AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಚಾಂಗ್ ಚಂಡಮಾರುತ: ಚೆನ್ನೈ ರಸ್ತೆಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಮೊಸಳೆ

ಮೈಚಾಂಗ್ ಚಂಡಮಾರುತದ ಕಾರಣ ಕಳೆದ ಕೆಲವು ದಿನಗಳಿಂದ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯೂ ಎದುರಾಗಿದೆ. ಈ ಭಾರಿ ಮಳೆಯ ನಡುವೆಯೂ ಚೆನ್ನೈನ ನಗರವೊಂದರ ಬೀದಿಯಲ್ಲಿ ದೈತ್ಯ ಮೊಸಳೆಯೊಂದು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೈಚಾಂಗ್ ಚಂಡಮಾರುತ: ಚೆನ್ನೈ ರಸ್ತೆಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಮೊಸಳೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2023 | 4:34 PM

ಮೈಚಾಂಗ್  ಚಂಡಮಾರುತದ ಪ್ರಭಾವದಿಂದಾಗಿ ಕಳೆದ ಕೆಲವು ದಿನಗಳಿಂದ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯೂ ಎದುರಾಗಿದೆ. ಇದರಿಂದಾಗಿ ಪೂರ್ತಿ ನಗರವೇ ಜಲಾವೃತವಾಗಿದ್ದು, ರಸ್ತೆ ಬದಿಗಳಲ್ಲಿ ನಿಲ್ಲಿಸಿರುವ  ವಾಹನಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ನಡುವೆ ಇನ್ನೊಂದು ಕುತೂಹಲಕಾರಿ ವಿಡಿಯೋ ಹರಿದಾಡುತ್ತಿದ್ದು, ಚೆನ್ನೈನ ಪೆರುಂಗಲತ್ತೂರಿನಲ್ಲಿ ಭಾರೀ ಮಳೆಯ ನಡುವೆಯೂ ಮೊಸಳೆಯೊಂದು ರಾಜಾರೋಷವಾಗಿ ರಸ್ತೆ ದಾಟುತ್ತಿರುವುದನ್ನು ಕಾಣಬಹುದು. ಈ ಪ್ರದೇಶದಲ್ಲಿ ಪ್ರಯಾಣಿಸುವ ನಾಗರಿಕರೆಲ್ಲರೂ ತುಂಬಾ ಜಾಗರೂಕರಾಗಿರುವುದು ಅವಶ್ಯಕ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಮನೋಬಲ ವಿಜಯಬಾಲನ್ (@ManobalaV) ಎಂಬವರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮಳೆಯ ನಡುವೆಯೂ ಮೊಸಳೆಯೊಂದು ರಾಜಾರೋಷವಾಗಿ ರಸ್ತೆ ದಾಟುತ್ತಿರುವ ದೃಶ್ಯಾವಳಿನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ರಾತ್ರಿಯ ವೇಳೆ ಚೆನ್ನೈನ ಪೆರುಂಗಲತ್ತೂರಿನ ಬೀದಿಯಲ್ಲಿ ಮಳೆಯ ನಡುವೆಯೂ  ಭಾರೀ ಗಾತ್ರದ ಮೊಸಳೆಯೊಂದು ನಿಧಾನಕ್ಕೆ ರಸ್ತೆ ದಾಟುತ್ತಾ, ಪೊದೆಯೊಳಗೆ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:ಈ ಮಗುವಿಗೆ ಯಕ್ಷಗಾನದ ಮೇಲಿರುವ ಉತ್ಸಾಹಕ್ಕೆ ತಲೆ ಬಾಗಲೇಬೇಕು 

ಡಿಸೆಂಬರ್ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 366.5K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನೂ ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼಬಹುಶಃ ಪ್ರವಾಹದ ಕಾರಣ ಮೊಸಳೆ ರಸ್ತೆಗಿಳಿದಿರಬಹುದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾ ಭಯಾನಕವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನಾಗರಿಕರೆಲ್ಲರೂ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ