Optical Illusion: ಈ ಚಿತ್ರದಲ್ಲಿ ಅಡಗಿರುವ ಆಂಗ್ರಿ ಫೇಸ್ ಇಮೋಜಿ ಕಂಡು ಹಿಡಿದ್ರೆ ನೀವು ಬುದ್ಧಿವಂತರು ಎಂದರ್ಥ

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಲೇ ಇರುತ್ತದೆ. ಇಂತಹ ಚಿತ್ರಗಳು ಸಹಜವಾಗಿಯೇ ನಿಮ್ಮ ಬುದ್ಧಿವಂತಿಕೆ ಹಾಗೂ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಈ ಒಗಟುಗಳು ಟ್ರಿಕ್ಕಿಯಾಗಿದ್ದರೂ ಕೆಲವರು ಸುಲಭವಾಗಿ ಬಿಡಿಸುತ್ತಾರೆ. ಆದರೆ ಇದೀಗ ಇಲ್ಲೊಂದು ಬಹಳ ಕಷ್ಟಕರವಾದ ಚಿತ್ರವೊಂದು ವೈರಲ್ ಆಗಿದ್ದು ಇಲ್ಲಿ ಆಂಗ್ರಿ ಫೇಸ್ ಇಮೋಜಿಯನ್ನು ಕೇವಲ ಆರು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.

Optical Illusion: ಈ ಚಿತ್ರದಲ್ಲಿ ಅಡಗಿರುವ ಆಂಗ್ರಿ ಫೇಸ್ ಇಮೋಜಿ ಕಂಡು ಹಿಡಿದ್ರೆ ನೀವು ಬುದ್ಧಿವಂತರು ಎಂದರ್ಥ
ಆಪ್ಟಿಕಲ್‌ ಇಲ್ಯೂಷನ್‌

Updated on: Aug 17, 2025 | 12:07 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಬ್ರೈನ್ ಟೀಸರ್‌ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುವುದರೊಂದಿಗೆ ಟೈಮ್ ಪಾಸ್ ಆಗುತ್ತದೆ. ಈ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವುದೇ ಹೆಚ್ಚು. ಇದೀಗ ನಿಮ್ಮ ಬುದ್ಧಿವಂತಿಕೆ, ಕಣ್ಣಿನ ತೀಕ್ಷ್ಣತೆ ಹಾಗೂ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವ ಒಗಟಿನ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ವಿಭಿನ್ನವಾದ ಫೇಸ್ ಇಮೋಜಿಗಳಿದ್ದು, ಇದರಲ್ಲಿ ಕೋಪಗೊಂಡ ಮುಖವನ್ನು 6 ಸೆಕೆಂಡುಗಳಲ್ಲಿ ಗುರುತಿಸಬೇಕಂತೆ. ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಈ ಒಗಟನ್ನು ಬಿಡಿಸಲು ಸಾಧ್ಯ ಎನ್ನಲಾಗಿದೆ. ನೀವು ಈ ಒಗಟನ್ನು ಬಿಡಿಸಲು ರೆಡಿ ಇದ್ದೀರಾ, ಹಾಗಾದ್ರೆ ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ ನೋಡಿ

ಈ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ವಿಭಿನ್ನವಾದ ಫೇಸ್ ಇಮೋಜಿಗಳಿದ್ದು, ಮೊದಲ ನೋಟಕ್ಕೆ ಈ ಚಿತ್ರವನ್ನು ನೋಡಿದಾಗ ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಆದರೆ ಇದರಲ್ಲಿ ಆಂಗ್ರಿ ಫೇಸ್ ಇಮೋಜಿ ಅಡಗಿದ್ದು, ತೀಕ್ಷ್ಣವಾದ ಕಣ್ಣು ಹಾಗೂ ತ್ವರಿತ ವೀಕ್ಷಣಾ ಕೌಶಲ್ಯ ಹೊಂದಿದ್ದವರು ಮಾತ್ರ ಈ ಇಮೋಜಿಯನ್ನು ಪತ್ತೆ ಹಚ್ಚಲು ಸಾಧ್ಯ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ಬೆಕ್ಕನ್ನು ಹುಡುಕಿ ನೋಡೋಣ
ಈ ಎರಡು ಚಿತ್ರಗಳ ನಡುವೆ ಏಳು ವ್ಯತ್ಯಾಸಗಳಿವೆ, ಏನೆಂದು ಹೇಳಿ ನೋಡೋಣ
ಈ ಚಿತ್ರದಲ್ಲಿ ಅಡಗಿರುವ ಮಿಡತೆಯನ್ನು 10 ಸೆಕೆಂಡಿನಲ್ಲಿ ಕಂಡು ಹಿಡಿಯಬಲ್ಲಿರಾ
ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಕಂಡುಹಿಡಿಯಬಲ್ಲಿರಾ?

ಈ ಸವಾಲನ್ನು ಸ್ವೀಕರಿಸಿದ್ದೀರಾ?

ಈ ಆಪ್ಟಿಕಲ್‌ ಇಲ್ಯೂಷನ್‌ ಇಲ್ಯೂಷನ್ ಚಿತ್ರದಲ್ಲಿ ಕೋಪಗೊಂಡ ಮುಖವನ್ನು ಕಂಡುಹಿಡಿಯಬೇಕು, ಇದಕ್ಕಿರುವ ಸಮಯಾವಕಾಶ ಆರು ಸೆಕೆಂಡುಗಳು ಮಾತ್ರ. ಈ ಆಂಗ್ರಿ ಫೇಸ್ ಇಮೋಜಿಯನ್ನು ಕಂಡು ಹಿಡಿಯಲು ಕಷ್ಟ ಪಡುತ್ತಿದ್ದರೆ ಇಮೋಜಿಗಳ ಮುಖಭಾವವನ್ನು ಸರಿಯಾಗಿ ಗಮನಿಸಿ. ಆಗ ನಿಮ್ಮ ಕಣ್ಣಿಗೆ ಆಂಗ್ರಿ ಫೇಸ್ ಕಾಣಿಸುತ್ತದೆ. ನೀವು ಈ ಸವಾಲನ್ನು ಸ್ವೀಕರಿಸಿ ಈಗಲೇ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.

ಇದನ್ನೂ ಓದಿ:Optical Illusion: ನಿಮ್ಮ ಕಣ್ಣಿಗೆ ಮೂರು ಬೆಕ್ಕು ಮಾತ್ರ ಕಾಣಿಸಿತಾ? ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ಹುಡುಕಿ

ಉತ್ತರ ಇಲ್ಲಿದೆ:

 

ಎಷ್ಟೇ ಪ್ರಯತ್ನಿಸಿದರೂ, ಈ ಚಿತ್ರದತ್ತ ಕಣ್ಣುಹಾಯಿಸಿದರೂ ಆಂಗ್ರಿ ಫೇಸ್ ಮಾತ್ರ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ, ಇಲ್ಲಿರುವ ಇಮೋಜಿಗಳ ಮುಖಭಾವವನ್ನು ಸರಿಯಾಗಿ ಗಮನಿಸಿ. ನೀವು ನಿಮ್ಮ ಕಣ್ಣಿಗೆ ಒತ್ತಡ ಹಾಕಬೇಡಿ. ನಿಧಾನವಾಗಿ ಒಂದೊಂದು ಇಮೋಜಿಗಳತ್ತ ಕಣ್ಣುಹಾಯಿಸಿ. ನೀವು ಆಂಗ್ರಿ ಫೇಸನ್ನು ಗುರುತಿಸಲು ಸಾಧ್ಯವಾಗಿದ್ದರೆ ನಿಮಗೆ ಧನ್ಯವಾದಗಳು. ನಿಮ್ಮ ದೃಷ್ಟಿ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಹೆಚ್ಚು ಚಿಂತಿಸಿಕೊಳ್ಳುವ ಅಗತ್ಯವಿಲ್ಲ. ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ಕೋಪಗೊಂಡ ಮುಖದ ಇಮೋಜಿ ಚಿತ್ರದ ಕೊನೆಯ ಸಾಲಿನ ಮಧ್ಯಭಾಗದಲ್ಲಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Sun, 17 August 25