ಪಾಕಿಸ್ತಾನದಲ್ಲಿ ಪುಟ್ಟ ಮಕ್ಕಳಿಗೂ ಸುರಕ್ಷತೆಯಿಲ್ಲ; ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ

ಈಗಂತೂ ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದೇ ಕಷ್ಟಸಾಧ್ಯವಾಗಿದೆ. ಮಹಿಳೆಯರು ಮಾತ್ರವಲ್ಲ, ಪುಟ್ಟ ಬಾಲಕಿಯರಿಗೂ ಸಮಾಜದಲ್ಲಿ ಸುರಕ್ಷತೆಯಿಲ್ಲ ಎಂದು ತೋರಿಸುವಂತಹ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಗೆ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ. ಈತನ ಈ ದುಷ್ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪಾಕಿಸ್ತಾನದಲ್ಲಿ ಪುಟ್ಟ ಮಕ್ಕಳಿಗೂ ಸುರಕ್ಷತೆಯಿಲ್ಲ; ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ
ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ
Image Credit source: Social Media

Updated on: Jul 30, 2025 | 3:46 PM

ಈಗಂತೂ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಓಡೋಡುವುದೇ ಕಷ್ಟಸಾಧ್ಯವಾಗಿದ್ದು, ಕೆಲವೊಂದು ಅಹಿತಕರ ಘಟನೆಗಳನ್ನು ನೋಡಿದಾಗ ಈ ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎಂದೆನಿಸುತ್ತದೆ. ಆದ್ರೆ ಇಲ್ಲೊಂದು ನಡೆದಿರುವ ನಾಚಿಕೆಗೇಡಿನ ಸಂಗತಿಯನ್ನು ನೋಡಿದರೆ ಮಹಿಳೆಯರಷ್ಟೇ ಅಲ್ಲ, ಪುಟ್ಟ ಹೆಣ್ಣು ಮಕ್ಕಳಿಗೂ ಸಮಾಜದಲ್ಲಿ ಸುರಕ್ಷತೆಯಿಲ್ಲ ಎಂದೆನಿಸುತ್ತದೆ. ಇಂತಹದ್ದೊಂದು ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದ್ದು, ಕಾಮುಕನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಪುಟ್ಟ ಬಾಲಕಿಗೆ ಮುತ್ತಿಟ್ಟು (man molest little girl)  ಆಕೆಗೆ ಕಿರುಕುಳ ನೀಡಿದ್ದಾನೆ. ಈತನ ಈ ದುಷ್ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬಾಲಕಿಗೆ ಮುತ್ತಿಟ್ಟು ಕಿರುಕುಳ ಕೊಟ್ಟ ವ್ಯಕ್ತಿ:

ತನ್ನ ತಮ್ಮನೊಂದಿಗೆ ಪುಟ್ಟ ಬಾಲಕಿಯೊಬ್ಬಳು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದ ವೇಳೆ, ಇತ್ತ ಕಡೆಯಿಂದ ಬರುತ್ತಿದ್ದ ವ್ಯಕ್ತಿಯೊಬ್ಬ ಯಾರ ಭಯವೂ ಇಲ್ಲದೆ ರಾಜಾರೋಷವಾಗಿ ಆ ಬಾಲಕಿಗೆ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ. ಈ  ಘಟನೆ ಜುಲೈ 25 ರಂದು ಪಾಕಿಸ್ತಾನದ ಕಸೂರ್‌ನ ಶಾ ಇನಾಯತ್‌ ಕಾಲೋನಿಯಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ
ಮಹಿಳೆಗೆ ಕೆಲಸ ನೀಡಲು ನಿರಾಕರಿಸಿದ ಕಂಪನಿ, ಕಾರಣ ಇದೆ ನೋಡಿ
ವಾರ್ಷಿಕ ಸಂಬಳ 46 ಲಕ್ಷ ರೂ, ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್​​​ ಕುಡಿದು ವ್ಯಕ್ತಿ ಸಾವು
ಮದುವೆಯಾದ 18 ತಿಂಗಳಿಗೆ ಡಿವೋರ್ಸ್, 18 ಕೋಟಿ ರೂ ಜೀವನಾಂಶ ಬೇಕು ಎಂದ ಪತ್ನಿ

ಈ ಕುರಿತ ವಿಡಿಯೋವನ್ನು ದಿವ್ಯಾ ಗಂಡೋತ್ರಾ ಟಂಡನ್‌ (Divya Gandotra Tandon) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಕಿರಿದಾಗ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿಕ್ಕ ಮಗುವಿಗೆ ಕಿರುಕುಳ ನೀಡಿದ ವ್ಯಕ್ತಿ, ಇಂತಹ ರಾಕ್ಷಸರು ಅಟ್ಟಹಾಸ ಮೆರೆಯುವಾಗ ಕಾನೂನು ಏಕೆ ಮೌನವಾಗಿ ಕುಳಿತಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ತನ್ನ ತಮ್ಮನ ಜೊತೆ ಓಣಿಯಲ್ಲಿ ನಡೆದುಕೊಂಡು ಬರುತ್ತಿರುವ ದೃಶ್ಯವನ್ನು ಕಾಣಬಹುದು. ಇತ್ತ ಕಡೆಯಿಂದ ಬರುತ್ತಿದ್ದ ವ್ಯಕ್ತಿಯೊಬ್ಬ ರಾಜಾರೋಷವಾಗಿ ಆ ಹುಡುಗಿಗೆ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ. ಈತನ ರಾಕ್ಷಸತನವನ್ನು ಕಂಡು ಆ ಪುಟ್ಟ ಹುಡುಗಿಯ ತಮ್ಮ ಜೋರಾಗಿ ಅತ್ತಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮಕ್ಕಳು, ಮನೆ, ಗಂಡ, ಕೆಲಸ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಮಹಿಳೆಗೆ ಕೆಲಸ ನೀಡಲು ನಿರಾಕರಿಸಿದ ಕಂಪನಿ

ಜುಲೈ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ  1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ರಾಕ್ಷಸರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪಾಕಿಸ್ತಾನದಿಂದ ಇನ್ನೆನನ್ನು ನಿರೀಕ್ಷಿಸಲು ಸಾಧ್ಯʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ವಿಕೃತಿ ಮನಸ್ಸಿನ ವ್ಯಕ್ತಿಗಳನ್ನು ಗುಂಡಿಟ್ಟು ಕೊಲ್ಲಬೇಕುʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ