ಬಿ ಪ್ರಾಕ್​ ಹಾಡಿರುವ ‘ಮನ ಭಾರ್ಯಾ’ ಹಾಡಿಗೆ ಟ್ವಿಸ್ಟ್ ನೀಡಿರುವ ಪಾಕಿಸ್ತಾನಿ ಗಾಯಕ

| Updated By: ಶ್ರೀದೇವಿ ಕಳಸದ

Updated on: Nov 29, 2022 | 11:48 AM

B Praak : ಮುದಾಸೀರ್ ಆಶೀ ಖಾನ್, ಬಿ ಪ್ರಾಕ್​ ಅವರ ಹಾಡಿಗೆ ಸ್ವಂತ ಸಾಹಿತ್ಯ ಅಳವಡಿಸಿ ಹಾಡಿದ್ದಾರೆ. ಸಂಗೀತಕ್ಕೆ ಗಡಿಗಳ ಹಂಗಿಲ್ಲ, ಈ ಹಾಡನ್ನು 50 ಸಲ ಕೇಳಿದೆ. ಪೂರ್ತಿ ಹಾಡಿ, ಎಂಥ ಪರಿಶುದ್ಧ ಕಂಠ, ಭಾವ ನಿಮ್ಮದು ಎನ್ನುತ್ತಿದ್ದಾರೆ ನೆಟ್ಟಿಗರು.

ಬಿ ಪ್ರಾಕ್​ ಹಾಡಿರುವ ‘ಮನ ಭಾರ್ಯಾ’ ಹಾಡಿಗೆ ಟ್ವಿಸ್ಟ್ ನೀಡಿರುವ ಪಾಕಿಸ್ತಾನಿ ಗಾಯಕ
ಭಾರತೀಯ ಗಾಯಕ ಬಿ ಪ್ರಾಕ್​ ಮತ್ತು ಪಾಕಿಸ್ತಾನಿ ಗಾಯಕ ಮುದಾಶೀರ್ ಆಶೀ ಖಾನ್
Follow us on

Viral Video : ಬಿ ಪ್ರಾಕ್ ಎಂದೇ ಹೆಸರಾಗಿರುವ ಭಾರತೀಯ ಗಾಯಕ ಬಚನ್ ಪ್ರತೀಕ್ ಅವರ ಪ್ರಸಿದ್ಧ ಹಾಡು ‘ಮನ ಭಾರ್ಯಾ’. ಇದನ್ನು ಅವರು ಕೆಲ ವರ್ಷಗಳ ಹಿಂದೆ ಹಾಡಿದ್ದರು. ಇದೀಗ ಈ ಹಾಡಿನ ದಾಟಿಗೆ ಸ್ವಂತ ಸಾಹಿತ್ಯ ರಚಿಸಿ ಹಾಡಿದ್ದಾರೆ ಪಾಕಿಸ್ತಾನಿ ಗಾಯಕ ಮುದಾಸೀರ್ ಆಶೀ ಖಾನ್​. ಈ ಹಾಡನ್ನು ಮುದಾಸೀರ್ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದಾಗಿನಿಂದ ವೈರಲ್ ಆಗುತ್ತಿದೆ. ನೆಟ್ಟಿಗರು ಅದರಲ್ಲೂ ಭಾರತೀಯರು ಈ ಹೃದಯಸ್ಪರ್ಶಿಯಾದ ಹಾಡನ್ನು ಕೇಳುತ್ತ ಮೈಮರೆಯುತ್ತಿದ್ದಾರೆ. ಪೂರ್ತಿ ಹಾಡನ್ನು ಹಾಡಿರೆಂದು ಕೇಳಿಕೊಳ್ಳುತ್ತಿದ್ದಾರೆ.

ಈ ಹಾಡನ್ನು @bpraak ಹಾಡಿದ್ದಾರೆ. ಇದಕ್ಕೆ ನನ್ನದೇ ಆದ ಸಾಹಿತ್ಯ ರಚಿಸಿ ಹಾಡಿದ್ದೇನೆ ಎಂದು ಮುದಾಸೀರ್​ ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಮುದಾಸೀರ್​ ತಮ್ಮದೇ ಆದ ವಿಶಿಷ್ಟ ದನಿಬಾನಿಯಲ್ಲಿ ಇದನ್ನು ಹಾಡಿ ಕೇಳುಗರ ಮನಸೂರೆಗೊಳ್ಳುತ್ತಿದ್ದಾರೆ.

ಅನೇಕ ಭಾರತೀಯರು ಇವರ ಹಾಡಿಗೆ ಫಿದಾ ಆಗುತ್ತಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಅಣ್ಣಾ ಇನ್ನೊಮ್ಮೆ ಈ ಪೂರ್ತಿ ಹಾಡನ್ನು ಹಾಡಿ ಯೂಟ್ಯೂಬಿಗೆ ಹಾಕಿ ಎಂದು ನಿವೇದಿಸಿಕೊಳ್ಳುತ್ತಿದ್ದಾರೆ. ನೀವು ಈ ಹಾಡನ್ನು ಅನುಭವಿಸಿ ಹಾಡುತ್ತಿದ್ದೀರಿ, ಎಂಥ ಧ್ವನಿ ನಿಮ್ಮದು ಎಂದಿದ್ದಾರೆ ಇನ್ನೊಬ್ಬರು. ಈ ಹಾಡು ಹಾಡಿದ್ದಕ್ಕೆ ನಿಮ್ಮ ಬಗ್ಗೆ ಪ್ರೀತಿ ಮತ್ತು ಅಭಿಮಾನ ಉಂಟಾಯಿತು ಎಂದಿದ್ದಾರೆ ಮತ್ತೊಬ್ಬರು. ಸಂಗೀತಕ್ಕೆ ಗಡಿಗಳ ಹಂಗಿಲ್ಲ ಎನ್ನುವುದು ಇದಕ್ಕೇ. ಈ ಹಾಡನ್ನು 50 ಸಲ ಕೇಳಿದೆ. ಇದು ನನ್ನ ಹೃದಯವನ್ನು ತಾಕಿತು ಎಂದಿದ್ದಾರೆ ಇನ್ನೂ ಒಬ್ಬರು. ನಿಮ್ಮ ಧ್ವನಿ ಪರಿಶುದ್ಧವಾಗಿದೆ, ಧನ್ಯವಾದ ಇಂಥ ಮಾಂತ್ರಿಕತೆ ಹೆಚ್ಚಲಿ ಎಂದಿದ್ದಾರೆ ಮತ್ತೊಬ್ಬರು.

ಈ ಹಾಡು ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ