Optical Illusion : ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಕಂಡು ಹಿಡಿಯಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಹುಡುಕಬೇಕು. ಈ ಪ್ರಾಣಿಯನ್ನು ಹುಡುಕಲು ನಿಮಗಿರುವ ಕಾಲಾವಕಾಶ ಹದಿನೈದು ಸೆಕೆಂಡುಗಳು ಮಾತ್ರ, ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?

Optical Illusion : ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಕಂಡು ಹಿಡಿಯಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌

Updated on: Jul 04, 2025 | 10:37 AM

ಒಗಟುಗಳನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಚಿತ್ರಗಳು ಕಣ್ಣಿಗೆ ಕಾಣಿಸುತ್ತದೆ. ಆದರೆ ಈ ಚಿತ್ರದಲ್ಲಿ ಅಡಗಿರುವ ವಸ್ತುವನ್ನು ಅಥವಾ ಸಂಖ್ಯೆಯನ್ನು ಹುಡುಕುವುದು ಕಠಿಣವೆನಿಸಬಹುದು. ಇದು ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಲು ಸಹಾಯ ಮಾಡುತ್ತದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರವು ನೋಡುವುದಕ್ಕೆ ಸಹಜವಾಗಿ ಕಂಡರೂ ಇದರಲ್ಲಿರುವ ಸವಾಲು ಇಲಿಯನ್ನು ಹುಡುಕುವುದು. ಒಂದು ನಿರ್ದಿಷ್ಟ ಸಮಯದೊಳಗೆ ಇಲಿಯನ್ನು ಪತ್ತೆ ಹಚ್ಚಬೇಕು. ಈ ಸವಾಲನ್ನು ಸ್ವೀಕರಿಸಿ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನೀವು ಜಾಣರು ಎಂದರ್ಥ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಗೊಂದಲಕ್ಕೀಡು ಮಾಡಬಹುದು. ಹೌದು, ಸಾಮಾನ್ಯದಂತೆ ಕಾಣುವ ಈ ಚಿತ್ರಗಳು ಕಣ್ಣನ್ನು ಮೋಸಗೊಳಿಸಲುಬಹುದು. ಈ ಚಿತ್ರದಲ್ಲಿಯೂ ಕೂಡ ಹಾಗೆಯೇ ಆಗಿದ್ದು, ಇದರಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕುವುದು ಕಷ್ಟ. ಈ ಚಿತ್ರದಲ್ಲಿ ಹುಡುಗಿಯೊಬ್ಬಳು ಬೆಡ್ ಮೇಲೆ ಮಲಗಿಕೊಂಡಿದ್ದಾಳೆ. ಆಕೆಯ ಅಕ್ಕ ಪಕ್ಕ ನಾಯಿ, ಎರಡು ಬೆಕ್ಕುಗಳಿವೆ. ಟೇಬಲ್ ಮೇಲೆ ಪುಸ್ತಕ ಹಾಗೂ ಮೊಬೈಲ್ ಇದ್ದು, ನಿಮಗಿರುವ ಸವಾಲು ಇದರಲ್ಲಿ ಇಲಿ ಎಲ್ಲಿದೆ ಎಂದು ಕಂಡುಹಿಡಿಯುವುದು. ಈ ಪ್ರಾಣಿಯನ್ನು ಹದಿನೈದು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು.

ಇದನ್ನೂ ಓದಿ
5 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ನಗು ಮುಖವನ್ನು ಪತ್ತೆಹಚ್ಚಿ ನೋಡೋಣ
ಈ ಚಿತ್ರದಲ್ಲಿ 25, 7 ರ ನಡುವೆ ಅಡಗಿರುವ 52 ಸಂಖ್ಯೆ ಎಲ್ಲಿದೆ ಎಂದು ಹೇಳಿ
ಈ ಚಿತ್ರದಲ್ಲಿ ಅಡಗಿರುವ ವಿಮಾನವನ್ನು ಹುಡುಕಿ
ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಗುರುತಿಸಲು ನಿಮ್ಮಿಂದ ಸಾಧ್ಯನಾ?

ಈ ಸವಾಲನ್ನು ಸ್ವೀಕರಿಸಿದ್ದೀರಾ?

ಈ ಒಗಟಿನ ಆಟಗಳು ಟೈಮ್‌ ಪಾಸ್‌ ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮ ನೀಡುತ್ತವೆ. ಹೀಗಾಗಿ ನೀವು ನಿಮ್ಮ ಬುದ್ಧಿಶಕ್ತಿ ಹಾಗೂ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಕಂಡುಕೊಳ್ಳಲು ಈ ಚಿತ್ರ ಸಹಾಯಕವಾಗಲಿದೆ. ಹದಿನೈದು ಸೆಕೆಂಡಿನೊಳಗೆ ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಕಂಡುಹಿಡಿಯಬೇಕು. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಅಂತಾದ್ರೆ ನಿಮ್ಮ ಸಮಯ ಈಗ ಆರಂಭವಾಗುತ್ತದೆ.

ಇದನ್ನೂ ಓದಿ : Optical Illusion : ಈ ಚಿತ್ರದಲ್ಲಿ ಸ್ಮೈಲಿ ಫೇಸ್ ಎಲ್ಲಿದೆ ಎಂದು 5 ಸೆಕೆಂಡಿನಲ್ಲಿ ಕಂಡು ಹಿಡಿಯುವಿರಾ?

ಉತ್ತರ ಇಲ್ಲಿದೆ

ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಹಾಗೂ ಏಕಾಗ್ರತೆಯಿಂದ ಗಮನಿಸಿದರೂ 15 ಸೆಕೆಂಡುಗಳ ಒಳಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಲಿಲ್ಲವೇ. ಹೆಚ್ಚು ಚಿಂತಿಸಬೇಡಿ, ಇಂತಹ ಒಗಟುಗಳನ್ನು ಬಿಡಿಸಲು ಬುದ್ಧಿವಂತರಿಗೆ ಮಾತ್ರ ಸಾಧ್ಯ. ಕೆಲವರಿಗೆ ಈ ಒಗಟುಗಳನ್ನು ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನೀವು ಕೂಡ ಈ ಸಾಲಿನಲ್ಲಿ ಸೇರಿದ್ದೀರಿ ಎಂದುಕೊಳ್ಳಿ. ಹೀಗಾಗಿ ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ಈ ಚಿತ್ರದಲ್ಲಿ ಬೆಡ್ ಮೇಲೆ ಮಲಗಿರುವ ಹುಡುಗಿಯ ಪಕ್ಕದಲ್ಲೇ ಇಲಿಯೊಂದಿದೆ. ಹೌದು, ಈ ಒಗಟಿನ ಉತ್ತರವನ್ನು ಕೆಂಪು ಬಣ್ಣದಲ್ಲಿ ವೃತ್ತಾಕಾರ ಎಳೆದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ