Optical illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡು ಹಿಡಿಯಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಸೋಷಿಯಲ್‌ ಮೀಡಿಯಾದಲ್ಲಿ ಇಂತಹ ಅದೆಷ್ಟೋ ಫೋಟೋಗಳು ವೈರಲ್‌ ಆಗುತ್ತಿರುತ್ತವೆ. ಕೆಲ ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿದ್ದರೂ, ಕೆಲವರು ಸುಲಭವಾಗಿಯೇ ಉತ್ತರ ಕಂಡುಕೊಳ್ಳುತ್ತಾರೆ. ಆದರೆ ಇದೀಗ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಹಾವೊಂದು ಅಡಗಿದೆ. ಕೇವಲ ಹತ್ತು ಸೆಕೆಂಡುಗಳಲ್ಲೇ ಈ ಹಾವನ್ನು ಕಂಡು ಹಿಡಿಯಬಲ್ಲಿರಾ.

Optical illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡು ಹಿಡಿಯಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Aug 20, 2025 | 11:43 AM

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಆಪ್ಟಿಕಲ್‌ ಇಲ್ಯೂಷನ್‌ (optical Illusion) ಮೆದುಳಿಗೆ ಕೆಲಸ ನೀಡುವುದರ ಜತೆಗೆ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಸ್ವಲ್ಪ ಟ್ರಿಕ್ಕಿ ಆಗಿದ್ದರೂ ಈ ಸವಾಲುಗಳನ್ನು ಬಿಡಿಸುವ ಖುಷಿಯೇ ಬೇರೆ. ಇದೊಂದು ಮೋಜಿನ ಆಟವಾಗಿದ್ದು, ಹಲವರು ಈ ಒಗಟಿನ ಚಟುವಟಿಕೆಗಳನ್ನು ಈಗಾಗಲೇ ಆಡಿರುತ್ತೀರಿ. ಆದರೆ ಇದೀಗ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು, ಗಾರ್ಡನ್‌ವೊಂದರಲ್ಲಿ ಅಡಗಿರುವ ಹಾವನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಸವಾಲು ಸ್ವಲ್ಪ ಕಷ್ಟದಾಯಕವಾಗಿದ್ದರೂ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ ನೋಡಿ.

ಈ ಚಿತ್ರದಲ್ಲಿ ಏನಿದೆ?

KRothbauer ಎಂಬ ಬಳಕೆದಾರರು ರೆಡ್ಡಿಟ್ ಖಾತೆಯಲ್ಲಿ ಆಪ್ಟಿಕಲ್‌ ಇಲ್ಯೂಷನ್‌ನಂತಹ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಇದೀಗ ಒಗಟಿನ ಚಟುವಟಿಕೆಗಳು ನಮ್ಮನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಉದ್ಯಾನವನದ ಚಿತ್ರವು ಇದಾಗಿದ್ದು ಕೆಲವು ಸಸ್ಯಗಳನ್ನು ನೀವಿಲ್ಲಿ ಕಾಣಬಹುದು. ಮರದ ಬುಡದಲ್ಲಿ ಸಸ್ಯವೊಂದು ಬೆಳೆಯುತ್ತಿದ್ದು, ಹಿನ್ನಲೆಯಲ್ಲಿ ಬೇಲಿಯನ್ನು ನೋಡಬಹುದು. ಇಲ್ಲಿ ಹಾವೊಂದು ಅಡಗಿದೆ. ನಿಮ್ಮ ಕಣ್ಣಿನ ದೃಷ್ಟಿ ತೀಕ್ಷ್ಣವಾಗಿದ್ದರೆ ಮಾತ್ರ ಹತ್ತು ಸೆಕೆಂಡುಗಳಲ್ಲಿ ಈ ಹಾವನ್ನು ಪತ್ತೆ ಹಚ್ಚಲು ಸಾಧ್ಯ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಸಿಂಹಗಳನ್ನು ನೀವು ಗುರುತಿಸಬಲ್ಲಿರಾ?
ಹಚ್ಚಹಸಿರಿನ ಮರಗಳ ನಡುವೆ ಅಡಗಿದೆ ಚಂದದ ಗಿಣಿ; 10 ಸೆಕೆಂಡುಗಳಲ್ಲಿ ಹುಡುಕಿ
ಈ ಚಿತ್ರದಲ್ಲಿ ಅಡಗಿರುವ ಆಂಗ್ರಿ ಫೇಸ್ ಇಮೋಜಿ ಕಂಡುಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ಬೆಕ್ಕನ್ನು ಹುಡುಕಿ ನೋಡೋಣ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಚಿತ್ರದಲ್ಲಿದಲ್ಲಿರುವ ಗಾರ್ಡನನ್ನು ನೋಡಿದ್ದೀರಿ ಅಲ್ವಾ. ಇಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಸಸ್ಯಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಹಾಗೇನೆ ಈ ಚಿತ್ರವನ್ನು ಗಮನವಿಟ್ಟು ಹಾಗೂ ಏಕಾಗ್ರತೆಯಿಂದ ನೋಡಿದ್ರೆ ಇಲ್ಲಿ ಹಾವೊಂದು ಕಾಣಿಸುತ್ತವೆ.

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಸಿಂಹಗಳನ್ನು ನೀವು ಗುರುತಿಸಬಲ್ಲಿರಾ?

ಉತ್ತರ ಇಲ್ಲಿದೆ:

ಅಯ್ಯೋ ಎಷ್ಟೇ ಹುಡುಕಿದರೂ ಹಾವನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ. ನಿಮ್ಮ ದೃಷ್ಟಿ ಸಾಮರ್ಥ್ಯ ಪರೀಕ್ಷಿಸಲು ಹಾಗೂ ಕಣ್ಣಗಳನ್ನು ಮೋಸಗೊಳಿಸಲು ನಿಮ್ಮ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಚಿತ್ರದಲ್ಲಿ ಹಾವನ್ನು ಮರೆಮಾಡಲಾಗಿದೆ. ಈ ಚಿತ್ರದ ಪ್ರತಿಯೊಂದು ಭಾಗವನ್ನು ನೋಡಿ, ಇಲ್ಲದಿದ್ದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಮರದ ಬಳಿಯ ಹಸಿರು ಸಸ್ಯದ ಮೇಲೆ ಹಾವು ಇದೆ. ಆದರೆ ನೀವು ಏಕಾಗ್ರತೆಯಿಂದ ಈ ಸಸ್ಯದ ಮೇಲೆ ಗಮನ ಹರಿಸಿದರೆ ಹಾವು ಕಣ್ಣಿಗೆ ಬೀಳುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ