Optical Illusion: ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?

ನಮ್ಮ ಬುದ್ಧಿ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ಮೋಜಿನ ಆಟ ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಆದರೆ ಇದೀಗ ಇಂತಹದ್ದೇ ಭ್ರಮೆ ಉಂಟು ಮಾಡುವ ಚಿತ್ರ ವೈರಲ್ ಆಗಿದ್ದು, ಮೊದಲನೆಯ ಹಲ್ಲಿಗೆ ಒಡನಾಡಿಯಾಗಿರುವ ಎರಡನೇ ಹಲ್ಲಿ ಅಡಗಿದೆ. ಆ ಹಲ್ಲಿ ಎಲ್ಲಿದೆ ಎಂದು ಕೇವಲ 10 ಸೆಕೆಂಡುಗಳಲ್ಲಿ ಹೇಳಬಹುದೇ ಎಂದು ನೋಡಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌

Updated on: Sep 05, 2025 | 5:34 PM

ಮೆದುಳಿಗೆ ವ್ಯಾಯಾಮ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical illusion)ಚಿತ್ರಗಳು, ಬ್ರೈನ್‌ ಟೀಸರ್‌ಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಇದು ಕಣ್ಣಷ್ಟೇ ಅಲ್ಲ, ಮೆದುಳನ್ನು ಕೂಡ ಚುರುಕಾಗಿಸುತ್ತದೆ. ಪ್ರಾರಂಭದಲ್ಲಿ ಈ ಒಗಟಿನ ಚಿತ್ರಗಳನ್ನು ಬಿಡಿಸಲು ಕಷ್ಟವಾಗಬಹುದು. ಆದರೆ, ಹೆಚ್ಚಿನ ಐಕ್ಯೂ ಮತ್ತು ಅತ್ಯುತ್ತಮ ದೃಷ್ಟಿ ಹೊಂದಿರುವ ಜನರು ಮಾತ್ರ ಒಗಟು ಬಿಡಿಸಲು ಸಾಧ್ಯ. ಈ ಚಿತ್ರದಲ್ಲಿ ಎರಡು ಹಲ್ಲಿ ಇದ್ದು, ಮೊದಲನೆ ಹಲ್ಲಿಗೆ ಒಡನಾಡಿಯಾಗಿರುವ ಎರಡನೇ ಹಲ್ಲಿ ಎಲ್ಲಿದೆ ಎಂದು ಗುರುತಿಸುವ ಸವಾಲು ನೀಡಲಾಗಿದೆ. ನಿರ್ದಿಷ್ಟ ಸಮಯದೊಳಗೆ ಈ ಒಗಟಿನ ಚಿತ್ರವನ್ನು ಬಿಡಿಸಲು ಪ್ರಯತ್ನಿಸಿ.

ಈ ಚಿತ್ರದಲ್ಲಿ ಏನಿದೆ?

ಈ ಒಗಟಿನ ಆಟಗಳು ಮೋಜನ್ನು ನೀಡುವುದು ಮಾತ್ರವಲ್ಲದೆ ನಮ್ಮಲ್ಲಿ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಕಾರಿಯಾಗಿದೆ. ಇದೀಗ ಈ ಚಿತ್ರವನ್ನು 08guru ಎಂಬ ಬಳಕೆದಾರರು FindTheSniper ಎಂಬ ಸಬ್‌ರೆಡಿಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮನೆಗೆ ಜೋಡಿಸಲಾದ ಕೆಳಮುಖ ನೀರಿನ ಕೊಳವೆಯನ್ನು ಕಾಣಬಹುದು. ಅದರ ಒಂದು ಬದಿಯಲ್ಲಿ ಬೆಣಚುಕಲ್ಲುಗಳ ಮೇಲೆ ಸಣ್ಣ ಹಲ್ಲಿ ಇದೆ. ಸುತ್ತಲೂ ಹರಡಿರುವ ಕೆಲವು ಒಣಗಿದ ಎಲೆಗಳು ಅಲ್ಲಲ್ಲಿ ಇರುವುದನ್ನು ಕಾಣಬಹುದು. ಮೊದಲನೆಯ ಹಲ್ಲಿಗೆ ಒಡನಾಡಿಯಾಗಿರುವ ಎರಡನೇ ಹಲ್ಲಿಯೊಂದು ಅಡಗಿದೆ. ನೀವು ಅದನ್ನು ಕೇವಲ 10 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಇಬ್ಬರೂ ಮಕ್ಕಳನ್ನು ಕಂಡುಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚಬಲ್ಲಿರಾ?
ಹಾರುವ ಪಕ್ಷಿಗಳ ನಡುವೆ ಹಾರಲಾಗದ ಹಕ್ಕಿ ಎಲ್ಲಿದೆ ಎಂದು ಹುಡುಕಿ
ಈ ವೃತ್ತಾಕಾರದ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹೇಳಬಲ್ಲಿರಾ?

ಇದನ್ನೂ ಓದಿ: Optical illusion: ನೀವು ಜಾಣರಾಗಿದ್ರೆ ಹಚ್ಚಹಸಿರಿನ ಹೊಲದಲ್ಲಿ ಅಡಗಿರುವ ಇಬ್ಬರೂ ಮಕ್ಕಳನ್ನು 10 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ?

ಉತ್ತರ ಇಲ್ಲಿದೆ:

ನೀವೇನಾದರೂ ಹತ್ತು ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ಎರಡನೇ ಹಲ್ಲಿಯನ್ನು ಕಂಡು ಹಿಡಿದರೆ ನೀವು ಸರಾಸರಿಗಿಂತ ಹೆಚ್ಚಿನ ಐಕ್ಯೂ ಲೆವೆಲ್‌ ಮತ್ತು ತೀಕ್ಷ್ಣ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಾ. ಎಷ್ಟೇ ಪ್ರಯತ್ನಿಸಿದರೂ ಒಗಟಿನ ಚಿತ್ರದಲ್ಲಿ ಅಡಗಿರುವ ಎರಡನೇ ಹಲ್ಲಿ ಎಲ್ಲಿದೆ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ. ಮೊದಲನೇ ಹಲ್ಲಿಗೆ ಒಡನಾಡಿಯಾಗಿರುವ ಎರಡನೇ ಹಲ್ಲಿ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಎರಡನೇ ಹಲ್ಲಿಯೂ ಪೈಪ್‌ನ ಕೆಳಮುಖದಲ್ಲಿದೆ. ಈ ಹಲ್ಲಿಯೂ ಮೊದಲ ಹಲ್ಲಿಗೆ ಎದುರು ಮುಖವಾಗಿ ಇರುವುದನ್ನು ನೀವು ಗಮನಿಸಬಹುದು. ನಿಮ್ಮ ಕಣ್ಣಿಗೆ ಎರಡನೇ ಹಲ್ಲಿಯೂ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:30 pm, Fri, 5 September 25