Viral Video : ಈ ರಸ್ತೆ ದಟ್ಟವಾದ ಹಿಮದಿಂದ ಆವರಿಸಿದೆ. ರಾತ್ರಿ ಸಮಯ ಬೇರೆ. ಆದರೂ ಈ ವ್ಯಕ್ತಿಗೆ ತನ್ನ ನಾಯಿಯೊಂದಿಗೆ ವಾಕಿಂಗ್ ಮಾಡಬೇಕೆನ್ನಿಸಿದೆ. ಅಂತೂ ರಸ್ತೆಗಿಳಿದಿದ್ದಾನೆ. ತನ್ನ ನಡಿಗೆಗೆ ಅದರ ನಡಿಗೆಯನ್ನು ನಿಯಂತ್ರಿಸಲು ಆತ ನೋಡುತ್ತಿದ್ದಾನೆ. ಆದರೆ ನಾಯಿಯೋ ತನ್ನದೇ ಲೋಕದಲ್ಲಿ ಓಡುತ್ತಿದೆ. ರಸ್ತೆಯ ತಿರುವು ದಾಟಿಕೊಂಡು ಬರುವ ಹೊತ್ತಿಗೆ ಬೆಕ್ಕೋ ನಾಯಿಯೋ ಒಟ್ಟಿನಲ್ಲಿ ಒಂದು ಪ್ರಾಣಿ ಓಡಿಹೋಗುತ್ತಿದ್ದಂತೆ ನಾಯಿಗೆ ಹುಕಿ ಬಂದು ಓಡಲು ಶುರುಮಾಡುತ್ತದೆ. ಪೋಷಕನನ್ನು ದರದರನೆ ಎಳೆದೊಯ್ಯುತ್ತದೆ.
Walking the dog in the snow.. ? pic.twitter.com/jdMHyoPpNQ
ಇದನ್ನೂ ಓದಿ— Buitengebieden (@buitengebieden) November 28, 2022
ಆನ್ಲೈನ್ನಲ್ಲಿ ಮಂದಿ ಇದನ್ನು ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೇಕಿತ್ತಾ ಇಂಥ ರಾತ್ರಿಯಲ್ಲಿ ವಾಕಿಂಗ್ ಎಂದು ಕೇಳುತ್ತಿದ್ದಾರೆ. ಸಾಕಿದ ಮಾತ್ರಕ್ಕೆ ನಾಯಿ ನಿಮ್ಮ ಮಾತು ಕೇಳಲೇಬೇಕು ಅಂತಿಲ್ಲ. ಅದನ್ನು ನಿಯಂತ್ರಿಸಲು ಹೋದರೆ ಏನಾಗುತ್ತದೆ ನೋಡಿ ಎಂದಿದ್ದಾರೆ ಒಬ್ಬರು. ಒಂದಲ್ಲ ಎರಡು ಮೂರು ಸಲ ಬಿದ್ದು ಎದ್ದು ನಾಯಿಯ ಹಿಂದೆ ಓಡಿದ್ದಾಯ್ತಲ್ಲ, ಇನ್ನೊಮ್ಮೆ ಹೀಗೆ ಚಳಿಯಲ್ಲಿ, ಹಿಮದಲ್ಲಿ ನಾಯಿಯನ್ನು ವಾಕಿಂಗ್ ಕರೆದುಕೊಂಡು ಬರುತ್ತೀಯಾ ಎಂದು ಈ ವ್ಯಕ್ತಿಗೆ ಒಬ್ಬರು ಕೇಳಿದ್ದಾರೆ. ಇಂಥ ಹುಚ್ಚಾಟಗಳಿಗೆ ಬೀಳಬೇಡಿ ಇದು ಅಪಾಯ ಎಂದಿದ್ದಾರೆ ಹಲವಾರು ಜನ.
ಈ ವಿಡಿಯೋ ಅನ್ನು ಈಗಾಗಲೇ 2 ಮಿಲಿಯನ್ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 70,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ