
ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ಭ್ರಮೆಯನ್ನು ಉಂಟು ಮಾಡಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಟ್ರಿಕ್ಕಿ ಒಗಟುಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕಷ್ಟಕರವಾದ ಈ ಒಗಟಿನ ಚಿತ್ರಗಳನ್ನು ಹೆಚ್ಚಿನವರು ಬಿಡಿಸುವಲ್ಲಿ ಸೋಲುತ್ತಾರೆ. ಇದೀಗ ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾದ ಈ ಒಗಟಿನ ಚಿತ್ರವು ನೋಡಲು ಸುಲಭದಾಯಕವಾಗಿದೆ. ಆದರೆ ಮನೆಯ ಹೊರಭಾಗದಲ್ಲಿರುವ ಕಪ್ಪು ಬಣ್ಣದ ಬೆಕ್ಕನ್ನು ಹುಡುಕುವ ಸವಾಲು ಇದಾಗಿದೆ. ಆದರೆ ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ಆದರೆ ಆದಷ್ಟು ಬೇಗ ಕಪ್ಪು ಬಣ್ಣದ ಬೆಕ್ಕನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.
r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಮನೆಯ ಹೊರಾಂಗಣವನ್ನು ಕಾಣಬಹುದು. ಈ ಚಿತ್ರದಲ್ಲಿ ಅಡಗಿರುವ ಕಪ್ಪು ಬೆಕ್ಕನ್ನು ಹತ್ತು ಸೆಕೆಂಡುಗಳು ಹಾಗೂ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಗುರುತಿಸಲು ಹೇಳಲಾಗಿದೆ. ಮೆಟ್ಟಿಲುಗಳ ಮೇಲೆ ಹಲವಾರು ಕುಂಬಳಕಾಯಿಗಳನ್ನು ಇರಿಸಲಾಗಿದೆ, ಪಕ್ಕದಲ್ಲಿ ಪ್ಲಾಸ್ಟಿಕ್ ಬೆಕ್ಕನ್ನು ಇರಿಸಲಾಗಿದೆ. ಮನೆಯ ಹೊರಗೆ ಹಸಿರು ಬಣ್ಣದ ಕಸದ ಬುಟ್ಟಿ ಸೇರಿದಂತೆ ಮನೆಯ ಮೂಲೆಯಲ್ಲಿ ಕಸವಿರುವುದನ್ನು ಕಾಣಬಹುದು. ಆದರೆ ಇಲ್ಲಿ ಅಡಗಿರುವ ಕಪ್ಪು ಬಣ್ಣದ ಬೆಕ್ಕನ್ನು ಕಂಡು ಹಿಡಿಯಬೇಕು. ಈ ಬೆಕ್ಕನ್ನು ಗುರುತಿಸಲು ಸಾಧ್ಯವೇ ಎಂದು ನೋಡಿ.
Spot the real black cat
byu/NoTea20 inFindTheSniper ಇದನ್ನೂ ಓದಿ
ಒಗಟಿನ ಆಟಗಳು ಮನೋರಂಜನೆಯನ್ನು ನೀಡುವುದು ಮಾತ್ರವಲ್ಲದೆ ನಮ್ಮ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಬಹುದು. ಕಣ್ಣು ಎಷ್ಟು ಅಗಲಿಸಿ ನೋಡಿದ್ರು ಈ ಕಪ್ಪು ಬಣ್ಣದ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ನೀವು ಇಲ್ಲಿ ಅಡಗಿರುವ ಬೆಕ್ಕನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೀರಾ ಎಂದಾದ್ರೆ ನಿಮ್ಮ ವೀಕ್ಷಣಾ ಕೌಶಲ್ಯ ಉತ್ತಮವಾಗಿದೆ ಎಂದರ್ಥ. ಒಂದು ವೇಳೆ ಈ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ಉತ್ತರ ನಾವು ಹೇಳುತ್ತೇವೆ. ಬೆಕ್ಕು ಮನೆಯ ಹೊರಗೆ ಹುಲ್ಲಿನ ಮೇಲೆ ಕುಳಿತಿದೆ. ಕಪ್ಪು ಬಣ್ಣದ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.
ಇದನ್ನೂ ಓದಿ:ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ನಿಂಬೆ ಹಣ್ಣು ಎಲ್ಲಿದೆ ಎಂದು ಹೇಳಿ ನೋಡೋಣ
ಅಕ್ಟೋಬರ್ 28 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರೊಬ್ಬರು ಈ ಒಗಟು ಸುಲಭವಾದದ್ದು. ಅಂಗಳದಲ್ಲಿ ಕಿಟಕಿಯ ಕೆಳಗೆ ಎಡಭಾಗದಲ್ಲಿ ಬೆಕ್ಕು ಇದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ನನ್ನ ಮನೆಯ ಬೆಕ್ಕು ಅದೇ ಕೆಲಸ ಮಾಡುವುದರಿಂದ ನಾನು ಬೆಕ್ಕನ್ನು ತಕ್ಷಣವೇ ಗುರುತಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಪ್ಪು ಬಣ್ಣದ ಬೆಕ್ಕು ಕಾಣಿಸಿತು, ನಾನು ಬೇಗನೇ ಉತ್ತರ ಕಂಡು ಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Fri, 31 October 25