Viral : ಭಾರತೀಯರು ಪಾತ್ರೆಗಳನ್ನು ಕೈಯಿಂದ ತೊಳೆಯುವುದು ಏಕೆ? ಡಿಶ್ ವಾಶರ್ ಬಳಸದಿರಲು ಇದೇ ಕಾರಣವಂತೆ

ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ಮನುಷ್ಯನ ಬದುಕೇ ಯಂತ್ರಮಯವಾಗಿ ಬಿಟ್ಟಿದೆ. ಸಮಯದ ಅಭಾವದಿಂದ ಬೆಳಗ್ಗೆ ಎದ್ದಾಗಿನಿಂದ, ರಾತ್ರಿ ಮಲಗುವವರೆಗೂ ಎಲ್ಲಾ ಕೆಲಸಗಳಿಗೂ ಯಂತ್ರಗಳನ್ನು ಅವಲಂಬಿಸಿರುವವರೇ ಹೆಚ್ಚು. ಆದರೆ ಎಷ್ಟೇ ಕಷ್ಟವಾಗಲಿ ಭಾರತೀಯರು ಪಾತ್ರೆಯನ್ನು ಕೈಯಲ್ಲೇ ತೊಳೆಯುವುದನ್ನು ನೋಡಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ದೆಹಲಿ ವ್ಯಕ್ತಿಯೊಬ್ಬರು, ಡಿಶ್ ವಾಶರ್ ಭಾರತದಲ್ಲಿ ಯಾಕೆ ಜನಪ್ರಿಯವಾಗಿಲ್ಲ ಎಂದು ಕೇಳಿದ್ದಾರೆ. ಈ ಪೋಸ್ಟ್ ಹಾಕುತ್ತಿದ್ದಂತೆ ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ಬಳಕೆದಾರರು ಇದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

Viral : ಭಾರತೀಯರು ಪಾತ್ರೆಗಳನ್ನು ಕೈಯಿಂದ ತೊಳೆಯುವುದು ಏಕೆ? ಡಿಶ್ ವಾಶರ್ ಬಳಸದಿರಲು ಇದೇ ಕಾರಣವಂತೆ
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: Apr 08, 2025 | 4:26 PM

ಇಂದಿನ ಬ್ಯುಸಿ ಲೈಫ್ (busy life) ನಲ್ಲಿ ಉದ್ಯೋಗ (job) ದಲ್ಲಿರುವವರಿಗೆ ಮನೆ ಹಾಗೂ ಆಫೀಸು ಎರಡನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಹೀಗಾಗಿ ಬಹುತೇಕರು ಮನೆ ಕೆಲಸಗಳಿಗೆ ಯಂತ್ರಗಳನ್ನೆ ಅವಲಂಬಿಸಿಕೊಂಡಿದ್ದಾರೆ. ಮಿಕ್ಸಿಯಿಂದ ಹಿಡಿದು ಬಟ್ಟೆ ತೊಳೆಯುವುದಕ್ಕೂ ಮೆಷಿನ್ (mechine) ಗಳು ಬಂದಿವೆ. ಆದರೆ ಭಾರತದಲ್ಲಿ ಪಾತ್ರೆ ತೊಳೆಯುವ ಯಂತ್ರಗಳು ಅಷ್ಟೊಂದು ಜನಪ್ರಿಯವಾಗಿಲ್ಲ ಯಾಕೆ ಎಂದು ನೀವು ಒಮ್ಮೆಯಾದರೂ ಯೋಚಿಸಿದ್ದೀರಾ. ಇದೇ ಸೋಶಿಯಲ್ ಮೀಡಿಯಾದಲ್ಲಿ ದೆಹಲಿ (dehli) ಯ ವ್ಯಕ್ತಿಯೊಬ್ಬರು, ಭಾರತದಲ್ಲಿ ಡಿಶ್ ವಾಶರ್ (dishwasher) ಯಾಕೆ ಜನಪ್ರಿಯತೆ ಪಡೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

siddharth ಹೆಸರಿನ ಖಾತೆಯಲ್ಲಿ ವ್ಯಕ್ತಿಯೊಬ್ಬರು, ಭಾರತದಲ್ಲಿ ಪಾತ್ರೆ ತೊಳೆಯುವ ಯಂತ್ರಗಳು ಏಕೆ ಜನಪ್ರಿಯ ವಾಗಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಪೋಸ್ಟ್ ಒಂದು ಮಿಲಿಯನ್ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ಕಾರಣಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:


ಬಳಕೆದಾರರೊಬ್ಬರು, ‘ಭಾರತೀಯರ ಆಹಾರಗಳು ಎಣ್ಣೆ ಹಾಗೂ ಮಸಾಲೆಗಳಿಂದ ತುಂಬಿರುತ್ತವೆ. ಹೀಗಾಗಿ ಈ ಡಿಶ್‌ವಾಶರ್ ಪಾತ್ರೆಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದಾರೆ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, ಡಿಶ್ ವಾಶರ್ ಖರೀದಿಸುವ ಬದಲು ಮನೆ ಕೆಲಸದಾಕೆಯನ್ನು ಇಟ್ಟುಕೊಳ್ಳುವುದು ಉತ್ತಮ. ಡಿಶ್ ವಾಶರ್ ಗಿಂತ ಮನೆ ಕೆಲಸದಾಕೆಗೆ ಸಂಬಳ ಕೊಡೋದು ಅಗ್ಗವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಐದನೇ ತರಗತಿ ಮಕ್ಕಳ ಪಠ್ಯ ಪುಸ್ತಕಗಳ ಬೆಲೆ ಏಳು ಸಾವಿರ ರೂಪಾಯಿ, ವಿಡಿಯೋ ವೈರಲ್

ಇನ್ನೊರ್ವ ಬಳಕೆದಾರ, ‘ಡಿಶ್‌ವಾಶರ್ ಖರೀದಿಸುವುದು ಹಾಗೂ ಅದನ್ನು ಬಳಸುವುದು ದುಬಾರಿಯಾಗಿದೆ. ಖರೀದಿಗೆ ಹೆಚ್ಚು ಹಣ ವೆಚ್ಚವಾಗುವುದರೊಂದಿಗೆ ವಿದ್ಯುತ್ ಬಳಕೆಯೂ ಬೇಕಾಗುತ್ತದೆ. ಅದಲ್ಲದೇ, ಪಾತ್ರೆಗಳನ್ನು ಡಿಶ್‌ವಾಶರ್‌ಗೆ ಹಾಕುವ ಮೊದಲು, ಅವುಗಳನ್ನು ನೀರಿನಿಂದ ಸ್ವಚ್ಛಗೊಳಿಸಬೇಕು’ ಎಂದಿದ್ದಾರೆ. ಕೆಲವರು, ‘ಭಾರತೀಯರು ಹೊಸ ಯಂತ್ರಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ