Optical Illusion: ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ ಮೊದಲ ಆಕಾರ ಯಾವುದು?

ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಕಣ್ಣಿಗೆ ಕಾಣಿಸಿದ ಮೊದಲ ಆಕಾರ ಯಾವುದು? ವ್ಯಕ್ತಿಯೊಬ್ಬ ಕೈ ಎತ್ತಿದ ಆಕಾರವೇ? ಅಥವಾ ವ್ಯಕ್ತಿಯೊಬ್ಬ ಕಿರುಚುತ್ತಿರುವ ಆಕಾರವೇ? ನಿಮ್ಮ ಕಣ್ಣಿಗೆ ಮೊದಲು ಕಾಣಿಸಿದ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹಾಗೂ ಆಲೋಚನಾ ಶಕ್ತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.

Optical Illusion: ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ ಮೊದಲ ಆಕಾರ ಯಾವುದು?
Optical Illusion

Updated on: Feb 05, 2024 | 10:29 AM

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣುವ ಮೊದಲ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಲು ಸಾದ್ಯವಿದೆ. ಜೊತೆಗೆ ನಿಮ್ಮ ಆಲೋಚನೆಗಳನ್ನು ಮೌಲ್ಯಮಾಪನ ಮಾಡಲು ಸಾಧ್ಯವಿದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಇತ್ತೀಚೆಗೆ ಇಂತಹ ಆಪ್ಟಿಕಲ್ ಇಲ್ಯೂಷನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋವನ್ನು ನೋಡಿದಾಗ ಮೊದಲು ಕಾಣಿಸಿಕೊಳ್ಳುವ ಅಂಶವನ್ನು ಆಧರಿಸಿ ವ್ಯಕ್ತಿಯ ಆಲೋಚನಾ ಕ್ರಮವನ್ನು ತಿಳಿಯಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ನಿಮ್ಮ ಕಣ್ಣಿಗೆ ಮೊದಲು ಕಾಣಿಸಿದ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹಾಗೂ ಆಲೋಚನಾ ಶಕ್ತಿ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಲಿನ ಫೋಟೋವನ್ನು ನೋಡಿದರೆ, ಅದು ಬಿಳಿ ಆಕಾರದಂತೆ ಕಾಣುತ್ತದೆ. ಈ ಫೋಟೋದಲ್ಲಿ ವ್ಯಕ್ತಿಯೊಬ್ಬರು ಕೈ ಎತ್ತಿದಂತಿದೆ. ಆದರೆ ಅದರಲ್ಲಿ ಇನ್ನೊಂದು ಆಕಾರ ಅಡಗಿದೆ. ಆದರೆ ಈ ಚಿತ್ರವನ್ನು ವ್ಯಕ್ತಿಯೊಬ್ಬ ಕಿರುಚುತ್ತಿರುವ ಆಕಾರವು ಕೂಡ ಇದೆ. ಆದರೆ ಈ ಎರಡು ಆಕಾರಗಳಲ್ಲಿ ನೀವು ಮೊದಲು ಏನನ್ನು ನೋಡಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಏನೆಂದು ತಿಳಿಯಬಹುದು.

ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ

ಒಂದೇ ಚಿತ್ರದಲ್ಲಿರುವ ಎರಡು ಭಿನ್ನ ಆಕಾರಗಳು:

  1. ಚಿತ್ರದಲ್ಲಿ ನೀವು ಮೊದಲು ಕಿರುಚುವ ವ್ಯಕ್ತಿಯ ಮುಖ ನೋಡಿದರೆ ನಿಮ್ಮಲ್ಲಿ ಆಳವಾದ ಚಿಂತನೆಯ ಪ್ರವೃತ್ತಿ ಇದೆ ಎಂದರ್ಥ. ಅಂತಹ ಜನರು ಆತ್ಮಾವಲೋಕನದಲ್ಲಿ ತೊಡಗುತ್ತಾರೆ. ಜೊತೆಗೆ ಪ್ರತಿ ವಿಷಯದ ಬಗ್ಗೆ ದೀರ್ಘಕಾಲ ಯೋಚಿಸುತ್ತಾರೆ. ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ವರೆಗೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮನಸ್ಥಿತಿ ಮತ್ತು ವ್ಯಕ್ತಿತ್ವವನ್ನು ಹೊಂದಿರುತ್ತೀರಿ.
  2. ಚಿತ್ರದಲ್ಲಿ ನೀವು ಮೊದಲು ಮೇಲೆ ಎತ್ತಿದ ಕೈ ಕಂಡರೆ ಅಂತಹವರು ಸಮಸ್ಯೆಗಳನ್ನು ಬಹುಬೇಗ ಬಗೆಹರಿಸುತ್ತಾರೆ. ಯಾವುದೇ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಪರಿಹರಿಸುತ್ತೀರಿ. ಜೊತೆಗೆ ಸವಾಲುಗಳನ್ನು ಸ್ವೀಕರಿಸುವ ಅಭ್ಯಾಸವನ್ನು ಹೊಂದಿರುವ ವ್ಯಕ್ತಿತ್ವದವರು ಎಂಬ ಅರ್ಥವನ್ನು ನೀಡುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ