ಸಾಮಾಜಿಕ ಜಾಲತಾಣಗಳು ಹೊಸ ಹೊಸ ವಿಚಾರಗಳಿಂದ ವಿಭಿನ್ನ ರೀತಿಯ ವೀಡಿಯೋಗಳಿಂದ ನೆಟ್ಟಿಗರನ್ನು ಸೆಳೆಯುತ್ತಿರುತ್ತವೆ. ವೈರಲ್ ಹಾಡುಗಳು, ವೈರಲ್ ವೀಡಿಯೋಗಳು, ವೈರಲ್ ಆಹಾರಗಳಿಂದ ನೋಡುಗರನ್ನು ಅಚ್ಚರಿಗೊಳಿಸುತ್ತಿರುತ್ತವೆ. ಇದೀಗ ಕಡಲೆಕಾಯಿ ಮಾರಾಟಗಾರನೊಬ್ಬ ಕಚ್ಚಾ ಬಾದಾಮ್ ಎನ್ನುವ ಹಾಡನ್ನು ರಚಿಸಿ ಹಾಡನ್ನು ಹಾಡುತ್ತಾ ಕಡಲೆಕಾಯಿ ಮಾರಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಹಾಡು ಹೇಳಿಕೊಂಡು ತಾನು ತಂದಿರುವ ಕಡಲೆಕಾಯಿಯನ್ನು ಮಾರಾಟ ಮಾಡಿದ್ದಾನೆ. ಅವನ ಹಾಡು ನೆಟ್ಟಿಗರ ಗಮನ ಸೆಳೆದಿದೆ. ಬೂಬನ್ ಬಡ್ಯಾಕರ್ ಎನ್ನುವ ವ್ಯಕ್ತಿ ಬರಿಗಾಲಿನಲ್ಲಿ ಸೈಕಲ್ ತುಳಿದುಕೊಂಡು ಮನೆಮನೆಗೆ ತೆರಳಿ ಕಡಲೆಕಾಯಿ ಮಾರುತ್ತಾನೆ. ಹೀಗೆ ಕಡಲೆಕಾಯಿ ಮಾರುವ ವೇಳೆ ಕಚ್ಚಾ ಬಾದಮ್ ಹಾಡನ್ನು ಹಾಡುತ್ತಾನೆ. ಈತನ ಹಾಡು ಕೇಳಿಯೆ ಜನ ಕಳೆದುಹೋಗುತ್ತಾರೆ. ಬಬೂನ್ ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಅವರ ಕಚ್ಚಾ ಬಾದಾಮ್ ಹಾಡಿಗೆ ಮ್ಯಾಶ್ ಅಪ್ಗಳನ್ನು ಮಾಡಿ ಹಂಚಿಕೊಂಡಿದ್ದಾರೆ. ಯುಟ್ಯೂಬ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 11 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು , 69 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಬೂಬನ್ ತಮ್ಮ ಕಚ್ಚಾ ಬಾದಾಮ್ ಹಾಡಿಗಾಗಿ ಪೊಲೀಸ್ ಠಾಣೆ ಮೆಟ್ಟಲನ್ನೂ ಏರಿದ್ದರು. ಹೌದು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಡು ವೈರಲ್ ಆಗಿ ಲಕ್ಷಾಂತರ ಜನ ವೀಕ್ಷಿಸಿದರೂ ತನಗೆ ಯಾವುದೇ ಆದಾಯ ಬಂದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ ಹಾಡಿನಿಂದ ಹಲವರು ಹಣಗಳಿಸುತ್ತಿದ್ದಾರೆ. ನನಗೂ ನನ್ನ ಹಾಡಿನಿಂದ ಬಂದ ಲಾಭ ಸಿಗಬೇಕು ಎಂದು ಪೋಲೀಸರಿಗೆ ದೂರನ್ನೂ ನೀಡಿದ್ದರು. ಈ ಬಗ್ಗೆ ಅವರು ಪೋಲೀಸರಿಗೆ ದೂರು ನೀಡಿದ ನಂತರ ನನಗೆ ಹಲವು ಬೆದರಿಕೆ ಕರೆಗಳೂ ಬಂದಿವೆ. ಅದೆಲ್ಲವನ್ನೂ ನಾನು ಎದುರಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:
Goldfish: ಗೋಲ್ಡ್ ಫಿಶ್ಗಳಿಗೆ ವಾಹನ ಚಲಾಯಿಸುವ ತರಬೇತಿ ನೀಡಿದ ವಿಜ್ಞಾನಿಗಳು