ದೈತ್ಯ ಗಾತ್ರದ ಹುಲಿಗೆ ಮುತ್ತಿಡುತ್ತಿರುವ ಇನ್ಫ್ಲುಯೆನ್ಸರ್, ಮೈ ಜುಮ್ಮ್ ಎನಿಸುತ್ತೆ ಈ ದೃಶ್ಯ

ಹುಲಿಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು ಎನ್ನುವುದು ತಿಳಿದಿರುವ ವಿಚಾರ. ಹೀಗಾಗಿ ಇವುಗಳ ಶಿಕಾರಿ, ಕಾದಾಟ, ಗಾಂಭೀರ್ಯದ ನಡಿಗೆಯ ನ್ನು ಕಣ್ತುಂಬಿಸಿಕೊಳ್ಳುವುದೇ ಚಂದ. ಆದರೆಯಾರು ಕೂಡ ಈ ಕ್ರೂರ ಪ್ರಾಣಿ ಹುಲಿಗಳ ಜೊತೆಗೆ ಚೆಲ್ಲಾಟ ಆಡಲು ಹೋಗಲ್ಲ. ಸ್ವಲ್ಪ ಯಾಮಾರಿದ್ರೂ ನಾವುಗಳೇ ಅದಕ್ಕೆ ಆಹಾವಾಗಿ ಬಿಡುತ್ತೇವೆ. ಇದೀಗ ಪಾಕಿಸ್ತಾನಿ ಇನ್ಫ್ಲುಯೆನ್ಸರ್ ಸರಪಳಿಯಲ್ಲಿ ಕಟ್ಟಿಹಾಕಿರುವ ಹುಲಿಯ ಬಾಯಿಗೆ ಮುತ್ತಿಕ್ಕುತ್ತಿರುವ ವಿಡಿಯೋ ಒಂದು ಕ್ಷಣ ಝಲ್ ಎನಿಸುತ್ತೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ದೈತ್ಯ ಗಾತ್ರದ ಹುಲಿಗೆ ಮುತ್ತಿಡುತ್ತಿರುವ ಇನ್ಫ್ಲುಯೆನ್ಸರ್, ಮೈ ಜುಮ್ಮ್ ಎನಿಸುತ್ತೆ ಈ ದೃಶ್ಯ
ವೈರಲ್​​ ವಿಡಿಯೋ
Edited By:

Updated on: Apr 17, 2025 | 5:58 PM

ಕ್ರೂರ ಪ್ರಾಣಿ (quarrel animals) ಗಳ ಹೆಸರು ಕೇಳಿದರೆ ಸಾಕು ಒಂದು ಕ್ಷಣ ಮೈನಡುಕ ಶುರುವಾಗುತ್ತದೆ. ಇನ್ನೇನು ಕಾಡಿನಿಂದ ನಾಡಿಗೆ ಬಂದಿದ್ದಾವೆ ಎನ್ನುವ ಸುದ್ದಿ ಕಿವಿಗೆ ಬಿದ್ದರೆ ಸಾಕು, ಓಡಾಡಲು ಕೂಡ ಧೈರ್ಯ ಬರಲ್ಲ. ಆದರೆ ಕೆಲವು ಯುವಕರು ಈ ಪ್ರಾಣಿಗಳ ಜೊತೆಗೆ ಸೆಲ್ಫಿ (selfi) ಕ್ಲಿಕಿಸಲು ಅಥವಾ ಅವುಗಳ ಜೊತೆಗೆ ಚೆಲ್ಲಾಟ ಆಡಲು ಹೋಗಿ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಇನ್ಫ್ಲುಯೆನ್ಸರ್ ನೌಮನ್ ಹುಸೇನ್ (pakistani influencer nouman hussan) ಹುಲಿಗೆ ಮುತ್ತಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಖಾರವಾಗಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

nouman.hussan ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಪಾಕಿಸ್ತಾನಿ ಇನ್ಫ್ಯೂಯೆನ್ಸರ್ ಲಾಹೋರ್ ಮೂಲದ ನೌಮನ್ ಹುಸೇನ್ ಸರಪಳಿಯಿಂದ ಬಂಧಿಸಲ್ಪಟ್ಟ ಹುಲಿಯನ್ನು ಚುಂಬಿಸಲು ಪ್ರಯತ್ನಿಸುತ್ತಿರುತ್ತಿದ್ದಾರೆ. ಆ ಬಳಿಕ ಈ ಹುಲಿಯೂ ಅವರ ಕೈ ಗೆ ತನ್ನ ಚೂಪಾದ ಹಲ್ಲುಗಳಿಂದ ಕಚ್ಚುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಹುಸೇನ್ ಅವರು ಜೋರಾಗಿ ಗದರಿದ್ದಾರೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಯ ಹೊಟ್ಟೆ ಸೀಳಿ ಹೊರ ಬಂದ ಈಲ್ ಮೀನು, ಕ್ಯಾಮೆರಾದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಈವರೆಗೆ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಟೀಕಿಸುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ, ‘ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ’ ಎಂದಿದ್ದಾರೆ. ಇನ್ನೊಬ್ಬರು, ‘ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋದ ವೀವ್ಸ್ ಗಿಂತ ಜೀವ ಮುಖ್ಯ’ ಎಂದು ತಿಳಿಸಿದ್ದಾರೆ. ಮತ್ತೊರ್ವ ಬಳಕೆದಾರ, ‘ಈ ವಿಡಿಯೋ ನಿಜಕ್ಕೂ ಅಪಾಯಕಾರಿಯಾಗಿದೆ’ ಎಂದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ