ಹಾವುಗಳನ್ನು ಕಂಡರೆ ಯಾರಿಗೆ ಭಯವಿಲ್ಲ ಹೇಳಿ. ಎಂತಹದ್ದೇ ಧೈರ್ಯಶಾಲಿ ವ್ಯಕ್ತಿಯಾಗಿದ್ದರು, ಹಾವನ್ನು ಕಂಡಾಕ್ಷಣ ಒಮ್ಮೆಗೆ ಬೆಚ್ಚಿ ಬೀಳುತ್ತಾರೆ. ಹಾವು ವಿಷಕಾರಿ ಜೀವಿ ಎಂಬ ಕಾರಣಕ್ಕೆ ಹೆಚ್ಚಿನವರು ಅದರ ತಂಟೆಗೆ ಹೋಗುವುದಿಲ್ಲ. ಅದರಲ್ಲೂ ಕೆಲವರಂತೂ ಒಂದು ಸಣ್ಣ ಹಾವನ್ನು ಕಂಡರೂ ಬೆಚ್ಚಿ ಬಿದ್ದು, ಅಲ್ಲಿಂದ ಕಾಲ್ಕಿತ್ತು ಓಡಿ ಹೋಗುತ್ತಾರೆ. ಕೆಲವು ಧೈರ್ಯಶಾಲಿ ಎಂಟೆದೆ ಬಂಟರು ಮಾತ್ರ ಹಾವುಗಳನ್ನು ಹಿಡಿಯುವಂತಹ ಸಾಹವನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಧೈರ್ಯಶಾಲಿ ಪುಟ್ಟ ಬಾಲಕಿ ಕೂಡಾ ಜೀವಂತ ಹಾವನ್ನು ಕೈಯಲ್ಲಿ ಹಿಡಿದುಕೊಂಡು, ಅಲ್ಲಿದ್ದ ಇತರರನ್ನು ಭಯಪಡಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪುಟ್ಟ ಬಾಲಕಿಯ ಕೀಟಲೆಯನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
@TheFigen ಎಂಬ X ಖಾತೆಯಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮಕ್ಕಳು ಸ್ವಾಭಾವಿಕವಾಗಿಯೇ ತುಂಬಾ ಧೈರ್ಯಶಾಲಿಗಳು ಎಂಬ ತಮಾಷೆಯ ಶೀರ್ಷಿಕೆಯನ್ನು ಕೂಡ ಬರೆಯಲಾಗಿದೆ. ವಿಡಿಯೋದಲ್ಲಿ ಮಾಲ್ ಒಂದರಲ್ಲಿ 3 ರಿಂದ 4 ವರ್ಷ ವಯಸ್ಸಿನ ಪುಟ್ಟ ಹುಡುಗಿಯೊಂದು ಜೀವಂತ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿದ್ದ ಎಲ್ಲರನ್ನು ಭಯಪಡಿಸುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
Children are naturally brave. 😂pic.twitter.com/J5GMtVbE0N
— Figen (@TheFigen_) December 3, 2023
9 ಸೆಕೆಂಡುಗಳ ಈ ವಿಡಿಯೋದಲ್ಲಿ ಮಾಲ್ ಒಂದರಲ್ಲಿ 3 ರಿಂದ 4 ವರ್ಷ ವಯಸ್ಸಿನ ಪುಟ್ಟ ಹುಡುಗಿಯೊಂದು ಜೀವಂತ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಅಲ್ಲಿದ್ದ ಇತರರನ್ನು ಭಯಪಡಿಸುವ ಸಲುವಾಗಿ ಪುಟ್ಟ ಪುಟ್ಟ ಹೆಜ್ಜಿಗಳನ್ನಿಡುತ್ತಾ, ಅವರ ಬಳಿ ಓಡಿ ಹೋಗುತ್ತಾಳೆ. ಬಾಲಕಿಯ ಕೈಯಲ್ಲಿ ಹಾವನ್ನು ಕಂಡು ಈ ಬಾಲಕಿ ಹಾವನ್ನು ನನ್ನ ಮೇಲೆಯೇ ಎಸೆಯಬಹುದು ಎಂದುಕೊಂಡು ಅಲ್ಲಿದ್ದ ಜನರೆಲ್ಲರೂ ಭಯಪಟ್ಟು ಓಡುತ್ತಾರೆ. ಈ ಮಗುವಿನ ತರ್ಲೆಯನ್ನು ನೋಡಲಾರದೆ, ಕೊನೆಗೆ ಒಬ್ಬಾಕೆ ಬಂದು ಆ ಬಾಲಕಿಯ ಕೈಯಿಂದ ಹಾವನ್ನು ಹಿಂಪಡೆಯುವಂತಹ ತಮಾಷೆಯ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ:ಒನ್ ಸೆಲ್ಫಿ, ಸ್ಮೈಲ್ ಪ್ಲೀಸ್: ಸೆಲ್ಫಿಗೆ ಸಖತ್ ಪೋಸ್ ಕೊಟ್ಟ ಶ್ವಾನ
ಡಿಸೆಂಬರ್ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಅನೇಕ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಆ ಮಗುವಿನ ಧೈರ್ಯವನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಈ ವಯಸ್ಸಿನಲ್ಲಿ ಎಲ್ಲಾ ಜೀವಿಗಳನ್ನು ಕಂಡು ಭಯಪಡುತ್ತಿದ್ದೆ, ಆದರೆ ಈ ಬಾಲಕಿ ತುಂಬಾ ಧೈರ್ಯಶಾಲಿʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೂ ಅನೇಕರು ಈ ಪುಟ್ಟ ಹುಡುಗಿ ಕೀಟಲೆ ಮಾಡುವ ದೃಶ್ಯ ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ