ಸೋಷಿಯಲ್ ಮೀಡಿಯಾವು ಪ್ರತಿಭೆಗಳಿಗೆ ಅದ್ಭುತ ವೇದಿಕೆಯೆನ್ನುವ ಮಾತೇನೋ ನಿಜ. ಈಗಾಗಲೇ ಅದೆಷ್ಟೋ ಜನರು ನೃತ್ಯ, ನಟನೆ, ಹಾಡು ಹೀಗೆ ನಾನಾ ರೀತಿಯ ಪ್ರತಿಭೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಫಾಲ್ಲೋರ್ಸ್ ಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ ನಮ್ಮ ಸುತ್ತಮುತ್ತಲಿನಲ್ಲಿ ಮಾಡುವ ಕೆಲಸವನ್ನು ಬಿಟ್ಟು ರೀಲ್ಸ್ ನಲ್ಲೇ ಮುಳುಗಿರುವವರು ಇದ್ದಾರೆ. ಇಲ್ಲೊಬ್ಬ ಶಿಕ್ಷಕಿಯ ಉತ್ತರ ಪತ್ರಿಕೆ ಕರೆಕ್ಷನ್ ಮಾಡುವ ವೇಳೆಯಲ್ಲಿ ರೀಲ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ಮೇಲೆ ಈಕೆಗೆ ರೀಲ್ಸ್ ಹುಚ್ಚು ಎಷ್ಟಿದೆ ಎಂದು ತಿಳಿಯುತ್ತದೆ.
ಹೌದು, ಬಿಹಾರದ ಪಾಟ್ನಾ ಕಾಲೇಜು ಶಿಕ್ಷಕಿಯೊಬ್ಬರು ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವಾಗ ರೀಲ್ಸ್ ಮಾಡಿದ್ದಾರೆ. ಚಪ್ರಾ ಝಿಲ್ಲಾ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಶಾಲೆಯ ಬೆಂಚ್ ಮೇಲೆ ಹಲವಾರು ಉತ್ತರ ಪತ್ರಿಕೆಗಳನ್ನು ಇರಿಸಿರುವುದನ್ನು ನೋಡಬಹುದು. ಆದರೆ ಕರೆಕ್ಷನ್ ಮಾಡುವುದರಲ್ಲಿ ಇರಬೇಕಾದ ಗಮನ ಮೊಬೈಲ್ ಕ್ಯಾಮೆರಾದ ಮೇಲಿದೆ. ಉಳಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೆಲಸ ಮಾಡುವುದನ್ನು ಬಿಟ್ಟು ರೀಲ್ಸ್ ನಲ್ಲಿ ಮುಳುಗಿದ ಈ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಮಹಿಳೆಯ ಪರ್ಸ್ ಎಗರಿಸಲು ಬಂದ ಕಳ್ಳ ಬಸ್ನಲ್ಲೇ ಲಾಕ್, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
पीपीयू एग्जाम का कॉपी जांचने का रील्स इंस्टाग्राम पर वायरल, मैडम पर FIR दर्ज। pic.twitter.com/GlnZhH4Yuk
— छपरा जिला 🇮🇳 (@ChapraZila) May 26, 2024
ಈ ವೀಡಿಯೊವನ್ನು @BiharTeacherCan ಹೆಸರಿನ X (ಹಿಂದೆ Twitter) ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಮೂರು ಲಕ್ಷದ ಎಂಭತ್ತಮ್ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅದಲ್ಲದೇ, ಶಿಕ್ಷಕಿಯ ರೀಲ್ಸ್ ಹುಚ್ಚು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿಸಿದೆ. ಬಳಕೆದಾರರೊಬ್ಬರು, ‘ಈ ಮೇಡಂ ವಧುವಿನಂತೆ ಕಂಗೊಳಿಸುತ್ತಿದ್ದಾರೆ’ ಎಂದಿದ್ದಾರೆ. ಮತ್ತೊಬ್ಬರು ‘ಮಕ್ಕಳ ಪೇಪರ್ ಬ್ಯಾಕ್ ಅಪ್ ಯಾಕೆ ಆಗುತ್ತಿದೆಯೆಂದು ಈಗ ಅರ್ಥವಾಗುತ್ತಿದೆ’ ಎಂದಿದ್ದಾರೆ. ಇನ್ನು ಕೆಲವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತನ್ನು ಕಲಿಸುವ ಶಿಕ್ಷಕರೇ ಹೀಗೆ ಮಾಡಿದರೆ ಮಕ್ಕಳ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ