Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು

ಮಧ್ಯಪ್ರದೇಶದ ಈ ಗಿಳಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿದೆ. ವಿದ್ಯಾರ್ಥಿಗಳು ಶಾಲೆಗೆ ಹೊರಟಾಗ ಅವರೊಡನೆ ಈ ಮುದ್ದಾದ ಗಿಳಿಯೂ ಸಹ ಶಾಲೆಗೆ ಹೋಗುತ್ತಿದೆ.

Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು
ಶಾಲೆಗೆ ಹೊರಟಿದೆ ಈ ಮುದ್ದಾದ ಗಿಳಿ
Edited By:

Updated on: Oct 03, 2021 | 1:01 PM

ಪ್ರಾಣಿಗಳು ಮತ್ತು ಪಕ್ಷಿಗಳು ಮನುಷ್ಯರನ್ನು ಎಷ್ಟು ಹಚ್ಚಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಸುದ್ದಿಯಿದೆ. ನಾವು ಪಕ್ಷಿ ಅಥವಾ ಪ್ರಾಣಿಗಳಿಗೆ ಎಷ್ಟು ಪ್ರೀತಿ ತೋರಿಸುತ್ತೇವೆಯೋ ಅಷ್ಟೇ ಪ್ರೀತಿಯನ್ನು ಅವು ನಮಗೆ ನೀಡುತ್ತವೆ ಎಂಬುದಕ್ಕೆ ಈ ಸುದ್ದಿ ಮಾದರಿಯಾಗಿದೆ. ಮನುಷ್ಯರ ಭಾಷೆ, ನಡವಳಿಕೆಯನ್ನು ಅರ್ಥ ಮಾಡಿಕೊಂಡ ಮುದ್ದಾದ ಗಿಳಿಮರಿಯೊಂದು ವಿದ್ಯಾರ್ಥಿಗಳೊಡನೆ ಶಾಲೆಗೆ ಹೋಗುತ್ತದೆ. ಹೃದಯಸ್ಪರ್ಶಿ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಮಧ್ಯಪ್ರದೇಶದ ಈ ಗಿಳಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿದೆ. ವಿದ್ಯಾರ್ಥಿಗಳು ಶಾಲೆಗೆ ಹೊರಟಾಗ ಅವರೊಡನೆ ಈ ಮುದ್ದಾದ ಗಿಳಿಯೂ ಸಹ ಶಾಲೆಗೆ ಹೋಗುತ್ತಿದೆ. ಇವರಿಬ್ಬರ ನಡುವಿನ ಅನನ್ಯ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತಂತೆ ಎಎನ್​ಐ ಸುದ್ದಿ ಮಾಡಿದೆ. ಗಿಳಿಯು ವಿದ್ಯಾರ್ಥಿಗಳ ಜತೆಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎಎನ್ಐ ಜತೆ ಮಾತನಾಡಿದ ವಿದ್ಯಾರ್ಥಿ ವಿವೇಕ್, ನಾವು ಶಾಲೆಗೆ ಹೊರಡುವಾಗ ಪ್ರತಿದಿನ ಗಿಳಿ ನಮ್ಮ ಜತೆಗೆ ಬರುತ್ತದೆ. ನಮ್ಮ ಹೆಗಲೆ ಮೇಲೆ ಕುಳಿತುಕೊಂಡು ಶಾಲೆಗೆ ಹೋಗುತ್ತದೆ ಕೆಲವು ಬಾರಿ ನಮ್ಮ ತಲೆಯ ಮೇಲೂ ಕುಳಿತುಕೊಳ್ಳುತ್ತದೆ. ಗಿಳಿಯೊಡನೆ ನಾವು ಹೆಚ್ಚು ಸಂತೋಷವಾಗಿದ್ದೇವೆ ಅದರೊಂದಿಗೆ ಆಡುತ್ತೇವೆ ಹಾಗಾಗಿ ಗಿಳಿ ನಮ್ಮ ಜತೆಯೇ ಇರುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾನೆ.

ಗಿಳಿ ಮತ್ತು ವಿದ್ಯಾರ್ಥಿಗಳ ಈ ಸ್ನೇಹ ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ. ಇದು ಜನ್ಮ ಜನ್ಮದ ಸಂಬಂಧ ಎಂದು ಓರ್ವರು ಹೇಳಿದ್ದಾರೆ. ಇನ್ನೋರ್ವರು ಇವರ ಸ್ನೇಹ ಮೆಚ್ಚಿಗೆಯಾಗುವಂತಿದೆ, ನನಗೆ ಇಷ್ಟವಾಯಿತು ಎಂದು ಹೇಳಿದ್ದಾರೆ. ಗಿಳಿ ವಿದ್ಯಾರ್ಥಿಯ ಭುಜದ ಮೇಲೆ ಕುಳಿತಿರುವ ಫೋಟೋ ಅನನ್ಯವಾಗಿದೆ ಎಂಬ ಅಭಿಪ್ರಾಯಗಳೂ ಸಹ ಕೇಳಿಬಂದಿದೆ.

ಇದನ್ನೂ ಓದಿ:

Viral Video: ಜೆಸಿಬಿ ಏರಿ ಸವಾರಿ ಹೊರಟ ಜೋಡಿ; ನೆಟ್ಟಿಗರ ಮನಗೆದ್ದ ಈ ವಿಡಿಯೊ ನೋಡಿ

Viral Video: ಮದುವೆ ದಿನವೇ ಕೋಪಗೊಂಡು ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತ ವಧು; ವಿಡಿಯೋ ಮಜವಾಗಿದೆ ನೀವೂ ನೋಡಿ

Published On - 1:01 pm, Sun, 3 October 21