Viral: ಸಿಗರೇಟ್‌ ತುಂಡುಗಳಿಂದ ಕ್ಯೂಟ್‌ ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ತಯಾರಿಸಿದ ವ್ಯಕ್ತಿ; ವಿಡಿಯೋ ವೈರಲ್‌

ಸ್ವಲ್ಪ ಕ್ರಿಯೆಟಿವಿಟಿ ಮತ್ತು ತಾಳ್ಮೆಯಿದ್ದರೆ ಯಾವುದೇ ತ್ಯಾಜ್ಯ ವಸ್ತುಗಳಿಗೂ ಹೊಸ ಮತ್ತು ಸುಂದರ ರೂಪವನ್ನು ನೀಡಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಇಲ್ಲೊಬ್ರು ವ್ಯಕ್ತಿ ತಮ್ಮ ಕ್ರಿಯೆಟಿವಿಟಿಯಿಂದ ಸಿಗರೇಟ್‌ ತುಂಡುಗಳಿಂದ ಟೆಡ್ಡಿ ಬೇರ್‌, ಸಾಫ್ಟ್‌ ಟಾಯ್‌ಗಳನ್ನು ತಯಾರಿಸುವ ಮೂಲಕ ಸಿಗರೇಟ್‌ ತ್ಯಾಜ್ಯಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Viral: ಸಿಗರೇಟ್‌ ತುಂಡುಗಳಿಂದ ಕ್ಯೂಟ್‌ ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ತಯಾರಿಸಿದ ವ್ಯಕ್ತಿ; ವಿಡಿಯೋ ವೈರಲ್‌
ವೈರಲ್​​ ವಿಡಿಯೊ
Edited By:

Updated on: Nov 22, 2024 | 5:49 PM

ಕಸದಿಂದ ರಸ ಎನ್ನುವ ಪರಿಕಲ್ಪನೆ ಹಿಂದಿನಿಂದಲೂ ನಮ್ಮಲ್ಲಿದೆ. ಈ ಪರಿಕಲ್ಪನೆಯಡಿ ಕಸ, ತ್ಯಾಜ್ಯ ಎಂದು ಬಿಸಾಡುವ ಪ್ಲಾಸ್ಟಿಕ್‌ ಸೇರಿದಂತೆ ಅದೆಷ್ಟೋ ವಸ್ತುಗಳಿಗೆ ಅದೆಷ್ಟೋ ಜನ ತಮ್ಮ ಕ್ರಿಯೆಟಿವಿಗಳಿಂದಲೇ ಹೊಸ ರೂಪಗಳನ್ನು ನೀಡಿದ್ದಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಕೂಡಾ ತಮ್ಮ ಪರಿಸರ ಕಾಳಜಿ ಹಾಗೂ ಕ್ರಿಯೆಟಿವಿಟಿಯಿಂದ ಸಿಗರೇಟ್‌ ತುಂಡುಗಳಿಂದ ಟೆಡ್ಡಿ ಬೇರ್‌, ಸಾಫ್ಟ್‌ ಟಾಯ್‌ಗಳನ್ನು ತಯಾರಿಸುವ ಮೂಲಕ ಸಿಗರೇಟ್‌ ತ್ಯಾಜ್ಯಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಮಿಧ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ಲಾಸ್ಟಿಕ್‌ ಮಾತ್ರವಲ್ಲ ಪ್ರತಿವರ್ಷ ಸುಮಾರು 4.5 ಟ್ರಿಲಿಯನ್‌ ಸಿಗರೇಟ್‌ ತುಂಡು ತ್ಯಾಜ್ಯಗಳು ಕೂಡಾ ಕಸದ ಬುಟ್ಟಿಗೆ ಸೇರುತ್ತಿದೆ. ಈ ಸಿಗರೇಟ್‌ ತ್ಯಾಜ್ಯಗಳು ಜೈವಿಕ ವಿಘಟನೀಯ ಘಟಕಗಳ ಜೊತೆಗೆ ಫಾರ್ಮಾಲ್ಡಿಹೈಡ್‌, ನಿಕೋಟಿನ್‌, ಪ್ಲಾಸ್ಟಿಕ್‌ ಕಣಗಳನ್ನು ಒಳಗೊಂಡಂತೆ ಸೆಲ್ಯುಲೋಸ್‌ ಅಸಿಟೇಟ್‌ ಅನ್ನು ಕೂಡಾ ಒಳಗೊಂಡಿರುತ್ತದೆ. ಇದು ಮಣ್ಣಿನ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ಪರಿಸರ ಕಾಳಜಿಯ ದೃಷ್ಟಿಯಿಂದ ನೋಯ್ಡಾದ ನಮನ್‌ ಗುಪ್ತಾ ಎಂಬವರು ಕಸದಿಂದ ರಸ ಎನ್ನುವ ಪರಿಕಲ್ಪನೆಯಡಿ ಸಿಗರೇಟ್‌ ತುಂಡುಗಳಿಂದ ಸುಂದರವಾದ ಟೆಡ್ಡಿಬೇರ್‌ ಮತ್ತು ಸಾಫ್ಟ್‌ ಟಾಯ್‌ಗಳನ್ನು ತಯಾರಿಸುತ್ತಿದ್ದಾರೆ. ನಮನ್‌ ತಮ್ಮ ಸಹೋದರರ ಜೊತೆ ಸೇರಿ ಎಫರ್ಡ್‌ ಪ್ರೈವೇಟ್‌ ಮಿಲಿಟೆಡ್‌ ಸಂಸ್ಥೆಯನ್ನು ಸ್ಥಾಪಿಸಿ, ಇದರ ಮೂಲಕ ಸಿಗರೇಟ್‌ ತುಂಡುಗಳ ತ್ಯಾಜ್ಯಗಳನ್ನು ಮರು ಬಳಕೆ ಮಾಡಿ ಅದರಿಂದ ಸುಂದರ ಗೊಂಬೆಗಳು ಸೇರಿದಂತೆ ಇತರೆ ಸ್ಟಫ್ಡ್‌ ಟಾಯ್‌ಗಳನ್ನು ತಯಾರಿಸುತ್ತಿದ್ದಾರೆ.

60secodocs ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೇಸ್ಟ್‌ ಸಿಗರೇಟ್‌ ತುಂಡುಗಳನ್ನು ಸ್ವಚ್ಛಗೊಳಿಸಿ ಮತ್ತು ಶುದ್ಧೀಕರಿಸಿ ನಂತರ ಅದರಿಂದ ಸಫ್ಡ್‌ ಟಾಯ್‌ಗಳನ್ನು ತಯಾರಿಸುವ ಮೂಲಕ ಹೇಗೆ ತ್ಯಾಜ್ಯವನ್ನು ಮರು ಬಳಕೆ ಮಾಡುತ್ತಿದ್ದಾರೆ ಎಂಬ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸ್ನೇಹಿತನ ಮದುವೆಗೆ ಗಿಫ್ಟ್​​ ನೀಡುವಾಗಲೇ ಪ್ರಾಣ ಬಿಟ್ಟ ಜೀವದ ಗೆಳೆಯ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರ ಈ ಪ್ರಯತ್ನ ತುಂಬಾ ಅದ್ಭುತವಾಗಿದೆ. ಮತ್ತು ನೀವೆಲ್ಲರೂ ಟೀಕಿಸುವುದನ್ನು ನಿಲ್ಲಿಸಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಕೆಲಸವು ಕಾರ್ಮಿಕರಿಗೆ ಅಪಾಯಕಾರಿಯಾಗಿದೆ, ಕ್ಯಾನ್ಸರ್‌ ಬರುವ ಸಾಧ್ಯತೆ ಇದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ