ಅಟ್ಟಾಡಿಸಿಕೊಂಡು ಬಂದು ಜನರಿಂದ ಕಲ್ಲೇಟು; ಕಣ್ಣನ್ನೇ ಕಳೆದುಕೊಂಡ ಹೆಣ್ಣು ಹುಲಿ
ಅಸ್ಸಾಂನಲ್ಲಿ ಹೆಣ್ಣು ಹುಲಿಯ ಮೇಲೆ ಜನರ ಗುಂಪೊಂದು ದಾಳಿ ನಡೆಸಿದ್ದು, ಹುಲಿಗೆ ಕಲ್ಲು ಮತ್ತು ಇಟ್ಟಿಗೆಗಳಿಂದ ಹೊಡೆದಿದ್ದಾರೆ. ಇದರಿಂದಾಗಿ ಹುಲಿ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದೆ. ಜನರು ಹುಲಿಯತ್ತ ಇಟ್ಟಿಗೆ, ಕಲ್ಲುಗಳನ್ನು ಎಸೆಯುತ್ತಿರುವ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ: ಕಾಡಿನಿಂದ ಬಂದ ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಹುಲಿ-ಮನುಷ್ಯರ ಮುಖಾಮುಖಿಯ ಸಮಯದಲ್ಲಿ ಹುಲಿಯ ಮೆದುಳಿಗೆ ಗಾಯವಾಯಿತು. ಈ ವೇಳೆ ಹುಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿತು. ಅದರ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಚೂಪಾದ ವಸ್ತುಗಳನ್ನು ಬಳಸಿ ಹುಲಿಯ ಮೇಲೆ ದಾಳಿ ನಡೆಸಿದ್ದು, ಅದರ ಸ್ಥಿತಿ ಗಂಭೀರವಾಗಿದೆ. ಅಸ್ಸಾಂನ ಕಲಿಯಾಬೋರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಅಸ್ಸಾಂನ ವಸತಿ ಪ್ರದೇಶದ ಬಳಿಯ ಪೊದೆಗಳಲ್ಲಿ ತಿರುಗಾಡುತ್ತಿದ್ದ ಹುಲಿಯ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ಹೆಣ್ಣು ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಹುಲಿಯನ್ನು ಕಂಡು ಸ್ಥಳೀಯರು ಭಯದಿಂದ ಹುಲಿಯ ಮೇಲೆ ತೀವ್ರವಾಗಿ ದಾಳಿ ಮಾಡಿದ್ದಾರೆ ಎಂದು ಕೆಲವು ವರದಿಗಳು ಉಲ್ಲೇಖಿಸಿವೆ.
Armed forest officials pelted stones to chase away a tiger that ventured into human habitat in Assam’s Kaliabor recently. The tiger can be seen running away after being hit by a stone and jumping into a water body for safety. #Tiger #Assam #Kaliabor | @assamforest pic.twitter.com/FulHNRaXZN
— Pratidin Time (@pratidintime) November 20, 2024
ಇದನ್ನೂ ಓದಿ: ಗುಜರಾತ್ನ ಖಾನ್ಪುರ ಅರಣ್ಯದಲ್ಲಿ ಹುಲಿಯ ವಾಕಿಂಗ್; ವಿಡಿಯೋ ವೈರಲ್
ಇತ್ತೀಚೆಗೆ ಅಸ್ಸಾಂನ ಕಲಿಯಾಬೋರ್‌ನಲ್ಲಿ ಜನರು ವಾಸಿಸುವ ಸ್ಥಳಕ್ಕೆ ನುಗ್ಗಿದ ಹುಲಿಯನ್ನು ಓಡಿಸಲು ಶಸ್ತ್ರಸಜ್ಜಿತ ಅರಣ್ಯ ಅಧಿಕಾರಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳಲು ಹುಲಿ ಓಡುತ್ತಿರುವ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಆ ಹುಲಿ ತಪ್ಪಿಸಿಕೊಳ್ಳುವಷ್ಟರಲ್ಲಿ ಕೆರೆಗೆ ಬಿದ್ದಿತು.
With deep sorrow, I bid farewell to today. Meanwhile, in Assam’s Kaliabor, this tiger has completely lost vision in one eye due to the stone pelting by human-faced demons. pic.twitter.com/XD4icGN4Wy
— Nandan Pratim Sharma Bordoloi (@NANDANPRATIM) November 21, 2024
ದಾಳಿ ಪ್ರಾರಂಭವಾದ ನಂತರ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಮನುಷ್ಯ ರೂಪದ ರಾಕ್ಷಸರು ನಡೆಸಿದ ದಾಳಿ ಹಾಗೂ ಕಲ್ಲು ತೂರಾಟದಿಂದ ಹುಲಿ ಒಂದು ಕಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ಎಕ್ಸ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ