Optical Illusion : ಬೆಕ್ಕು, ಮೀನು : ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಸವಾಲುಗಳು ತುಂಬಾ ಸುಲಭವಾಗಿದ್ದರೆ, ಇನ್ನೂ ಕೆಲವು ಸವಾಲುಗಳು ತುಂಬಾನೇ ಟ್ರಿಕ್ಕಿ ಆಗಿರುತ್ತವೆ. ಕೆಲವು ಚಿತ್ರಗಳು ನಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಇದೀಗ ಈ ಆಪ್ಟಿಕಲ್‌ ಇಲ್ಯೂಷನ್‌ ಬೆಕ್ಕು ಹಾಗೂ ಮೀನು ಇದ್ದು, ನೀವು ಮೊದಲು ಯಾವುದನ್ನು ಗುರುತಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವು ನಿರ್ಧರಿತವಾಗಿರುತ್ತದೆ. ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂದು ತಿಳಿದುಕೊಳ್ಳಿ.

Optical Illusion : ಬೆಕ್ಕು, ಮೀನು : ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Jun 16, 2025 | 10:42 AM

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಚಿತ್ರಗಳು ಮೆದುಳಿಗೆ ಮಾತ್ರವಲ್ಲ ಕಣ್ಣಿಗೂ ಪರೀಕ್ಷೆ ಒಡ್ಡುತ್ತವೆ. ಕಣ್ಣುಗಳು ಮೇಲ್ನೋಟಕ್ಕೆ ಗ್ರಹಿಸಲು ಸಾಧ್ಯವಾಗದೇ ವಿಷಯಗಳು ಈ ಚಿತ್ರದಲ್ಲಿ ಅಡಗಿರುತ್ತದೆ. ಕೆಲವೊಮ್ಮೆ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣನ್ನು ಮೋಸಗೊಳಿಸಬಹುದು. ಇದೀಗ ಇಲ್ಲೊಂದು ಆಪ್ಟಿಕಲ್‌ ಇನ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ನೀವು ಮೊದಲು ಏನನ್ನು ಗಮನಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ಯಾವ ರೀತಿ ವ್ಯಕ್ತಿ ಎನ್ನುವುದನ್ನು ಬಹಿರಂಗ ಪಡಿಸುತ್ತದೆ. ಈ ಚಿತ್ರದಲ್ಲಿ ಬೆಕ್ಕು ಅಥವಾ ಮೀನು ಈ ಎರಡರಲ್ಲಿ ಮೊದಲು ಕಂಡದ್ದು ಏನು ಎನ್ನುವುದರ ಮೇಲೆ ವ್ಯಕ್ತಿತ್ವ (personality) ಪರೀಕ್ಷಿಸಿ.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ

ಬೆಕ್ಕು ಕಾಣಿಸಿದರೆ : ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿದಾಗ ಮೊದಲು ನಿಮ್ಮ ಕಣ್ಣಿಗೆ ಬೆಕ್ಕು ಕಾಣಿಸಿಕೊಂಡರೆ ಈ ವ್ಯಕ್ತಿಗಳು ಭಾವನಾತ್ಮಕವಾಗಿ ದೂರ ಉಳಿಯುತ್ತಾರೆ. ಸಣ್ಣ ಪುಟ್ಟ ವಿಷಯಕ್ಕೂ ತಾಳ್ಮೆ ಕಳೆದುಕೊಳ್ಳುವ ಹಠಮಾರಿ ಸ್ವಭಾವದವರು ಎನ್ನಬಹುದು. ಸವಾಲುಗಳನ್ನು ಸ್ವೀಕರಿಸುವಲ್ಲಿ ಹಿಂದೇಟು ಹಾಕುತ್ತಾರೆ. ಇಲ್ಲದಿದ್ದರೆ ಇಂತಹ ವಿಚಾರಗಳಲ್ಲಿ ನಿರಾಶೆಗೊಳ್ಳುವುದೇ ಹೆಚ್ಚು. ಯಾರಾದರೂ ತಪ್ಪು ಮಾಡಿದರೆ ನೋವು ಕೊಟ್ಟರೆ ಕ್ಷಮಿಸುವ ಉದಾರ ಮನಸ್ಸು ಇವರಿಗೆ ಇರುತ್ತದೆ. ಇತರರಿಗೆ ಸಹಾಯ ಮಾಡಲು ಸದಾ ಸಿದ್ಧವಿರುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಗುಣವಿದ್ದು ದಯೆ ಹಾಗೂ ಸಹಾನುಭೂತಿ ಗುಣ ಈ ಜನರಲ್ಲಿ ಅಧಿಕವಾಗಿರುತ್ತದೆ.

ಇದನ್ನೂ ಓದಿ
ಈ ಚಿತ್ರದಲ್ಲಿ ಬಾಲವಿಲ್ಲದ ಕುದುರೆ ಎಲ್ಲಿದೆ ಎಂದು ಹೇಳಬಲ್ಲಿರಾ?
ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ
ಈ ಹುಲ್ಲಿನ ಪೊದೆಯಲ್ಲಿ ಅಡಗಿರುವ ಸಿಂಹದ ಮರಿಯನ್ನು ಹುಡುಕಬಲ್ಲಿರಾ?
ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳುವಿರಾ?

ಇದನ್ನೂ ಓದಿ : Optical Illusion : ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಬಾಲವಿಲ್ಲದ ಕುದುರೆಯನ್ನು ನೀವು ಹುಡುಕಬಲ್ಲಿರಾ?

ಮೀನು ನೋಡಿದರೆ : ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ಮೀನನ್ನು ಗುರುತಿಸಿದರೆ ಈ ವ್ಯಕ್ತಿಗಳು ಸತ್ಯ ಹಾಗೂ ನೇರವಾದ ಮಾತಿನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸುತ್ತಮುತ್ತಲಿನ ವ್ಯಕ್ತಿಗಳು ಪ್ರಾಮಾಣಿಕವಾಗಿಲ್ಲದಂತೆ ಕಂಡರೆ ಅದನ್ನು ಸುಲಭವಾಗಿ ಗ್ರಹಿಸುವ ಸಾಮರ್ಥ್ಯಇವರಲ್ಲಿ ಇರುತ್ತದೆ. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಕೋಪ ಹಾಗೂ ನೋವನ್ನು ವ್ಯಕ್ತಿಪಡಿಸಲು ಬದಲು ಮರೆಮಾಡುತ್ತಾರೆ. ಸುಳ್ಳು ಹೇಳುವ ವ್ಯಕ್ತಿಗಳು ಇದ್ದರೆ ಅವರಿಂದ ದೂರವಿರಲು ಬಯಸುತ್ತಾರೆ. ಹಗಲು ಕನಸು ಕಾಣುವ , ಆಳವಾದ ಆಲೋಚನೆಯಲ್ಲಿ ಕಳೆದುಹೋಗುತ್ತಾರೆ. ಈ ವ್ಯಕ್ತಿಗಳು ಇತರರ ಸಲಹೆ ಸೂಚನೆಗಳಿಗೆ ಹಾಗೂ ಭಾವನಾತ್ಮಕವಾಗಿ ಸುರಕ್ಷಿತವಾಗಿರಲು ಹಂಬಲಿಸುತ್ತಾರೆ. ಇವರು ಹೆಚ್ಚು ಮೋಸ ಹೋಗುವ ಕಾರಣ ಇತರ ವ್ಯಕ್ತಿಗಳನ್ನು ನಂಬುವ ಮೊದಲು ನೂರು ಬಾರಿ ಯೋಚಿಸುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ