Viral Video: ಪಾವ್ ಭಾಜಿ ಐಸ್ಕ್ರೀಮ್ ರೋಲ್, ಇದೆಂತಹ ಐಸ್ಕ್ರೀಮ್ ಎಂದು ತಲೆಕೆಡಿಸಿಕೊಂಡ ನೆಟ್ಟಿಗರು

ಪಾವ್ ಭಾಜಿಯಿಂದ ಯಾರಾದರು ಐಸ್ಕ್ರೀಮ್ ತಯಾರಿಸುವುದನ್ನು ನೊಡಿದ್ದೀರಾ, ಈ ವಿಚಿತ್ರ ಐಸ್ಕ್ರೀಮ್ ತಯಾರಿಕೆಯ ವೀಡಿಯೋ ಇನ್ಸ್ಟಾಗ್ರಾಮ್​​​ನಲ್ಲಿ ವೈರಲ್ ಆಗಿದ್ದು, ಇದೆಂತಹ ಐಸ್ಕ್ರೀಮ್ ಎಂದು ನೋಡುಗರು ದಿಗ್ಬ್ರಾಂತಗೊಂಡಿದ್ದಾರೆ.

Viral Video: ಪಾವ್ ಭಾಜಿ ಐಸ್ಕ್ರೀಮ್ ರೋಲ್, ಇದೆಂತಹ ಐಸ್ಕ್ರೀಮ್ ಎಂದು ತಲೆಕೆಡಿಸಿಕೊಂಡ ನೆಟ್ಟಿಗರು
ವೈರಲ್​​ ವೀಡಿಯೊ
Edited By:

Updated on: Jun 07, 2023 | 4:35 PM

ಪಾವ್ ಭಾಜಿ ಭಾರತದಲ್ಲಿನ ಅತ್ಯಂತ ಪ್ರಿಯವಾದ ಬೀದಿ ಬದಿಯ ತಿಂಡಿಗಳಲ್ಲಿ ಒಂದಾಗಿದೆ. ಮುಂಬೈ ಮೂಲದ ಈ ತಿನಿಸು ತಿನ್ನಲು ಬಲು ರುಚಿಕರ. ಅದ್ಭುತ ರುಚಿಯನ್ನು ನೀಡುವ ಈ ತಿನಿಸಿನಿಂದ ಐಸ್ಕ್ರೀಮ್ ರೋಲ್ ತಯಾರಿಸಿದರೆ ಹೇಗಿರುತ್ತದೆ, ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಂತೂ ಸಾಮಾಜಿಕ ಜಾಲತಾಣಗಳಲ್ಲಿ ವಿಲಕ್ಷಣ ಆಹಾರಗಳ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಂತೂ ಚಿತ್ರವಿಚಿತ್ರವಾದ ಐಸ್ಕ್ರೀಮ್ ರೋಲ್​​​ಗಳು. ಚಿಕನ್ ಐಸ್ಕ್ರೀಮ್ ರೋಲ್, ಪಾನಿಪುರಿ ಐಸ್ಕ್ರೀಮ್ ರೋಲ್, ಸಮೋಸಾ ಐಸ್ಕ್ರೀಮ್ ರೋಲ್ ಹೀಗೆ ವಿಲಕ್ಷಣವಾದ ಐಸ್ಕ್ರೀಮ್ ರೋಲ್ ತಯಾರಿಕೆಯ ಅದೆಷ್ಟೋ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈಗ ಅದರ ಸಾಲಿಗೆ ಇನ್ನೊಂದು ವಿಲಕ್ಷಣ ಐಸ್ಕ್ರೀಮ್ ರೋಲ್ ಸೇರ್ಪಡೆಯಾಗಿದೆ. ಅದುವೆ ಪಾವ್ಭಾಜಿ ಐಸ್ಕ್ರೀಮ್ ರೋಲ್. ಇನ್ಸ್ಟಾಗ್ರಾಮ್ ನಲ್ಲಿ ಈ ಪಾವ್ ಭಾಜಿ ಐಸ್ಕ್ರೀಮ್ ರೋಲ್ ತಯಾರಿಕೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದನ್ನೂ ತಿನ್ನುವವರಿದ್ದಾರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕ್ರೇವಿಂಗ್ಸ್ ಎವ್ರಿಟೈಮ್ (@cravingseverytime) ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾವ್ ಭಾಜಿ ಐಸ್ಕ್ರೀಮ್ ರೋಲ್ ತಯಾರಿಕೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಮೊದಲಿಗೆ ಪಾವ್ ನ್ನು ಐಸ್ಕ್ರೀಮ್ ರೋಲ್ ತಯಾರಿಸುವ ಮೇಜಿನ ಮೇಲೆ ಇಟ್ಟು ನಂತರ ಅದರ ಮೇಲೆ ಐಸ್ಕ್ರೀಮ್ ಸುರಿದು, ಹಂತ ಹಂತವಾಗಿ ಐಸ್ಕ್ರೀಮ್ ರೋಲ್ ತಯಾರಿಸಿ, ನಂತರ ಅದನ್ನು ಒಂದು ಸಣ್ಣ ಪ್ಲೇಟ್ ಮೇಲೆ ಹಾಕಿ ಅದರ ಮೇಲೆ ಭಾಜಿ ಮತ್ತು ಈರುಳ್ಳಿಯನ್ನು ಹಾಕಿ ಗ್ರಾಹಕರಿಗೆ ತಿನ್ನಲು ನೀಡುವುದನ್ನು ಕಾಣಬಹುದು.

ಇದನ್ನೂ ಓದಿ:Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ….ವೈರಲ್​​​ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋ 46.6 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಗಳನ್ನು ಪಡೆದುಕೊಂಡಿದೆ. ಹಾಗೂ ಅನೇಕರು ಈ ವೀಡಿಯೋಗೆ ಕಮೆಂಟ್ಸ್​​​ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಇದನ್ನು ನೋಡಿ ವಾಂತಿ ಬರುತ್ತಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದನ್ನು ಮಾಡಿದವ ಮೊದಲು ತಿನ್ನಬೇಕು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅಸಹ್ಯಕರ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 1:17 pm, Wed, 7 June 23

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us