad in front of his friends
by u/Remarkable_Clerk3807 in TrueOffMyChest

‘ಈವತ್ತು ಏನಾಯಿತೆಂದರೆ, ತನ್ನ ಸ್ನೇಹಿತರೊಂದಿಗೆ ಅಮ್ಯೂಸ್​ಮೆಂಟ್ ಪಾರ್ಕ್​ಗೆ ಹೋಗಬೇಕೆಂದು ಹೇಳಿದ. ನನಗೂ ತನ್ನೊಂದಿಗೆ ಬರಲು ಹೇಳಿದ. ಅದು ನನಗೆ ಬಹಳ ಖುಷಿಯಾಯಿತು. ತಕ್ಷಣವೇ ಅವನ ಸ್ನೇಹಿತರನ್ನೂ ಕರೆದುಕೊಂಡು ಕಾರಿನಲ್ಲಿ ಹೊರಟೆ. ಅವನ ಸ್ನೇಹಿತರಲ್ಲಿ ಹೊಸ ಮುಖವೊಂದು ಕಂಡಿತು. ಆಗ ಅವನಿಗೆ ಇವನು, ‘ಇವನು ನನ್ನ ಅಪ್ಪಾ’ ಎಂದು ಪರಿಚಯಿಸಿದ. ನಿಜಕ್ಕೂ ನಾನು ಮೂಕವಿಸ್ಮಿತನಾದೆ. ಕೆಲ ಕ್ಷಣಗಳ ನಂತರ ಖುಷಿಯಿಂದ ನಗಲಾರಂಭಿಸಿದೆ, ಇದನ್ನು ಮಗ ಗಮನಿಸಿದ ಕೂಡ.’

ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್

‘ಈಗ ಅವರು ಪಾರ್ಕ್​ನಲ್ಲಿ ಏನನ್ನೋ ದೊಡ್ಡ ಬಹುಮಾನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ನಾನಿನ್ನೂ ನಗುತ್ತಿದ್ದೇನೆ. ಇದೇನು ದೊಡ್ಡ ವಿಷಯವಲ್ಲ ಎಂದು ಗೊತ್ತು. ಆದರೆ ಸ್ವಲ್ಪ ಹೊತ್ತಿನವರೆಗೆ ನಾನು ಆ ಅಪೂರ್ವ ಕ್ಷಣಗಳಲ್ಲಿ ಮುಳುಗಿದ್ದೆನಲ್ಲ! ಇತ್ತೀಚೆಗೆ ನಾನು ಅನುಭವಿಸಿದ ಅತ್ಯಂತ ಸಂತೋಷದ ದಿನಗಳಲ್ಲಿ ಇದೂ ಒಂದಾಗಿದೆ’ ಇದು ಈ ಪೋಸ್ಟ್​ನ ಸಾರ.

ಇದನ್ನೂ ಓದಿ : Viral Video: ಫ್ಲೋರಿಡಾ; ಕಮೋಡ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಗುವಾನಾ; ವಿಡಿಯೋ ವೈರಲ್

ಈತನಕ ಈ ವಿಡಿಯೋ ಅನ್ನು ಸುಮಾರು 21,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ನನ್ನ ಮಲಮಗಳು ಮದರ್ಸ್​ ಡೇಗೆ ಪರ್ಫೆಕ್ಟ್ ಮಾಮ್​ ಎಂದು ಬರೆದ ಟೀಶರ್ಟ್​ ಅನ್ನು ನನಗೆ ಉಡುಗೊರೆಯಾಗಿ ಕೊಟ್ಟಾಗ ನಾನು ಸಂಪೂರ್ಣ ಕರಗಿಹೋಗಿದ್ದೆ ಎಂದಿದ್ದಾರೆ ಒಬ್ಬಾಕೆ. ಇದು ದೊಡ್ಡ ವಿಷಯವೇನಲ್ಲ ಎಂದಿದ್ದೀರಿ, ಅದು ಹಾಗಲ್ಲ. ನಿಮ್ಮ ಮಗ ಒಂದೊಂದೇ ಹೆಜ್ಜೆಯನ್ನಿಡಲು ಕಲಿಯುತ್ತಿದ್ದಾನೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:23 pm, Mon, 14 August 23