
ಕೆಲವೊಮ್ಮೆ ನಾವು ಎಲ್ಲಾ ವಿಷ್ಯಗಳ ಬಗ್ಗೆಯೂ ಎಷ್ಟು ಎಚ್ಚರ ವಹಿಸಿದ್ರೂ ಸಾಲಲ್ಲ. ಗೊತ್ತೋ ಗೊತ್ತಿಲ್ಲದೆ ಮಾಡುವ ತಪ್ಪುಗಳಿಂದ ಸಮಸ್ಯೆಗಳೇ ಹೆಚ್ಚು. ಇದೀಗ ಪ್ರಯಾಣಿಕನೊಬ್ಬ (passenger) ರಾಪಿಡೋ ಬುಕ್ ಮಾಡಿದ್ದಾನೆ. ಇದೇ ವೇಳೆ ರಾಪಿಡೋ ಬಾಡಿಗೆಯಾಗಿ 58 ರೂ ಪೇಮೆಂಟ್ ಮಾಡಬೇಕಾಗಿತ್ತು. ಗೊಂದಲದಲ್ಲಿದ್ದ ಪ್ರಯಾಣಿಕ ಒಟಿಪಿಯನ್ನೇ ಹಾಕಿ 4,000 ರೂ ಪಾವತಿಸಿದ್ದಾನೆ. ತದನಂತರದಲ್ಲಿ ರಾಪಿಡೋ ಚಾಲಕನ ವರ್ತನೆ ಚರ್ಚೆಗೆ ಕಾರಣವಾಗಿದೆ.
ರಾಪಿಡೋ ಯೂಸರ್ಸ್ (r/RapidoUsers) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬ ತನಗಾದ ಕಹಿ ಅನುಭವವನ್ನು ಪೋಸ್ಟ್ ಮಾಡಿದ್ದಾರೆ. ರಾಪಿಡೋ ರೈಡ್ ಮುಗಿದ ಬಳಿಕ ಹಣ ಪಾವತಿಸಲು ಯುಪಿಐ ಬಳಸಿದೆ. ಆದರೆ ತನ್ನ ಗೊಂದಲದಿಂದ 50 ರೂ ಪಾವತಿಸುವ ಬದಲು ಒಟಿಪಿ ಸಂಖ್ಯೆಯನ್ನೇ ಹಾಕಿ 4,000 ರೂ ಪಾವತಿ ಮಾಡಿದೆ. ತನ್ನ ಗಮನಕ್ಕೆ ಬಂದ ತಕ್ಷಣ ರಾಪಿಡೋ ಚಾಲಕನ ಬಳಿ ಹೆಚ್ಚುವರಿ ಹಣವನ್ನು ವಾಪಾಸ್ ಕೊಡುವಂತೆ ಕೇಳಿದೆ. ಆದರೆ ಆತ ಹಣ ಮರುಪಾವತಿಸಲು ಒಪ್ಪಲಿಲ್ಲ. ಹಣವು ನಾಳೆ ನನ್ನ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ . ತೆರಿಗೆ ಕಡಿತಗೊಳಿಸಿ ಉಳಿದ ಹಣವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ. ಆದರೆ ಕೊನೆಗೆ ನಾನು ಸಹಾಯಕ್ಕಾಗಿ ರಾಪಿಡೋದ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿದೆ. ಗ್ರಾಹಕ ಸೇವಾ ತಂಡವು ಈಗಾಗಲೇ ಚಾಲಕನಿಗೆ ಹಣ ವರ್ಗಾವಣೆಯಾಗಿದೆ ಹಾಗೂ ಇದು ನಿಮ್ಮಿಬ್ಬರ ನಡುವಿನ ವ್ಯವಹಾರವಾಗಿದೆ ಎಂದು ಹೇಳಿದರು. ಈ ಸಮಸ್ಯೆಗೆ ಪರಿಹಾರವಂತೂ ಸಿಗಲಿಲ್ಲ.. ದಯವಿಟ್ಟು ಯಾರಾದರೂ ಇದಕ್ಕೆ ಸಲಹೆ ನೀಡಬಹುದೇ ಎಂದು ಕೇಳಿದ್ದಾನೆ.
Accidentally paid my otp to rapido
by
u/scaredoftoothdecay45 in
RapidoUsers
ಇದನ್ನೂ ಓದಿ: ಏರ್ಹೋಸ್ಟೆಸ್ ತರಬೇತಿ ಬಿಟ್ಟು ಟ್ರಕ್ ಚಾಲಕಿಯಾದ ಹಿಮಾಚಲದ ಯುವತಿ: ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ ನೇಹಾ ಠಾಕೂರ್
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ರಾಪಿಡೋ ಚಾಲಕನಿಗೆ ದುಡ್ಡಿನ ಮೇಲೆ ಆಸೆ ಎಂದು ಕಾಣುತ್ತದೆ. ಬಾಡಿಗೆ ಹಣ ಇಟ್ಟುಕೊಂಡು ಉಳಿದ ಹಣ ಕೊಡಬಹುದು ಅಲ್ಲವೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಸೈಬರ್ ಕ್ರೈಂ ದೂರು ನೀಡಿದರೆ ಹಣ ವಾಪಾಸ್ ಬರಬಹುದೇನೋ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಆ ದುಡ್ಡಿನ ಆಸೆಯೇ ಬಿಟ್ಟು ಬಿಡಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Wed, 14 October 26