ಪ್ರಧಾನಿ ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಮತ್ತೆ ಟ್ರೆಂಡ್​​​​​

ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದ ಹೇಳಿಕೆ ಇದೀಗ ಮತ್ತೆ ಪ್ರಚಾರಕ್ಕೆ ಬಂದಿದೆ. ಅದು ಸಂಸದ ತೇಜಸ್ವಿ ಸೂರ್ಯ ಅವರು ಹಂಚಿಕೊಂಡಿರುವ ಒಂದು ಪೋಸ್ಟ್​​ನಿಂದ, ಇದೀಗ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಅವರನ್ನು ಕೂಡ ಉಲ್ಲೇಖಿಸಲಾಗಿದೆ. ಅಷ್ಟಕ್ಕೂ ಈ ಪೋಸ್ಟ್​​ನಲ್ಲಿದೆ ಏನಿದೆ? ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಪ್ರಧಾನಿ ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಮತ್ತೆ ಟ್ರೆಂಡ್​​​​​
ನಾರಾಯಣ ಮೂರ್ತಿ, ತೇಜಸ್ವಿ ಸೂರ್ಯ
Updated By: ಮಾಲಾಶ್ರೀ ಅಂಚನ್​

Updated on: Jul 16, 2025 | 2:15 PM

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ (N.R. Narayana Murthy) ಅವರು ಕೆಲವು ತಿಂಗಳ ಹಿಂದೆ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವೈರಲ್​​ ಆಗಿದ್ದರು. ಇವರ ಈ ಹೇಳಿಕೆ ಅನೇಕ ಕಡೆ ಚರ್ಚೆ ಕೂಡ ನಡೆದಿತ್ತು. ಪರ-ವಿರೋಧಗಳು ಕೂಡ ಬಂತು. ಆದರೆ ಅವರು ತಮ್ಮ ವಾದವನ್ನು ಇಂದಿಗೂ ಸಮರ್ಥಿಸಿಕೊಂಡು ಬಂದಿದ್ದಾರೆ. ಇದೀಗ ಮತ್ತೊಂದು ಹೇಳಿಕೆ ವೈರಲ್​ ಆಗಿದೆ. ಅದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ( Tejasvi Surya) ಅವರು ಹಂಚಿಕೊಂಡಿರುವ ಫೋಟೋ. ಮುಂಬೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡುವ ವೇಳೆ ಎನ್.ಆರ್. ನಾರಾಯಣ ಮೂರ್ತಿ ಅವರನ್ನು ಅನಿರೀಕ್ಷಿತವಾಗಿ ತೇಜಸ್ವಿ ಸೂರ್ಯ ಭೇಟಿಯಾಗಿದ್ದಾರೆ. ಈ ಭೇಟಿಯ ಬಗ್ಗೆ ತಮ್ಮ ಎಕ್ಸ್​​ನಲ್ಲಿ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದಾರೆ.

ಈ ಭೇಟಿಯನ್ನು ತೇಜಸ್ವಿ ಸೂರ್ಯ ಅವರು ಭಾರತದ ಭವಿಷ್ಯ ಮತ್ತು ನಾಯಕತ್ವದ ಕುರಿತು “ಎರಡು ಗಂಟೆಗಳ ಮಾಸ್ಟರ್‌ಕ್ಲಾಸ್” ಎಂದು ಬಣ್ಣಿಸಿದರು. ಭಾರತದ ತಂತ್ರಜ್ಞಾನ ಭೂದೃಶ್ಯವನ್ನು ಪರಿವರ್ತಿಸಿದ ಮತ್ತು ಇನ್ಫೋಸಿಸ್ ಮೂಲಕ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಕೆಲಸವನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರರಾದ ಐಟಿ ಪ್ರವರ್ತಕರೊಂದಿಗೆ ಬಹುದೊಡ್ಡ ಸ್ಪೂರ್ತಿದಾಯಕ ಸಂಭಾಷಣೆ ನಡೆಸಿದೆ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ. AI ನಿಂದ ಉತ್ಪಾದನೆಯವರೆಗೆ, ನಮ್ಮ ನಗರಗಳ ಸ್ಥಿತಿ, ಯುವಕರ ಕೌಶಲ್ಯವರ್ಧನೆ, ನೀತಿಶಾಸ್ತ್ರ ಮತ್ತು ನಾಯಕತ್ವ, ಪ್ರತಿಯೊಂದು ವಿಷಯಕ್ಕೂ NRN ತರುವ ಜ್ಞಾನ ಮತ್ತು ಸ್ಪಷ್ಟತೆಯ ವಿಸ್ತಾರದ ಬಗ್ಗೆ ನಾನು ಅವರೊಂದಿಗೆ ಮಾತನಾಡಿದ್ದೇನೆ ಎಂದು ಸಂಸದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!
ಹಾಡಿನ ಮೂಲಕ ರಿಕ್ಷಾ ಚಾಲಕನಿಗೆ ಸ್ವೀಟ್‌ ಆಗಿ ಬುದ್ಧಿವಾದ ಹೇಳಿದ ಪೊಲೀಸ್‌
ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
ಕಾರಿನಡಿ ಸಿಲುಕಿದರೂ ಪವಾಡದಂತೆ ಬದುಕುಳಿದ ಮಗು

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:


ಇನ್ನು ಈ ವೇಳೆ ಹಾಸ್ಯವಾಗಿ 70 ಗಂಟೆ ಕೆಲಸದ ಬಗ್ಗೆಯೂ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿಯನ್ನು ಹೆಚ್ಚಿಸಲು ಯುವ ಭಾರತೀಯರು ಹೆಚ್ಚು ಸಮಯ ಕೆಲಸ ಮಾಡಬೇಕು ಎಂಬ ಮೂರ್ತಿಯವರ  ಸಲಹೆ ಎಂದು ಹೇಳಿದ್ದಾರೆ. ಈ ವೇಳೆ ನಾರಾಯಣ ಮೂರ್ತಿ ಅವರು ಹೇಳಿದ ಒಂದು ವಿಚಾರದ ಬಗ್ಗೆ ತುಂಬಾ ಖುಷಿಯಿಂದ ಹಂಚಿಕೊಂಡಿದ್ದಾರೆ. ನಾನು 70 ಗಂಟೆ ಕೆಲಸದ ಬಗ್ಗೆ ಮಾತನಾಡಿದಾಗ ಅವರು ನಕ್ಕು ಹೇಳಿದ ಮಹತ್ವದ ಮಾತು ಏನೆಂದರೆ ನನಗೆ ತಿಳಿದಿರುವಂತೆ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ಮೋದಿ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ; ಪಾಕ್​​​ ನಿರೂಪಕಿಗೆ ಕಣ್ಣು ಊದಿಕೊಳ್ಳುವಂತೆ ಹಲ್ಲೆ ಮಾಡಿದ ಪತಿ

ಈ ಹಿಂದೆ ನಾರಾಯಣ ಮೂರ್ತಿ ಅವರು ಯುವಕರು ವಾರದಲ್ಲಿ 70 ಗಂಟೆ ದುಡಿಯಬೇಕು ಎಂಬ ಹೇಳಿಕೆಗೆ ಭಾರೀ ಚರ್ಚೆಗಳು ನಡೆದಿತ್ತು. ಕೆಲವರು ಇದನ್ನು ರಾಷ್ಟ್ರೀಯ ಕರ್ತವ್ಯಕ್ಕೆ ಕರೆ ಎಂದು ಶ್ಲಾಘಿಸಿದರೆ, ಇನ್ನು ಕೆಲವರು ಇದನ್ನು ಅಪ್ರಾಯೋಗಿಕ ಎಂದು ಟೀಕಿಸಿದರು. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಸಮಯ ಕೆಲಸ ಮಾಡುವುದು ಯಶಸ್ಸು ಅಥವಾ ನಾವೀನ್ಯತೆಯನ್ನು ಖಾತರಿಪಡಿಸುವುದಿಲ್ಲ. ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ಸೃಜನಶೀಲತೆ ಅಭಿವೃದ್ಧಿ ಹೊಂದಬಹುದಾದ ಸಮತೋಲಿತ ವಾತಾವರಣವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು, ಅತಿಯಾದ ಕೆಲಸವನ್ನು ವೈಭವೀಕರಿಸುವತ್ತ ಅಲ್ಲ ಎಂದು ಬಳಕೆದಾರರೂ ವಿರೋಧಿಸಿದರು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 16 July 25