ಅಜ್ಜಿ ಪುಣ್ಯ ತಿಥಿ; 1.25 ಕೋಟಿ ರೂ. ಖರ್ಚು ಮಾಡಿ 20 ಸಾವಿರ ಜನಕ್ಕೆ ಊಟ ಹಾಕಿದ ಭಿಕ್ಷುಕ

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಲಕ್ಷಣ ಸುದ್ದಿಗಳು ನಮ್ಮನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ಸುದ್ದಿಯೊಂದು ವೈರಲ್‌ ಆಗಿದ್ದು ಪಾಕಿಸ್ತಾನದ ಭಿಕ್ಷುಕ ಕುಟುಂಬವೊಂದು ತಮ್ಮ ಅಜ್ಜಿಯ ಪುಣ್ಯ ತಿಥಿಯ ಸಲುವಾಗಿ ಬರೋಬ್ಬರಿ 1.25 ಕೋಟಿ ಪಾಕಿಸ್ತಾನಿ ರೂಪಾಯಿ ಖರ್ಚು ಮಾಡಿ 20 ಸಾವಿರ ಮಂದಿಗೆ ಔತಣ ಕೂಟವನ್ನು ಏರ್ಪಡಿಸಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಅಜ್ಜಿ ಪುಣ್ಯ ತಿಥಿ; 1.25 ಕೋಟಿ ರೂ. ಖರ್ಚು ಮಾಡಿ 20 ಸಾವಿರ ಜನಕ್ಕೆ ಊಟ ಹಾಕಿದ ಭಿಕ್ಷುಕ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2024 | 6:00 PM

ಭಿಕ್ಷುಕರು ಅಂದರೆ ತಿನ್ನಲು ಗತಿ ಇಲ್ಲದ, ಕೈಯಲ್ಲಿ ಬಿಡುಗಾಸು ಇಲ್ಲದ, ಉಳಿದುಕೊಳ್ಳಲು ಒಂದು ಸ್ವಂತ ಸೂರು ಇಲ್ಲದೆ ಜನರ ಮುಂದೆ ಕೈ ಚಾಚುವ ವ್ಯಕ್ತಿಗಳು ಎಂದು ಹಲವರು ಅಂದುಕೊಳ್ಳುತ್ತಾರೆ. ಮತ್ತು ಅವರನ್ನು ಕೈಲಾಗದವರು ಎಂದು ಅಸಡ್ಡೆಯ ಮಾತುಗಳನ್ನಾಡುತ್ತಾರೆ. ಆದ್ರೆ ಇಲ್ಲೊಂದು ಭಿಕ್ಷುಕ ಕುಟುಂಬ ತಾವು ಭಿಕ್ಷೆ ಬೇಡಿ ಸಂಪಾದಿಸಿದ ಹಣದಲ್ಲಿಯೇ ಬರೋಬ್ಬರಿ 20 ಸಾವಿರ ಮಂದಿಗೆ ಔತಣಕೂಟವನ್ನು ಏರ್ಪಡಿಸಿದೆ. ಹೌದು ಅಜ್ಜಿಯ ಪುಣ್ಯ ತಿಥಿಯ ಸಲುವಾಗಿ ಭಿಕ್ಷುಕ ಕುಟುಂಬ 1.25 ಕೋಟಿ ರೂ. ಖರ್ಚು ಮಾಡಿ ಊರ ಮಂದಿಗೆ ಔತಣಕೂಟವನ್ನು ಏರ್ಪಡಿಸಿದ್ದು, ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಇಲ್ಲಿನ ಗುಜ್ರನ್‌ವಾಲಾದಲ್ಲಿ ಭಿಕ್ಷುಕ ಕುಟುಂಬವೊಂದು 1.25 ಕೋಟಿ ಪಾಕಿಸ್ತಾನಿ ರೂಪಾಯಿ (ಪಿಕೆಆರ್)‌ ಖರ್ಚು ಮಾಡಿ ಬರೋಬ್ಬರಿ 20 ಸಾವಿರ ಮಂದಿಗೆ ಹಬ್ಬದೂಟವನ್ನು ಏರ್ಪಡಿಸಿದೆ. ಅಜ್ಜಿಯ ಮರಣದ 40 ನೇ ದಿನದ ಪುಣ್ಯತಿಥಿಯ ಅಂಗವಾಗಿ ಈ ಕುಟುಂಬ ಊರ ಮಂದಿಗೆ ಈ ಭರ್ಜರಿ ಔತಣಕೂಟ ಏರ್ಪಡಿಸಿದೆ.

ವರದಿಗಳ ಪ್ರಕಾರ ಈ ಸಮಾರಂಭವು ಗುಜ್ರಾನ್‌ವಾಲಾದಲ್ಲಿನ ರಾಹ್ವಾಲಿ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು, ಬರೋಬ್ಬರಿ 20 ಸಾವಿರ ಜನರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ ಅಥಿತಿಗಳು ಹೋಗಿ ಬರಲು ಸುಮಾರು 2,000 ವಾಹನಗಳ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು. ಭಿಕ್ಷುಕ ಕುಟುಂಬ ಅಜ್ಜಿಯ ಪುಣ್ಯ ತಿಥಿಗೆ ಹಬ್ಬದ ಮೆನುವನ್ನೇ ಸಿದ್ಧಪಡಿಸಿತ್ತು. ಪಾಕಿಸ್ತಾನದ ಸಾಂಪ್ರದಾಯಿಕ ತಿನಿಸುಗಳಾದ ಸಿರಿ ಪಾಯ, ಮುರಬ್ಬ, ನಾನ್‌ ಮಟರ್‌ ಗಂಜ್‌ ಸೇರಿದಂತೆ ಹಲವಾರು ಖಾದ್ಯಗಳನ್ನು ತಯಾರಿಸಿದ್ದರು. ಜೊತೆಗೆ ಹಬ್ಬದೂಟಕ್ಕೆ ಸುಮಾರು 250 ಮೇಕೆಗಳನ್ನು ಕಡಿಯಲಾಗಿತ್ತು. ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಈ ಕುಟುಂಬ ಇಷ್ಟು ದೊಡ್ಡ ಔತಣಕೂಟವನ್ನು ಏರ್ಪಡಿಸಿದ್ದನ್ನು ಕಂಡು ಎಲ್ಲರೂ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: 1857ರ ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬರೆದ ತರ್ಲೆ ಉತ್ತರ ಹೇಗಿದೆ ನೋಡಿ…

ಈ ಕುರಿತ ವಿಡಿಯೋವನ್ನು 365newsdotpk ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಅಜ್ಜಿಯ ಪುಣ್ಯತಿಥಿಯ ಸಲುವಾಗಿ ಪಾಕಿಸ್ತಾನದ ಭಿಕ್ಷುಕ ಕುಟುಂಬ 20 ಸಾವಿರ ಜನಕ್ಕೆ ಭರ್ಜರಿ ಭೋಜನ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಅಲ್ಲಾ ಭಿಕ್ಷುಕರಿಗೆ ಇಷ್ಟೆಲ್ಲಾ ಖರ್ಚು ಮಾಡಿ ಹಬ್ಬದೂಟವನ್ನು ಏರ್ಪಡಿಸಲು ಸಾಧ್ಯವೇ ಎಂದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ