AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ನೋಡಿ: ತಾಳಿ ಕಟ್ಟುವ ಶುಭ ವೇಳೆ.. ಸ್ಪೋರ್ಟ್ಸ್ ಬೈಕೇರಿ ಮದುವೆ ಡ್ರೆಸ್ ನಲ್ಲಿ ನವ ವಧು ಮಿಂಚಿಂಗ್​​​! ಯಾಕೆ, ಏನಾಯ್ತು?

Bike ride In Bridal Attire: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ಸ್ಪೋರ್ಟ್ಸ್ ಬೈಕ್ ಓಡಿಸುತ್ತಿರುವುದು ಕಂಡು ಬಂದಿದೆ. ವಧು ಅನುಭವೀ ಬೈಕ್ ರೈಡರ್ ಆಗಿದ್ದು, ಯಾವುದೇ ಸಮಸ್ಯೆ ಅಥವಾ ಉದ್ವೇಗವಿಲ್ಲದೆ ರಸ್ತೆಯಲ್ಲಿ ಸ್ಪೋರ್ಟ್ಸ್ ಬೈಕ್ ಅನ್ನು ವೇಗವಾಗಿ ಲೀಲಾಜಾಲವಾಗಿ ಓಡಿಸಿದ್ದಾಳೆ.

ವಿಡಿಯೋ ನೋಡಿ: ತಾಳಿ ಕಟ್ಟುವ ಶುಭ ವೇಳೆ.. ಸ್ಪೋರ್ಟ್ಸ್ ಬೈಕೇರಿ ಮದುವೆ ಡ್ರೆಸ್ ನಲ್ಲಿ ನವ ವಧು ಮಿಂಚಿಂಗ್​​​! ಯಾಕೆ, ಏನಾಯ್ತು?
ಸ್ಪೋರ್ಟ್ಸ್ ಬೈಕೇರಿ ಮದುವೆ ಡ್ರೆಸ್ ನಲ್ಲಿ ನವ ವಧು ಮಿಂಚಿಂಗ್​​​! ಯಾಕೆ, ಏನಾಯ್ತು?
ಸಾಧು ಶ್ರೀನಾಥ್​
|

Updated on: Feb 05, 2024 | 12:27 PM

Share

ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ವಧುವಿನ (Bride) ಪ್ರವೇಶ ಹೇಗೆ ನಡೆಯುತ್ತದೆ? ಕೆಲವು ಸಂಪ್ರದಾಯಗಳ ಪ್ರಕಾರ… ಪಲ್ಲಕಿಯಲ್ಲಿ ಮೆರವಣಿಗೆ ಹೊತ್ತು ತರುತ್ತಾರೆ. ಕೆಲವು ಭಾಗಗಳಲ್ಲಿ ಹೂಗಳ ಬುಟ್ಟಿಯಲ್ಲಿ ಕರೆತರಲಾಗುತ್ತದೆ. ಇತರರು ಹೂಗಳ ಮೇಲೆ ಕುಣಿಯುತ್ತಾರೆ, ನಡೆದಾಡುತ್ತಾರೆ, ನೃತ್ಯ ಮಾಡುತ್ತಾರೆ. ಒಟ್ಟಿನಲ್ಲಿ ರಾಣಿಯಂತೆ ಮೆರೆಯುತ್ತಾ, ವಧುವಿನ ಪ್ರವೇಶ ಶೈಲಿಯು ಹೀಗಿರುತ್ತದೆ. ಆದರೆ ಈಗ ಸೋಷಿಯಲ್ ಮೀಡಿಯಾ ಯುಗ. ಏನೇ ಮಾಡಿದರೂ ವೈರಲ್ ವೈರಲ್! ಅಂತಹ ತಾಜಾ ವಿಡಿಯೋದಲ್ಲಿ (Social Media) ವಧುವಿನ ಪ್ರವೇಶವನ್ನು ನೋಡಿದರೆ ನಿಮ್ಮ ಆಲೋಚನೆಗಳು ದಿಕ್ಕಾಪಾಲಾಗಿ ಓಡುತ್ತವೆ. ಅದನ್ನು ನೋಡಿದರೆ ಶಾಕ್ ಆಗುತ್ತೀರಿ. ಜೊತೆಗೆ ಈ ಆಧುನಿಕ ವಧುವನ್ನು ನೋಡಿದಾಗ ಸಂತೋಷವೂ ಆಗುತ್ತದೆ. ವಧುವಿನ ಈ ವಿಶೇಷ ಭಾವ ಭಂಗಿಗೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದೆ (Trending Video).

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ಸ್ಪೋರ್ಟ್ಸ್ ಬೈಕ್ ಓಡಿಸುತ್ತಿರುವುದು ಕಂಡು ಬಂದಿದೆ. ವಧು ಅನುಭವೀ ಬೈಕ್ ರೈಡರ್ ಆಗಿದ್ದು, ಯಾವುದೇ ಸಮಸ್ಯೆ ಅಥವಾ ಉದ್ವೇಗವಿಲ್ಲದೆ ರಸ್ತೆಯಲ್ಲಿ ಸ್ಪೋರ್ಟ್ಸ್ ಬೈಕ್ ಅನ್ನು ವೇಗವಾಗಿ ಲೀಲಾಜಾಲವಾಗಿ ಓಡಿಸಿದ್ದಾಳೆ. ವಧುವಿನ ಬೈಕ್ ರೈಡಿಂಗ್ ನೈಪುಣ್ಯವನ್ನು ಕಂಡು ಜನ ಆಶ್ಚರ್ಯ ಪಡುತ್ತಿದ್ದಾರೆ. ಈ ವಿಡಿಯೋದಲ್ಲಿ ವಧು ಸಂಪೂರ್ಣ ಮದುವೆಯ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾಳೆ. ವಧುವಿನ ಗೆಟಪ್ ನಲ್ಲೂ ಆ ಸುಂದರ ಯುವತಿ ಅದ್ಭುತವಾಗಿ ಬೈಕ್ ಓಡಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. @_rider_girl_kajal_ ಖಾತೆಯೊಂದಿಗೆ Instagram ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಬಂಗಾಳದ ಕಾಜಲ್ ದತ್ತಾ ಅವರ ಈ ವಿಡಿಯೋ ವೈರಲ್ ಆಗುತ್ತಿದೆ. ಕಾಜಲ್ ವೃತ್ತಿಪರ ಬೈಕ್ ರೈಡರ್ ಎಂದು ತಿಳಿದುಬಂದಿದೆ. ಆಕೆಯ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬೈಕ್ ರೈಡಿಂಗ್ ಗೆ ಸಂಬಂಧಿಸಿದ ಹಲವು ವಿಡಿಯೋಗಳಿವೆ. ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿ ಜನರು ಕೂಡ ವಿವಿಧ ಕಮೆಂಟ್ ಗಳ ಮೂಲಕ ಹಾಡಿಹೊಗಳುತ್ತಿದ್ದಾರೆ. ಇದರ ಬಗ್ಗೆ ಜನ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಂಗಾಳಿ ಹುಡುಗಿಯರು ಅದ್ಭುತ.. ಪ್ರತಿಯೊಬ್ಬ ವಧುವಿಗೆ ಅಂತಹ ಆತ್ಮವಿಶ್ವಾಸ, ಧೈರ್ಯ ಮತ್ತು ಚಾಕಚಕ್ಯತೆ ಇರಬೇಕು ಎಂದಿದ್ದಾರೆ. ಮತ್ತೊಬ್ಬರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ… ಅವಳು ಮದುವೆಯನ್ನು ತೊರೆದು ಓಡಿಹೋದಳು ಎಂದಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.